Live Long Life: ಜೀವನದಲ್ಲಿ ದೀರ್ಘ ಕಾಲ ಬದುಕುವ ಆಸೆಯೇ? ಈ ತಪ್ಪುಗಳನ್ನು ಮಾಡ್ಬೇಡಿ

Tips To Live Long Life: ಗರುಡ ಪುರಾಣದಲ್ಲಿ ವಿಷ್ಣು ದೇವ ಹಾಗೂ ಆವು ವಿಷ್ಣುವಿನ ವಾಹನ ಗರುಡನ ನಡುವೆ ನಡೆಯುವ ಸಂವಾದದ ವರ್ಣನೆ ಇದೆ. ಇದರಲ್ಲಿ ಜೀವನ ಹಾಗೂ ಮೃತ್ಯುವಿನ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. 

Tips To Live Long Life: ಗರುಡ ಪುರಾಣದಲ್ಲಿ ವಿಷ್ಣು ದೇವ ಹಾಗೂ ಆವು ವಿಷ್ಣುವಿನ ವಾಹನ ಗರುಡನ ನಡುವೆ ನಡೆಯುವ ಸಂವಾದದ ವರ್ಣನೆ ಇದೆ. ಇದರಲ್ಲಿ ಜೀವನ ಹಾಗೂ ಮೃತ್ಯುವಿನ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ. ಇಂದಿನ ಸಂಚಿಕೆಯಲ್ಲಿ ನಾವು ಗರುಡ ಪುರಾಣದ ಪ್ರಕಾರ  ಯಾವ ಕೆಲಸಗಳನ್ನು ಮಾಡಿದರೆ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Perl Disadvantages: ಈ ರಾಶಿಗಳ ಜನರು ಮರೆತೂ ಕೂಡ ಮುತ್ತನ್ನು ಧರಿಸಬಾರದು

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಸನಾತನ ಧರ್ಮದ ಒಟ್ಟು 18 ಪುರಾಣಗಳಲ್ಲಿ ಗರುಡ ಪುರಾಣಕ್ಕೆ ತನ್ನದೇ ಆದ ಮಹತ್ವವಿದೆ. ಗರುಡ ಪುರಾಣದಲ್ಲಿ ಮೃತ್ಯು ಹಾಗೂ ಮೃತ್ಯುವಿನ ನಂತರ ಏನಾಗುತ್ತದೆ ಎಂಬುದರ ಕುರಿತು ಸುದೀರ್ಘ ವರ್ಣನೆಯನ್ನು ನೀಡಲಾಗಿದೆ. ಇದೇ ಕಾರಣದಿಂದ ಯಾವುದೇ ಓರ್ವ ವ್ಯಕ್ತಿ ಮೃತಪಟ್ಟ ಬಳಿಕ ಗರುಡ ಪುರಾಣ ಪಠಿಸಬೇಕು ಎನ್ನಲಾಗುತ್ತದೆ. ಆದರೆ, ಕೇವಲ ಮೃತ್ಯುವಿನ ಬಳಿಕ ಅಷ್ಟೇ ಅಲ್ಲ, ಮಾನವನ ಜೀವಿತಾವಧಿಯ ಹಲವು ಸಂಗತಿಗಳ ಕುರಿತು ಗರುಡ ಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಈ ಪುರಾಣದಲ್ಲಿ ಮನುಷ್ಯ ಮಾಡುವ ಕೆಲ ತಪ್ಪುಗಳು ಮತ್ತು ಅವುಗಳಿಂದ ಅವನ ಜೀವಿತಾವಧಿ ಹೇಗೆ ಕಡಿಮೆಯಾಗುತ್ತದೆ ಎಂಬುದನ್ನೂ ಕೂಡ ಹೇಳಲಾಗಿದೆ.  

2 /5

2. ಧರ್ಮಗ್ರಂಥಗಳಿಂದ ಹಿಡಿದು ವೈದ್ಯರವರೆಗೆ, ರಾತ್ರಿ ಬೇಗನೆ ಮಲಗುವುದು ಮತ್ತು ಬೆಳಿಗ್ಗೆ ಬೇಗನೆ ಎದ್ದೇಳುವುದನ್ನು ಒತ್ತಿಹೇಳಲಾಗಿದೆ. ಇದರಿಂದ ದಿನವಿಡೀ ತಾಜಾತನದ ಅನುಭವ ಇರುತ್ತದೆ. ಅದರೂ ಕೂಡ, ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರು ರಾತ್ರಿ ತಡವಾಗಿ ಮಲಗುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳುತ್ತಾರೆ. ಆದರೆ ಈ ಅಭ್ಯಾಸ ತಪ್ಪು. ಹೀಗೆ ಮಾಡುವುದರಿಂದ ಅನೇಕ ರೋಗಗಳು ಬರಬಹುದು. ಗರುಡ ಪುರಾಣದಲ್ಲೂ ಬ್ರಹ್ಮ ಮುಹೂರ್ತದಲ್ಲಿ ಏಳುವುದು ಯಾವಾಗಲು ಶ್ರೇಯಸ್ಕರ ಎಂದು ಹೇಳಲಾಗಿದೆ.  

3 /5

3. ಮೊಸರು ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಹಾರದಲ್ಲಿ ಮೊಸರು ಬಳಸುವುದರ ಬಗ್ಗೆ ವೈದ್ಯರು ಕೂಡ ಹೆಚ್ಚಾಗಿ ಮಾತನಾಡುತ್ತಾರೆ. ಇದರಿಂದ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಆದಾಗ್ಯೂ, ಮೊಸರನ್ನು ರಾತ್ರಿಯಲ್ಲಿ ಸೇವಿಸಬಾರದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುತ್ತವೆ.  

4 /5

4. ನೆರೆಹೊರೆಯವರು, ಸ್ನೇಹಿತ ಅಥವಾ ಸಂಬಂಧಿಕರು ಸತ್ತಾಗ, ಜನರು ಸ್ಮಶಾನದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಮೃತದೇಹ ಸುಡುವುದರಿಂದ ಹಲವು ಬಗೆಯ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬಿಡುಗಡೆಯಾಗಿ, ಗಾಳಿಯಲ್ಲಿ ಬೆರೆತು ದೇಹ ಸೇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ, ಮನೆಗೆ ಬಂದು ತಕ್ಷಣ ಸ್ನಾನ ಮಾಡಬೇಕು.  

5 /5

5. ಅನೇಕ ಜನರು ನಾನ್ ವೆಜ್ ಅನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಎಷ್ಟೋ ಸಲ ನಾನ್ ವೆಜ್ ತಿಂದ ನಂತರ ಫ್ರಿಜ್ ನಲ್ಲಿಟ್ಟು ಮರುದಿನ ತಿನ್ನುತ್ತಾರೆ. ಆದರೆ, ಹಳಸಿದ ಮಾಂಸಾಹಾರವನ್ನು ಆರೋಗ್ಯಕರವೆಂದು ಪರಿಗಣಿಸಲಾಗುವುದಿಲ್ಲ. ಇದು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು.