Keerthy Suresh : ಕೀರ್ತಿ ಸುರೇಶ್‌ ಕೈ ಹಿಡಿದ ಆಂಟೋನಿ ತಟ್ಟಿಲ್‌ ಯಾರು..? ಕೋಟಿ ಕುಳ ಗುರು.. ಬ್ಯಾಗ್ರೌಂಡ್‌ ಕೇಳಿದ್ರೆ ಭಯ ಬೀಳ್ತಿರಾ..

Keerthy Suresh Antony thattil : ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತಮ್ಮ ಬಾಲ್ಯದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ಅದೆಷ್ಟೋ ಜನರಿಗೆ ನಟಿಯ ಪತಿಯ ಬಗ್ಗೆ ಗೊತ್ತಿಲ್ಲ. ಹೀಗಾಗಿ ಹೆಚ್ಚಿನ ಜನರು ಆಂಟೋನಿ ಯಾರು.. ಯಾರು..? ಅಂತ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದಾರೆ.. ವಿವರ ಇಲ್ಲಿದೆ ನೋಡಿ.. 
 

1 /9

ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತಮ್ಮ ಬಾಲ್ಯದ ಗೆಳೆಯ, ದುಬೈ ಮೂಲದ ಉದ್ಯಮಿ ಆಂಟೋನಿ ತಟ್ಟಿಲ್ ಅವರನ್ನು ವಿವಾಹವಾದರು.   

2 /9

ಈ ಅದ್ದೂರಿ ಮದುವೆಯ ಫೊಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಸೇರಿದಂತೆ ನಟ-ನಟಿಯರು ವಿಶ್‌ ಮಾಡುತ್ತಿದ್ದಾರೆ.  

3 /9

ಇದೇ ವೇಳೆ ನಟಿ ಕೀರ್ತಿ ಸುರೇಶ್‌ ಅವರ ಅಭಿಮಾನಿಗಳ ತಲೆಯಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿದ್ದು, ಯಾರು ಈ ಆಂಟೋನಿ..? ಈ ಕುರಿತ ವಿವರ ಈ ಕೆಳಗಿದೆ ನೋಡಿ..  

4 /9

ಆಂಟೋನಿ ಥಟ್ಟಿಲ್ ದುಬೈ ಮೂಲದ ಉದ್ಯಮಿ. ಕೊಚ್ಚಿಯಲ್ಲಿ ಹಲವಾರು ರೆಸಾರ್ಟ್‌ಗಳನ್ನು ಹೊಂದಿದ್ದಾರೆ. ಚೆನ್ನೈನಲ್ಲಿ ಒಂದೆರಡು ಕಂಪನಿಗಳನ್ನು ಆಂಟೋನಿ ನಡೆಸುತಿದ್ದಾರೆ.  

5 /9

ಉದ್ಯಮ ಜಗತ್ತಿನಲ್ಲಿ ಉತ್ತಮ ಹೆಸರು ಮಾಡಿರುವ ಆಂಟೋನಿ ಪ್ರಚಾರವನ್ನು ಇಷ್ಟಪಡುವುದಿಲ್ಲವಂತೆ. ಹಾಗಾಗಿ ಸಾರ್ವಜನಿಕವಾಗಿ ಕೀರ್ತಿಯೊಂದಿಗೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.  

6 /9

ಕೀರ್ತಿ ಮತ್ತು ಆಂಟನಿ 15 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. 2008-09 ರ ಸುಮಾರಿಗೆ ಕಾಲೇಜ್‌ಗೆ ಹೋಗುತ್ತಿದ್ದಾಗ ಡೇಟಿಂಗ್ ಪ್ರಾರಂಭಿಸಿದರು ಎಂದು ವರದಿಯಾಗಿದೆ.  

7 /9

ಕೀರ್ತಿ ಮತ್ತು ಆಂಟನಿ ಅವರ ವಿವಾಹವು ಡಿಸೆಂಬರ್ 12 ರಂದು ಗೋವಾದಲ್ಲಿ ನೆರವೇರಿತು. ಮದುವೆಯಲ್ಲಿ ವಧು ಮತ್ತು ವರನ ಕುಟುಂಬಗಳು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು.  

8 /9

7ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಕೀರ್ತಿ ಸುರೇಶ್ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ.   

9 /9

ಕೀರ್ತಿ 2018 ರಲ್ಲಿ ಹಿರಿಯ ನಟಿ ಸಾವಿತ್ರಿಯ ಅವರ ಜೀವನಾಧಾರಿತ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.