Health Tips: ಈ ಆಹಾರಗಳೊಂದಿಗೆ ಮೂಲಂಗಿ ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ

Foods to avoid with radish: ಮೂಲಂಗಿ ಆರೋಗ್ಯದ ಗಣಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಮೂಲಂಗಿಯನ್ನು ಕೆಲವು ಆಹಾರಗಳ ಜೊತೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. 

Foods to avoid with radish: ಮೂಲಂಗಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ, ಸಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ಖನಿಜಗಳು ಕಂಡು ಬರುತ್ತವೆ. ಹಾಗಾಗಿಯೇ, ಇದನ್ನು ಪೌಷ್ಟಿಕಾಂಶದ ಗಣಿ ಎಂದು ಹೇಳಲಾಗುತ್ತದೆ. ಆದರೆ, ಮೂಲಂಗಿಯನ್ನು ಕೆಲವು ಆಹಾರಗಳ ಜೊತೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಮೂಲಂಗಿಯನ್ನು ಯಾವ ಆಹಾರಗಳೊಂದಿಗೆ ಸೇವಿಸಬಾರದು ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪೌಷ್ಟಿಕಾಂಶದ ಗಣಿ ಮೂಲಂಗಿ: ಹಲವು ಪೋಷಕಾಂಶಗಳನ್ನು ಹೊಂದಿರುವ ಮೂಲಂಗಿಯು ಮೂಲವ್ಯಾದಿ ಸೇರಿದಂತೆ ಹಲವು ರೋಗಗಳಿಗೆ ಒಳ್ಳೆಯ ಮದ್ದು. ಆದರೆ, ಮೂಲಂಗಿಯನ್ನು ಕೆಲವು ಆಹಾರಗಳ ಜೊತೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಮೂಲಂಗಿಯನ್ನು ಯಾವ ಆಹಾರಗಳೊಂದಿಗೆ ಸೇವಿಸಬಾರದು ಎಂದು ತಿಳಿಯಿರಿ.

2 /5

ಹಾಲಿನೊಂದಿಗೆ ಮೂಲಂಗಿಯನ್ನು ಎಂದೂ ಸೇವಿಸಬಾರದು: ಆರೋಗ್ಯ ತಜ್ಞರ ಪ್ರಕಾರ, ಹಾಲಿನೊಂದಿಗೆ ಮೂಲಂಗಿಯನ್ನು ಎಂದೂ ಸೇವಿಸಬಾರದು. ಏಕೆಂದರೆ, ಹಾಲು ಮತ್ತು ಮೂಲಂಗಿಯನ್ನು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

3 /5

ಸೌತೆ ಕಾಯಿ ಮತ್ತು ಮೂಲಂಗಿಯನ್ನು ಒಟ್ಟಿಗೆ ತಿನ್ನಬಾರದು:  ನಮ್ಮಲ್ಲಿ ಹಲವರು ಸೌತೆ ಕಾಯಿ ಮತ್ತು ಮೂಲಂಗಿಯನ್ನು ಸಲಾಡ್ ರೂಪದಲ್ಲಿ ಒಟ್ಟಿಗೆ ತಿನ್ನುತ್ತಾರೆ. ಆದರೆ, ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಾಸ್ತವವಾಗಿ ಸೌತೆಕಾಯಿಯು ಆಸ್ಕೋರ್ಬೇಟ್ ಅನ್ನು ಹೊಂದಿರುತ್ತದೆ, ಇದು ವಿಟಮಿನ್ ಸಿ ಅನ್ನು ಹೀರಿಕೊಳ್ಳುತ್ತದೆ. ಅದಕ್ಕಾಗಿಯೇ ಸೌತೆಕಾಯಿಯನ್ನು ಮೂಲಂಗಿಯೊಂದಿಗೆ ತಿನ್ನಬಾರದು.

4 /5

ಕಿತ್ತಳೆಹಣ್ಣಿನ ಸೇವನೆ ಬಳಿಕ ಮೂಲಂಗಿ:  ಕೆಲವರು ಮೂಲಂಗಿ ಸೇವಿಸಿದ ಬಳಿಕ ಕಿತ್ತಳೆ ಹಣ್ಣು ಇದ್ದರೆ ಅದನ್ನೂ ತಿನ್ನುತ್ತಾರೆ. ಆದರೆ,  ಕಿತ್ತಳೆ ಮತ್ತು ಮೂಲಂಗಿಯನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.

5 /5

ಚಹಾದೊಂದಿಗೆ ಮೂಲಂಗಿ: ವೈದ್ಯರ ಪ್ರಕಾರ, ಚಹಾ ಮತ್ತು ಮೂಲಂಗಿಯನ್ನು ಒಟ್ಟಿಗೆ ಸೇವಿಸಬಾರದು. ಮೂಲಂಗಿಯು ಸ್ವಭಾವತಃ ತಂಪಾಗಿರುತ್ತದೆ. ಚಹಾವು ಉಷ್ಣತೆಯ ಸ್ವಾಭಾವದ್ದಾಗಿದೆ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಅಸಿಡಿಟಿ, ಮಲಬದ್ದತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.