IPL ಆರಂಭಕ್ಕೂ ಮುನ್ನ ಬದಲಾಯ್ತು Royal Challengers Bangalore ಹೆಸರು: ಇನ್ಮುಂದೆ ಹೀಗಿರಲಿದೆ RCB ಪೂರ್ಣ ‘ಅರ್ಥ’!

IPL 2024, Royal Challengers Bangalore Rename: ಬಹುನಿರೀಕ್ಷಿತ ಐಪಿಎಲ್ 2024 17ನೇ ಸೀಸನ್ ಪ್ರಾರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈ ಬೆನ್ನಲೇ ಆರ್ ಸಿ ಬಿ ಫ್ರಾಂಚೈಸಿ ತಮ್ಮ ಅಭಿಮಾನಿ ಕೂಟಕ್ಕೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಪ್ರೋಮೋ ಬಿಡುಗಡೆ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಮಾರ್ಚ್ 22ರಿಂದ ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್’ನ ಮೊದ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ.

2 /7

ಅಂದಹಾಗೆ ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮೂಲಕ ಹೆಸರು ಬದಲಾವಣೆಯ ಬಹುದೊಡ್ಡ ಸುಳಿವು ನೀಡಿದೆ. ಮುಂಬರುವ RCB ಅನ್‌ ಬಾಕ್ಸ್ ಈವೆಂಟ್‌’ನಲ್ಲಿ ಸಂಭವನೀಯ ಹೆಸರು ಬದಲಾವಣೆ ಸಾಧ್ಯತೆ ಇದೆ. (ಫೋಟೋ ಕೃಪೆ- Royal Challengers Bangalore X)

3 /7

2014ರಲ್ಲಿ Bangalore ನಿಂದ Bengaluru ಎಂದು ಅಧಿಕೃತವಾಗಿ ಮರುನಾಮಕರಣಗೊಂಡಾಗಿನಿಂದ, ಆರ್ ಸಿ ಬಿ ಅಭಿಮಾನಿಗಳು ತಮ್ಮ ತಂಡದ ಹೆಸರನ್ನೂ ಸಹ Royal Challengers Bengaluru ಎಂದು ಕರೆಯಲು ಒತ್ತಡ ಹಾಕುತ್ತಿದ್ದರು. ಇದೀಗ ಫ್ರ್ಯಾಂಚೈಸ್ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ ಈ ವಿಷಯದಲ್ಲೇ ಬದಲಾವಣೆ ಮಾಡಲಾಗುತ್ತದೆಯೇ ಏನೋ ಎಂಬ ಅನುಮಾನ ಮೂಡಿದೆ.   (ಫೋಟೋ ಕೃಪೆ- Royal Challengers Bangalore X)

4 /7

RCB ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಹೆಸರು ಬದಲಾವಣೆಯ ಸುಳಿವು ನೀಡಿದ್ದಾರೆ. ಜೊತೆಗೆ ಸೋಮವಾರ (ಮಾರ್ಚ್ 19) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಅನ್ಬಾಕ್ಸ್ ಸಮಾರಂಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಘೋಷಿಸಲಾಗುತ್ತದೆ ಎಂದು ಹೇಳಲಾಗಿದೆ. 

5 /7

ಪ್ರೋಮೋ ವೀಡಿಯೊದಲ್ಲಿ, ರಿಷಬ್ ಶೆಟ್ಟಿ ಮೂರು ಕಂಬಳದ ಕೋಣಗಳ ಬಳಿ ಬರುತ್ತಿರುವುದನ್ನು ಕಾಣಬಹುದು. ಆ ಕೋಣಗಳ ಮೇಲೆ ಕೆಂಪು ಬಣ್ಣದ ಬಟ್ಟೆಯಲ್ಲಿ ‘Royal’, ‘Challengers’ ಮತ್ತು ‘Bangalore’ ಎಂದು ಬರೆಯಲಾಗಿದೆ, ಮೊದಲು ‘Royal’ ಮತ್ತು ‘Challengers’ ಎಂದು ಬರೆಯಲಾಗಿದ್ದ ಕೋಣಗಳ ಬಳಿ ಬಂದು ನೋಡಿದ ರಿಷಬ್, ‘Bangalore’ ಎಂದು ಬರೆದಿರುವ ಕೋಣವನ್ನು ಅಲ್ಲಿಂದ ಕರೆದುಕೊಂಡು ಹೋಗುವಂತೆ ಬೇರೊಬ್ಬರಿಗೆ ಸೂಚಿಸುತ್ತಾರೆ. ಆ ಕೋಣ ಅಲ್ಲಿಂದ ಹೋಗುತ್ತಿದ್ದಂತೆ, “ಅರ್ಥ ಆಯ್ತಾ?” ಎಂದು ಪ್ರೇಕ್ಷಕರಿಗೆ ರಿಷಬ್ ಪ್ರಶ್ನೆ ಹಾಕುತ್ತಾರೆ. (ಫೋಟೋ ಕೃಪೆ- Royal Challengers Bangalore X) ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ? Understood what Rishabh Shetty is trying to say? You’ll find out at RCB Unbox. Buy your tickets now. 🎟️@shetty_rishab #RCBUnbox #PlayBold #ArthaAytha #ನಮ್ಮRCB pic.twitter.com/sSrbf5HFmd — Royal Challengers Bangalore (@RCBTweets) March 13, 2024    

6 /7

ಇದು ಆರ್‌ ಸಿ ಬಿ ಅನ್‌ಬಾಕ್ಸ್ ಈವೆಂಟ್‌’ನ ಬಗ್ಗೆ ಅಭಿಮಾನಿಗಳನ್ನು ಉತ್ಸುಕಗೊಳಿಸಿದೆ. ಈ ಸಂದರ್ಭದಲ್ಲಿ ತಂಡದ ಹೊಸ ಜೆರ್ಸಿಯು ಬಹಿರಂಗಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

7 /7

ಕರ್ನಾಟಕದ ಹಲವು RCB ಅಭಿಮಾನಿಗಳು ಈ ಬದಲಾವಣೆ ಬಗ್ಗೆ ಉತ್ಸುಕರಾಗಿದ್ದು, ವಿಧ ವಿಧವಾದ ಕಾಮೆಂಟ್’ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಫ್ರಾಂಚೈಸಿಯ ಇತ್ತೀಚಿನ ಪೋಸ್ಟ್‌’ಗೆ X ನಲ್ಲಿ ಪ್ರತಿಕ್ರಿಯಿಸಿದ್ದು, ಬೆಂಗಳೂರಿನ ಪ್ರೊ ಕಬಡ್ಡಿ ತಂಡವು, "ಹೆಸರಾಗಲಿ Bengaluru ಉಸಿರಾಗಲಿ RCB" ಎಂದು ಕಾಮೆಂಟ್ ಮಾಡಿದೆ.