ಮಿಸೆಸ್​ ಇಂಡಿಯಾ ಪಟ್ಟ ಅಲಂಕರಿಸಿದ ಕರ್ನಾಟಕದ ಗೊಂಬೆ ನಿವೇದಿತಾ ಗೌಡ

ಕರ್ನಾಟಕದ ಬೊಂಬೆ ಎಂದೇ ಖ್ಯಾತಿ ಗಳಿಸಿದ್ದ ನಿವೇದಿತಾ ಗೌಡ ಮಿಸೆಸ್​ ಇಂಡಿಯಾ 2022 ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ರ್ಯಾಪರ್‌ ಚಂದನ್‌ ಶೆಟ್ಟಿ ಪತ್ನಿಯಾಗಿರುವ ನಿವೇದಿತಾ ಗೌಡ ತಮ್ಮ ಮಾತುಗಳಿಂದಲೇ ಜನಮನ ಗೆದ್ದಿದ್ದಾರೆ. ಇನ್ನು ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ. 
 

1 /5

ಮಿಸೆಸ್​ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸೋದು ಸುಲಭದ ಮಾತಲ್ಲ. ನಿವೇದಿತಾ ಗೌಡ ಸಹ ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದರು. ಇದಕ್ಕೆ ಪ್ರತಿಫಲ ಎಂಬಂತೆ ಇದೀಗ ನಿವಿ ಮಿಸೆಸ್‌ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. 

2 /5

ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.   

3 /5

ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ಪಟ್ಟ ಅಲಂಕರಿಸಿರುವ ರ್ಯಾಪರ್‌ ಚಂದನ್‌ ಶೆಟ್ಟಿಯವರ ಪತ್ನಿ ನಿವೇದಿತಾ ಗೌಡ. 

4 /5

ನಿವೇದಿತಾ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ಅವರ ಡ್ರೆಸ್ಸಿಂಗ್‌ ಸ್ಟೈಲ್‌, ಟಾಕಿಂಗ್‌ ಶೈಲಿಯಲ್ಲಿ ಜನಮನ ಗೆದ್ದಿದ್ದಾರೆ. ಅವರು ಈಗಾಗಲೇ ಯೂಟ್ಯೂಬ್‌ ಚಾನೆಲ್‌ನ್ನು ಹೊಂದಿದ್ದು, ವಿಡಿಯೋಗಳನ್ನು ಅಪ್ಲೋಡ್‌ ಮಾಡುತ್ತಾ ಜನರೊಂದಿಗೆ ಹೆಚ್ಚು ಟಚ್‌ನಲ್ಲಿ ಇರುತ್ತಾರೆ.

5 /5

ಮಿಸೆಸ್​ ಇಂಡಿಯಾ ತಯಾರಿ ಬಗ್ಗೆ ನಿವೇದಿತಾ ಗೌಡ ಈ ಹಿಂದೆ ಮಾತನಾಡಿದ್ದರು. " ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದೀಗ ಅಂಥದ್ದೇ ಕನಸು ಕಂಡಿದ್ದೆ" ಎಂದಿದ್ದರು.