Vastu Tips: ಆರ್ಥಿಕ ಸಮಸ್ಯೆಯಿಂದ ಹೊರಬರಲು ಈ 5 ವಸ್ತುಗಳನ್ನು ದೇವರ ಮನೆಯಲ್ಲಿಡಿ

ಹಲವು ಬಾರಿ ಕಷ್ಟ ಪಟ್ಟು ದುಡಿದರೂ, ಎಷ್ಟೇ ಹಣ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುವುದೇ ಇಲ್ಲ. ಇದಕ್ಕೆ ಹಲವರು ನಮ್ಮ ಅದೃಷ್ಟವೇ ಸರಿ ಇಲ್ಲ ಎಂದು ಬೇಸರಗೊಳ್ಳುತ್ತಾರೆ. ಆದರೆ ನೀವು ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಇಂತಹ ಸಮಸ್ಯೆಗಳಿಂದ ಹೊರಬರಬಹುದು ಎಂದು ನಿಮಗೆ ತಿಳಿದಿದೆಯೇ?

ನವದೆಹಲಿ: ನಿತ್ಯ ದೇವರನ್ನು ಪೂಜಿಸುವುದು ಕೇವಲ ಧಾರ್ಮಿಕ ನಿಯಮವಲ್ಲ. ಇದರಿಂದ ಮನಸ್ಸಿನಲ್ಲಿ ಶಾಂತಿ ಮೂಡುತ್ತದೆ. ಧರ್ಮಶಾಸ್ತ್ರದ ಜೊತೆಗೆ, ನೀವು ಜ್ಯೋತಿಷ್ಯವನ್ನು ಸಹ ನಂಬಿದರೆ, ನಿಯಮಿತವಾಗಿ ಪೂಜೆ ಮಾಡುವ ಮನೆಯಲ್ಲಿ ಶಾಂತಿ ಇರುತ್ತದೆ ಮತ್ತು ಆ ಜಾಗದಲ್ಲಿ ಎಂದಿಗೂ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಸಾಧ್ಯವಿಲ್ಲ.  ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿ ಕೂಡ ಅಂತಹ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಮನೆಯ ದೇವರ ಕೋಣೆ ಬಗ್ಗೆ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ಬಹಳ ಮುಖ್ಯ. ಈ 5 ವಸ್ತುಗಳನ್ನು ದೇವರ ಮನೆಯಲ್ಲಿಟ್ಟರೆ ಎಂತಹದ್ದೇ ಆರ್ಥಿಕ ಸಮಸ್ಯೆ ಇದ್ದರೂ ಅದರಿಂದ ಹೊರಬರಬಹುದು ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನಿಗೆ ನವಿಲು ಗರಿಗಳೆಂದರೆ ತುಂಬಾ ಪ್ರೀತಿ. ಹಾಗಾಗಿ ಇದನ್ನು ದೇವರ ಮನೆ ಅಥವಾ ಪೂಜಾ ಮಂದಿರದಲ್ಲಿ ಇಡುವುದನ್ನು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ನೀವು ನಿಮ್ಮ ಮನೆಯಲ್ಲಿರುವ ಪೂಜಾ ಕೋಣೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಕ್ಕಿ ಹರಿಯುತ್ತದೆ. ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ತಲೆದೂರುವುದಿಲ್ಲ. ಅಲ್ಲದೆ, ಧನಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

2 /5

ಪೂಜಾ ಮನೆಯಲ್ಲಿ ಗಂಗಾ ಜಲವನ್ನು ಇರಿಸುವುದನ್ನೂ ಕೂಡ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಮೂಲಕ ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಗಂಗಾ ಜಲವನ್ನು ದೇವಾಲಯದ ಈಶಾನ್ಯ ಭಾಗದಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ. ಮನೆಯಲ್ಲಿ ಗಂಗಾ ಜಲವನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಜೊತೆಗೆ ಅಂತಹ ಮನೆಯಲ್ಲಿ ಶಾಂತಿ, ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ. ಆದರೆ ಗಂಗಾ ಜಲವನ್ನು ಎಂದಿಗೂ ಕತ್ತಲೆಯ ಕೋಣೆಯಲ್ಲಿ ಅಥವಾ ಗಾಢ ಮೂಲೆಯಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ.

3 /5

ಲಕ್ಷ್ಮಿಯ (Lakshmi) ಸಂಕೇತವೆಂದು ಪರಿಗಣಿಸಲಾಗಿರುವುದರಿಂದ ಮನೆಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಶಂಖ ಇರುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ನೀವು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಶಂಖ ಇರಿಸಿ. ಮನೆಯಲ್ಲಿ ಶಂಖವನ್ನು ಇಡುವುದರಿಂದ, ಮನೆಯ ವಾತಾವರಣವು ಸಂತೋಷದಿಂದ ಮತ್ತು ಶಾಂತಿಯುತವಾಗಿ ಉಳಿಯುತ್ತದೆ, ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲಾಗುತ್ತದೆ. ಆದರೆ ಪೂಜಾ ಮನೆಯಲ್ಲಿ ಕೇವಲ ಒಂದು ಶಂಖವನ್ನು ಇಡಬೇಕು. ಒಂದಕ್ಕಿಂತ ಹೆಚ್ಚು ಶಂಖಗಳನ್ನು ಹೊಂದಿರುವುದು ಅಶುಭವೆಂದು ಪರಿಗಣಿಸಲಾಗಿದೆ.  ಇದನ್ನೂ ಓದಿ - Vinayaki Devi Temple: ಶ್ರೀಗಣೇಶನ ಸ್ತ್ರೀ ಅವತಾರ 'ವಿನಾಯಕಿ' ಬಗ್ಗೆ ನಿಮಗೆಷ್ಟು ತಿಳಿದಿದೆ?

4 /5

ಶಾಲಿಗ್ರಾಮ ವಿಷ್ಣುವಿನ ಒಂದು ರೂಪವಾಗಿದೆ. ಆದ್ದರಿಂದ ಶಾಲಿಗ್ರಾಮವನ್ನು ಪೂಜಿಸುವ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ, ಮನೆಯ ದೇವರ ಕೋಣೆಯಲ್ಲಿ ಶಾಲಿಗ್ರಾಮ್  ಇರಿಸಿ ಮತ್ತು ತುಳಸಿ ಎಲೆಗಳನ್ನು ನೀರಿನೊಂದಿಗೆ ಅದಕ್ಕೆ ಅರ್ಪಿಸಿ. ಇದರಿಂದಶ್ರೀಹರಿ ವಿಷ್ಣು ಸಂತಸಗೊಂಡು ಲಕ್ಷ್ಮಿ ದೇವಿಯೂ ಆಶೀರ್ವದಿಸಿದ್ದಾಳೆ ಎಂದು ನಂಬಲಾಗಿದೆ. ಶಾಲಿಗ್ರಾಮ್ ಅನ್ನು ಸಾತ್ವಿಕದ ಸಂಕೇತವೆಂದು ಪರಿಗಣಿಸಲಾಗಿದೆ. ನೆನಪಿಡಿ: ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇರಿಸುವ ಮೊದಲು ನಿಮ್ಮ ಮನೆಯ ಹಿರಿಯ ಸಲಹೆ ಪಡೆಯಿರಿ. ಇದನ್ನೂ ಓದಿ- Benefits of Ghee: ತುಪ್ಪದ ತಪ್ಪು ಕಲ್ಪನೆ ಬಿಟ್ಟು ಬಿಡಿ..! ತುಪ್ಪ ತಿಂದರೆ ಏನು ಲಾಭ.? ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು..ತಿಳಿಯಿರಿ

5 /5

ಪೂಜೆಯ ಸಮಯದಲ್ಲಿ ಹಸುವಿನ ಶುದ್ಧ ದೇಸಿ ತುಪ್ಪ (Ghee) ವನ್ನು ಬಳಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೆಂದರೆ ಹಿಂದೂ ಧರ್ಮದಲ್ಲಿ ಹಸುವನ್ನು ತಾಯಿಯಂತೆ ಪೂಜ್ಯರೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮನೆಯ ದೇವಾಲಯದಲ್ಲಿ ಯಾವಾಗಲೂ ಹಸುವಿನ ತುಪ್ಪ ಇರಬೇಕು. ಇದರಿಂದ ದೇವ, ದೇವತೆಗಳು ಸಂತುಷ್ಟಗೊಂಡು ನಿಮ್ಮನ್ನು ಆಶೀರ್ವದಿಸುತ್ತಾರೆ. ನಿಮ್ಮ ಮನೆಯಲ್ಲಿ ಎಂದಿಗೂ ಆರ್ಥಿಕ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಹೇಳಲಾಗುತ್ತದೆ. (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ.)