Ketu Gochar 2023: ನೂತನ ವರ್ಷದಲ್ಲಿನ ಕೇತು ಗೋಚರ ಈ ಜನರ ಜೀವನದಲ್ಲಿ ಭಾರಿ ಧನಲಾಭ ತರಲಿದೆ

Ketu Gochar Impact 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೇತು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತದೆ. ಅಷ್ಟೇ ಅಲ್ಲ, ಕೇತು ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು 18 ತಿಂಗಳುಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ.

Ketu Gochar Impact 2023: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೇತು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತದೆ. ಅಷ್ಟೇ ಅಲ್ಲ, ಕೇತು ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು 18 ತಿಂಗಳುಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಕೇತುವನ್ನು ಒಂದು ಮಾಯಾವಿ ಗ್ರಹ ಎಂದು ಕರೆಯಲಾಗುತ್ತದೆ. 2022 ರ, ಏಪ್ರಿಲ್ನಲ್ಲಿ, ಕೇತುವು ಕನ್ಯಾರಾಶಿಗೆ ಪ್ರವೇಶಿಸಿದೆ. ಇದೇ ವೇಳೆ, 18 ತಿಂಗಳ ನಂತರ, ಅಂದರೆ ಅಕ್ಟೋಬರ್ 2023 ರಲ್ಲಿ ಕೇತುವು ಕನ್ಯಾರಾಶಿಯನ್ನು ತೊರೆದು ತುಲಾವನ್ನು ಪ್ರವೇಶಿಸಲಿದೆ. ಹಲವು ರಾಶಿಗಳ ಜನರಿಗೆ ಈ ಕೇತು ಸಂಕ್ರಮಣದ ಲಾಭ ಸಿಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Sleeping Style: ವ್ಯಕ್ತಿಯ ಮಲಗುವ ಶೈಲಿಯಿಂದ ಆತನ ಸ್ವಭಾವ-ಭವಿಷ್ಯ ಈ ರೀತಿ ತಿಳಿದುಕೊಳ್ಳಿ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಮಕರ ರಾಶಿ- 2023 ರ ಹೊಸ ವರ್ಷದಲ್ಲಿ, ಮಕರ ರಾಶಿಯ ಜನರ ಪ್ರಯತ್ನದಲ್ಲಿ ಹೆಚ್ಚಳ ಕಂಡುಬರಲಿದೆ. ಈ ಅವಧಿಯಲ್ಲಿ ನೀವು ಶುಭ ಕಾರ್ಯಗಳನ್ನು ಆಯೋಜಿಸಬಹುದು. ಜೊತೆಗೆ ನೀವು ವಿದೇಶ ಪ್ರವಾಸವನ್ನೂ ಕೂಡ ಮಾಡಬಹುದು. ವಿದೇಶಕ್ಕೆ ಹೋಗಲು ಬಯಸುವವರು ಈ ಅವಧಿಯಲ್ಲಿ ತಮ್ಮ ಆಸೆಯನ್ನು ಪೂರೈಸಿಕೊಳ್ಳಬಹುದು. ಆದರೆ, ಇದೆಲ್ಲವೂ ಕೂಡ ನಿಮಗೆ ಸ್ವಲ್ಪ ವೆಚ್ಚವನ್ನು ತರಲಿದೆ.  

2 /4

2. ಧನು ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೇತುವಿನ ರಾಶಿ ಪರಿವರ್ತನೆ ಧನು ರಾಶಿಯ ಜನರ ಸಂತೋಷದಲ್ಲಿ ಹೆಚ್ಚಳವನ್ನುಂಟು ಮಾಡಲಿದೆ. ಈ ಅವಧಿಯಲ್ಲಿ ನೀವು ವಾಹನ ಅಥವಾ ಭೂಮಿಯನ್ನು ಖರೀದಿಸಬಹುದು ಅಥವಾ ಖರೀದಿಸಲು ಯೋಜಿಸಬಹುದು. ಈ ಅವಧಿಯಲ್ಲಿ ನಿಮ್ಮ ಭೌತಿಕ ಸೌಕರ್ಯಗಳಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಘನತೆ, ಗೌರವ ಮತ್ತು ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಆರ್ಥಿಕ ಲಾಭ ಕೂಡ ಸಾಮಾನ್ಯ ಇರುವ ಸಾಧ್ಯತೆ ಇದೆ.  

3 /4

3. ಸಿಂಹ ರಾಶಿ- 2023 ರಲ್ಲಿ, ಸಿಂಹ ರಾಶಿಯವರಿಗೆ ಕೇತುವಿನ ಗೋಚರ ಪ್ರಯೋಜನಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಅನಿರೀಕ್ಷಿತ ಯಶಸ್ಸು ಸಿಗಲಿದೆ. ಯಾವ ಕೆಲಸದಲ್ಲಿ ಕೈ ಹಾಕಿದರೂ ಆ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕೇತು ತುಲಾರಾಶಿಗೆ ಪ್ರವೇಶಿಸಿದಾಗ, ಕಾರ್ಯ  ಕ್ಷೇತ್ರದಲ್ಲಿ ನಿಮಗೆ ನಿರೀಕ್ಷಿತ ಫಲಿತಾಂಶಗಳು ಸಿಗಲಿವೆ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಆದರೂ ಕೂಡ ಈ ಅವಧಿಯಲ್ಲಿ ನಿಮಗೆ ಕೆಲ ದೈಹಿಕ ಅಸ್ವಸ್ಥತೆಗಳು ಎದುರಾಗಬಹುದು ಮತ್ತು ಇದು ಸ್ವಲ್ಪ ಉದ್ವಿಗ್ನತೆಯನ್ನು ತರಲಿದೆ.  

4 /4

4. ವೃಷಭ ರಾಶಿ- 2023ರಲ್ಲಿ ವೃಷಭ ರಾಶಿಯವರಿಗೆ ಕೇತುವಿನ ತುಲಾ ಪ್ರವೇಶದಿಂದ ಹೆಚ್ಚಿನ ಲಾಭ ಸಿಗಲಿದೆ. ಈ ಅವಧಿಯಲ್ಲಿ, ವೃಷಭ ರಾಶಿಯ ಜಾತಕದವರಿಗೆ ಪರಿಶ್ರಮ ಫಲ ನೀಡಲಿದೆ. ಈ ಕಠಿಣ ಪರಿಶ್ರಮದಿಂದ ನೀವು ಸಾಕಷ್ಟು ಹಣವನ್ನು ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಮಾಡಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.  ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೀಗಿರುವಾಗ ನೀವು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬಹುದು. ಇದಲ್ಲದೆ, ಕೆಲಸ ಅಥವಾ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲ ಶುಭ ಸಮಾಚಾರಗಳು ನಿಮಗೆ ಪ್ರಾಪ್ತಿಯಾಗಲಿವೆ.