Bollywood actress Life : ಬಾಲಿವುಡ್‌ನಲ್ಲಿ ಟಾಪ್ ಹೀರೋಯಿನ್‌ಗಳು ಉದ್ಯಮಿಯನ್ನು ಮದುವೆಯಾಗಿ ಸೆಟಲ್ ಆಗುವ ಟ್ರೆಂಡ್ ಇದೆ. ಈ ಪ್ರಮುಖ ನಟಿ ಕೂಡ ಉದ್ಯಮಿಯೊಬ್ಬರನ್ನು ಮದುವೆಯಾಗಿ ಸಾವಿರ ಕನಸುಗಳೊಂದಿಗೆ ಹನಿಮೂನ್‌ಗೆ ಹೋಗಿದ್ದರು. ಆದರೆ ಅವಳು ನಿರೀಕ್ಷಿಸಿದ್ದೇ ಬೇರೆ... ಅಲ್ಲಿ ನಡೆದದ್ದೇ ಬೇರೆ..
ಎಲ್ಲರ ಜೀವನವೂ ಸುಂದರವಾಗಿರುವುದಿಲ್ಲ. ಎಲ್ಲರ ದಾಂಪತ್ಯವೂ ಚನ್ನಾಗಿರುವುದಿಲ್ಲ. ಎಲ್ಲವನ್ನೂ ಪಡೆಯಲು ಅದೃಷ್ಟವೂ ಬೇಕು. ಟಾಪ್ ನಟಿಯನ್ನ ಸ್ವಂತ ಪತಿಯೇ ಹರಾಜಿಗಿಟ್ಟ ಘಟನೆಯೊಂದು ಭಾರತೀಯ ಸಿನಿರಂಗದಲ್ಲಿ ನಡೆದಿದೆ.. ಯಾರು ಆ ಖ್ಯಾತ ನಟಿ..? ಅಂದು ನಡೆದ ಘಟನೆ ಏನು..? ಬನ್ನಿ ನೋಡೋಣ..
ಆ ನಟಿ ಬೇರೆ ಯಾರೂ ಅಲ್ಲ ಕರಿಷ್ಮಾ ಕಪೂರ್. ಕರಿಷ್ಮಾ ಒಂದು ಕಾಲದಲ್ಲಿ ಸ್ಟಾರ್ ನಾಯಕಿ. ಈಕೆಯ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಮದುವೆಯ ನಂತರ ಈ ಸುಂದರಿ ಬದುಕು ಮಾತ್ರ ಛಿದ್ರ ಛಿದ್ರವಾಗಿತ್ತು..
ಉದ್ಯಮಿಯನ್ನು ಮದುವೆಯಾದ ನಟಿ ಕಂಡ ಕನಸಿನ ಬದುಕು ಅವಳಿಗೆ ಸಿಗಲಿಲ್ಲ. ನಟಿ ತನ್ನ ದಾಂಪತ್ಯ ಜೀವನದಲ್ಲಿ ನರಕಯಾತನೆ ಅನುಭವಿಸಿದರು. ಯೋಚಿಸಲಾಗದಂತಂಹ ಅನೇಕ ಘಟನೆಗಳು ಆಕೆಯ ಜೀವನದಲ್ಲಿ ಸಂಭವಿಸಿತು. ಮದುವೆಯಾದ ಒಂದೇರಡು ದಿನದಲ್ಲಿಯೇ ತಾನು ಕೆಟ್ಟ ಮನುಷ್ಯನನ್ನು ಆರಿಸಿಕೊಂಡಿದ್ದಾಗಿ ಅರಿತುಕೊಂಡಳು.
ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ ನಾಯಕಿಯರಲ್ಲಿ ಕರಿಷ್ಮಾ ಕಪೂರ್ ಒಬ್ಬರು. ಅವರು ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಅವರ ಅಕ್ಕ. 90 ರ ದಶಕದಲ್ಲಿ ಕರಿಷ್ಮಾಗೆ ಬಾಲಿವುಡ್‌ನಲ್ಲಿ ಇನ್ನಿಲ್ಲದೆ ಕ್ರೇಜ್ ಇತ್ತು. ಈ ಬ್ಯೂಟಿ ಸಿನಿಮಾ ರಿಲೀಸ್ ಆದ್ರೆ ಸಾಕು.. ಪ್ರೇಕ್ಷಕರು ಥಿಯೇಟರ್ ಗಳತ್ತ ಓಡುತ್ತಿದ್ದರು.
ವರ್ಷಕ್ಕೆ ಕನಿಷ್ಠ ಐದರಿಂದ ಆರು ಚಿತ್ರಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ತುಂಬಾ ಬ್ಯುಸಿ ನಟಿಯರಲ್ಲಿ ಇವರೂ ಒಬ್ಬರು. ಸುಮಾರು ಒಂದು ದಶಕದಿಂದ ಬಾಲಿವುಡ್‌ನಲ್ಲಿ ಆಕೆಯ ವೇಗಕ್ಕೆ ಕಡಿವಾಣ ಹಾಕದವರೇ ಇರಲಿಲ್ಲ. ಅಷ್ಟು ಬೇಡಿಕೆಯಿತ್ತು ಈ ನಟಿಗೆ..
ಈ ಸುಂದರಿ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರನ್ನು 2003 ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ 11 ವರ್ಷಗಳ ನಂತರ ಅವರ ನಡುವಿನ ಜಗಳದಿಂದ ವಿಚ್ಛೇದನ ಪಡೆದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಈ ಸುಂದರಿ ತನ್ನ ಮಾಜಿ ಪತಿ ಬಗ್ಗೆ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದರು..
ಸಂಜಯ್ ಕಪೂರ್ ಒಳ್ಳೆಯ ವ್ಯಕ್ತಿಯಲ್ಲ. ನನ್ನ ತುಂಬಾ ಹಿಂಸಿಸಿದ್ದಾನೆ. ಹನಿಮೂನ್‌ಗೆ ಹೋದಾಗ ಅವನು ತನ್ನ ಸ್ನೇಹಿತರೊಂದಿಗೆ ರಾತ್ರಿ ಕಳೆಯಬೇಕೆಂದು ಒತ್ತಾಯಿಸಿದ್ದ. ಒಂದು ಹಂತದಲ್ಲಿ ನನ್ನನ್ನು ಹರಾಜಿಗೆ ಇಟ್ಟಿದ್ದ ಅಂತ ಕರಿಷ್ಮಾ ಹೇಳಿಕೊಂಡಿದ್ದಾಳೆ.
ನಾನು ಅಂತಹ ಕೆಲಸ ಮಾಡುವುದಿಲ್ಲ ಎಂದು ದೃಢವಾಗಿ ಹೇಳಿದೆ. ಇದಲ್ಲದೆ, ಆಕೆಯನ್ನು ಮದುವೆಯಾದ ನಂತರವೂ ಸಂಜಯ್ ತನ್ನ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದ. ಇದನ್ನೆಲ್ಲ ಸಹಿಸಲಾಗದೆ ಆತನಿಗೆ ವಿಚ್ಛೇದನ ನೀಡಿದ್ದೇನೆ ಎಂದು ಕರಿಷ್ಮಾ ಹೇಳಿದ್ದಾರೆ.