Kapil Dev Records: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ ಕಪಿಲ್ ದೇವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ನವದೆಹಲಿ: ಭಾರತೀಯ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ನಾಯಕ ಹಾಗೂ ಆಲ್ರೌಂಡರ್ಗಳಲ್ಲಿ ಪ್ರಮುಖರಾಗಿರುವ ಕಪಿಲ್ ದೇವ್ 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜನುಮ ದಿನದ ಸಂಭ್ರಮದಲ್ಲಿರುವ ಕಪಿಲ್ ದೇವ್ಗೆ ದಿಗ್ಗಜ ಆಟಗಾರರು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. 1959ರಲ್ಲಿ ಚಂಡೀಗಢದಲ್ಲಿ ಜನಿಸಿದ್ದ ಕಪಿಲ್ ದೇವ್ 1983ರಲ್ಲಿ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದರು.
ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಾಗ ಅವರ ವಯಸ್ಸು ಕೇವಲ 24 ವರ್ಷ. ಕ್ರಿಕೆಟ್ ಸಾಧನೆಗೆ 2002ರಲ್ಲಿ ‘ವಿಸ್ಡನ್ ಆಫ್ ದಿ ಸೆಂಚುರಿ’ ಎಂಬ ಕೀರ್ತಿಗೆ ಕಪಿಲ್ ದೇವ್ ಪಾತ್ರರಾಗಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ ಕಪಿಲ್ ದೇವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತ ತಂಡದ ಅತ್ಯುತ್ತಮ ನಾಯಕ ಕಪಿಲ್ ದೇವ್ ಅವರ ಬೆಸ್ಟ್ ಇನ್ನಿಂಗ್ಸ್ ಅಂಕಿಅಂಶದ ಬಗ್ಗೆ ಹೇಳುವುದಾದರೆ, ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದ್ನಲ್ಲಿ(1983) 83ಕ್ಕೆ 9 ವಿಕೆಟ್ ತೆಗೆದುಕೊಂಡಿದ್ದು. 18 ಟೆಸ್ಟ್ಗಳಲ್ಲಿ ಅವರು 75 ವಿಕೆಟ್ಗಳನ್ನು ಕಬಳಿಸಿದ್ದರು. ಇದು ಒಂದೇ ವರ್ಷದಲ್ಲಿ (1983) ಭಾರತೀಯ ಆಟಗಾರ ಗಳಿಸಿದ ಗರಿಷ್ಠ ವಿಕೆಟ್ ಸಾಧನೆಯಾಗಿದೆ. ಇದಲ್ಲದೆ ಅಹಮದಾಬಾದ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 135ಕ್ಕೆ 10 ವಿಕೆಟ್ ಗಳಿಸಿದ್ದು ಭಾರತೀಯ ನಾಯಕನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ (1983)ವಾಗಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 5,248 ರನ್ಗಳು ಮತ್ತು 434 ವಿಕೆಟ್ಗಳನ್ನು ಗಳಿಸಿರುವ ಕಪಿಲ್ ದೇವ್ ಅಂತಹ ಮೈಲಿಗಲ್ಲು ತಲುಪಿದ ಏಕೈಕ ಆಟಗಾರ. ಕಪಿಲ್ ದೇವ್ 1,000 ರನ್ ಗಳಿಸಿ 100 ವಿಕೆಟ್ ಪಡೆದಾಗ ಅವರಿಗೆ ಕೇವಲ 21 ವರ್ಷ 25 ದಿನಗಳಾಗಿತ್ತು.
1983ರ ವಿಶ್ವಕಪ್ನಲ್ಲಿ ನಾಟಿಂಗ್ಹ್ಯಾಮ್ನಲ್ಲಿ ಆಸ್ಟ್ರೇಲಿಯ ವಿರುದ್ಧ 43ಕ್ಕೆ 5 ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಈ ಮೂಲಕ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳನ್ನು ಪಡೆದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಕೆಟ್ನಲ್ಲಿ 3,000 ರನ್ ಮತ್ತು 250 ವಿಕೆಟ್ಗಳನ್ನು ಗಳಿಸಿದ ಮೊದಲ ವ್ಯಕ್ತಿ ಅನ್ನೋ ಹೆಗ್ಗಳಿಕೆ ಕಪಿಲ್ ದೇವ್ ಪಾತ್ರರಾಗಿದ್ದರು.
ಟೆಸ್ಟ್ ಇತಿಹಾಸದುದ್ದಕ್ಕೂ ಕೇವಲ ಒಬ್ಬ ಆಟಗಾರ (17 ಟೆಸ್ಟ್ಗಳಲ್ಲಿ 619 ರನ್ ಮತ್ತು 74 ವಿಕೆಟ್) ಒಂದೇ ಕ್ಯಾಲೆಂಡರ್ ವರ್ಷದಲ್ಲಿ (1979) 600 ರನ್ ಮತ್ತು 70 ವಿಕೆಟ್ಗಳನ್ನು ಗಳಿಸಿದ ಸಾಧನೆ ಕಪಿಲ್ ದೇವ್ ಹೆಸರಿನಲ್ಲಿದೆ. 1983ರಲ್ಲಿ ಅವರು ಪ್ರುಡೆನ್ಶಿಯಲ್ ವಿಶ್ವಕಪ್ ಗೆದ್ದಾಗ, ಈ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
1983ರ ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧ ಟನ್ಬ್ರಿಡ್ಜ್ ವೆಲ್ಸ್ನಲ್ಲಿ ಭರ್ಜರಿ ಶತಕ(ಅಜೇಯ 175) ಬಾರಿಸಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಕಪಿಲ್ ದೇವ್ ಪಾತ್ರರಾಗಿದ್ದರು. 1983ರ ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧ ಟನ್ಬ್ರಿಡ್ಜ್ ವೆಲ್ಸ್ನಲ್ಲಿ, 5ನೇ ಅಥವಾ ಅದಕ್ಕಿಂತ ಕಡಿಮೆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಗರಿಷ್ಟ ಸರಾಸರಿ ರನ್ರೇಟ್ನಲ್ಲಿ ಅಜೇಯ 175 ರನ್ ಗಳಿಸಿದ್ದು ಅವರ ಮತ್ತೊಂದು ಸಾಧನೆಯಾಗಿದೆ.