ಬಾಳೆಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನ ತಿಳಿದರೆ ದಂಗಾಗುವಿರಿ

Benefits of Banana Peel : ಸಾಮಾನ್ಯವಾಗಿ ಎಲ್ಲರೂ ಹೆಚ್ಚಾಗಿ ಬಾಳೆಹಣ್ಣು ಹೆಚ್ಚಾಗಿ ಸೇವಿಸುತ್ತಾರೆ. ಬಾಳೆಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಮತ್ತು ಇದು ಅತಿಸಾರದಲ್ಲೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
 

ನವದೆಹಲಿ: Benefits of Banana Peel  : ನಾವು ಬಾಳೆಹಣ್ಣು ತಿನ್ನುವಾಗ  ಸಿಪ್ಪೆಯನ್ನು ಕಸದ ಡಬ್ಬಕ್ಕೆ ಎಸೆಯುತ್ತೇವೆ. ಆದರೆ, ಬಾಳೆಹಣ್ಣಿನ ಸಿಪ್ಪೆಯು ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಬಾಳೆಹಣ್ಣಿನ ಸಿಪ್ಪೆಯಲ್ಲಿ ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಬಿ -6, ಬಿ -12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಬಾಳೆಹಣ್ಣಿನ ಸಿಪ್ಪೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಹಲ್ಲುಗಳನ್ನು ಬಿಳಿಯಾಗಿಡಲು ಸಹಾಯ ಮಾಡುತ್ತದೆ.  

2 /5

ಬಾಳೆಹಣ್ಣಿನ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖದ ಮೇಲೆ ಗುಳ್ಳೆಗಳಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಉಜ್ಜುತ್ತಾ ಬಂದರೆ ವಾರದೊಳಗೆ ಗುಳ್ಳೆಗಳು ಮಾಯವಾಗುತ್ತದೆ. ಅಲ್ಲದೆ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಫೀನಾಲಿಕ್ ಇದ್ದು, ಇದು ಆಂಟಿ ಮೈಕ್ರೋಬಿಯಲ್  ಗುಣಗಳಿಂದ ಕೂಡಿದೆ. 

3 /5

ಬಾಳೆಹಣ್ಣಿನ ಸಿಪ್ಪೆಯಲ್ಲಿ ನಾರಿನಂಶವಿದೆ. ನಿಯಮಿತವಾಗಿ ಇದನ್ನು ಸೇವಿಸಿದರೆ,  ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ,  ಮಲಬದ್ಧತೆ ಮತ್ತು ಅತಿಸಾರದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

4 /5

ಅಧ್ಯಯನದ ಪ್ರಕಾರ, ಬಾಳೆಹಣ್ಣಿನ ಸಿಪ್ಪೆಯಲ್ಲಿ ಬಯೋ ಆಕ್ಟಿವ್ ಕಾಂಪೌಂಡ್ ಇರುತ್ತದೆ.  ಕ್ಯಾರೊಟಿನಾಯ್ದ ಗಳು  ಮತ್ತು ಪಾಲಿಫಿನಾಲಫ್ ಅಂಶವನ್ನು ಕೂಡಾ ಇದು ಹೊಂದಿರುತ್ತದೆ.  ಇದು ಹೊಟ್ಟೆ ನೋವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.  

5 /5

ತಜ್ಞರ ಪ್ರಕಾರ,  ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಗಳನ್ನು ಒಂದು ನಿಮಿಷ ಉಜ್ಜಿದರೆ, ಅವು ಹೊಳೆಯಲು ಆರಂಭಿಸುತ್ತದೆ. ಇದಕ್ಕೆ ಕಾರಣವೆಂದರೆ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಈ ಕಾರಣದಿಂದ ಬಾಳೆ ಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜಿದರೆ  ಹಲ್ಲುಗಳು ಹೊಳೆಯಲು  ಆರಂಭಿಸುತ್ತದೆ.