ಕೊಡಗಿಗೆ ಹತ್ತಿರವಾದ ಕಣ್ಣೂರು ಏರ್‌ಪೋರ್ಟ್‌ ವೈಶಿಷ್ಟ್ಯತೆಗಳೇನು ಗೊತ್ತೇ?

ಕೇರಳ ಮುಖ್ಯಮಂತ್ರಿ ಪಿಣರಾಹಿ ವಿಜಯನ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ ಪ್ರಭು ಅವರು ಮೊದಲ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. 

  • Dec 10, 2018, 13:44 PM IST

ಕೇರಳದಲ್ಲಿ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನವಾದ ಕಣ್ಣೂರು ವಿಮಾನ ನಿಲ್ದಾಣ ಭಾನುವಾರದಿಂದ ಕಾರ್ಯಾರಂಭಗೊಂಡಿದೆ. ಕೇರಳ ಮುಖ್ಯಮಂತ್ರಿ ಪಿಣರಾಹಿ ವಿಜಯನ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ ಪ್ರಭು ಅವರು ಮೊದಲ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ಈ ಮೂಲಕ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿರುವ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ. 

ಮಟ್ಟನ್ನೂರಿನ 2,062 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆ ಹೊಂದಿದೆ. 2,280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ವಿಮಾನ ನಿಲ್ದಾಣದ ಟರ್ವಿುನಲ್ ಕಟ್ಟಡ 97 ಸಾವಿರ ಚದರಡಿ ವಿಸ್ತೀರ್ಣ ಹೊಂದಿದ್ದು, 24 ಚೆಕ್‌ ಇನ್‌ ಕೌಂಟರ್‌ಗಳಿವೆ. ವಿಮಾನ ನಿಲ್ದಾಣದ ಒಳಾಂಗಣವನ್ನು ದೊಡ್ಡ ಚಿತ್ರ ಪಟಗಳಿಂದ ಅಲಂಕರಿಸಲಾಗಿದ್ದು, ಕೇರಳದ ಸಂಸ್ಕೃತಿ ಜೊತೆಜೊತೆಗೆ ಕರ್ನಾಟಕದ ಪ್ರಸಿದ್ಧ ಯಕ್ಷಗಾನ ಕಲೆಯ ಚಿತ್ರಪಟಗಳಿಗೂ ಸ್ಥಾನ ನೀಡಲಾಗಿದೆ. ಅಷ್ಟೇ ಅಲ್ಲದೆ, ಕೊಡಗಿನ ವಿರಾಜಪೇಟೆಯಿಂದ ಕೇವಲ 58 ಕಿ.ಮೀ. ದೂರದಲ್ಲಿರುವುದರಿಂದ ವಿದೇಶಿ ವ್ಯಾಪಾರಕ್ಕೆ ಹೆಚ್ಚು ಅನುಕೂಲವಾಗಲಿದೆ. 
 

1 /10

2 /10

3 /10

4 /10

5 /10

6 /10

7 /10

8 /10

9 /10

10 /10