Actors React To Election Results: ವಿಧಾನಸಭೆ ಚುನಾವಣೆ ಫಲಿತಾಂಶ ಕಂಡು ಸ್ಯಾಂಡಲ್ವುಡ್‌ ಸ್ಟಾರ್ಸ್‌ ಪ್ರತಿಕ್ರಿಯೆ ಹೇಗಿತ್ತು ? ಇಲ್ಲಿದೆ ನೋಡಿ..

Actors React To Election Results:ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ರಾಜಕೀಯ ನಾಯಕರಿಗೆ ಮಾತ್ರವಲ್ಲದೇ ಪ್ರಜಾಪ್ರಭುತ್ವ ಅಡಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಸಂಬಂಧಿಸಿದಾಗಿದೆ. ಇದೀಗ ಸ್ಯಾಂಡಲ್ವುಡ್‌ ಸ್ಟಾರ್ಸ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. 

Actors React To Election Results: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ರಾಜಕೀಯ ನಾಯಕರಿಗೆ ಮಾತ್ರವಲ್ಲದೇ ಪ್ರಜಾಪ್ರಭುತ್ವ ಅಡಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಸಂಬಂಧಿಸಿದಾಗಿದೆ. ಅದರ ನಿಟ್ಟಿನಲ್ಲಿ ಎಲ್ಲರು ಈ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಇದೀಗ ಸ್ಯಾಂಡಲ್ವುಡ್‌ ಸ್ಟಾರ್ಸ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ 136 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ  ಹಿನ್ನಲೆ ರಾಜಕೀಯ ಗಣ್ಯರು, ಸ್ಯಾಂಡಲ್ವುಡ್‌ ಸ್ಟಾರ್ಸ್‌  ಜೊತೆಗೆ ಬೇರೆ ಭಾಷೆಯ ಸಿನಿ ಗಣ್ಯರು ಅಭಿನಂದನೆ ತಿಳಿಸಿದ್ದಾರೆ. ಆದಾಗ್ಯೂ ಕನ್ನಡ ಸಿನಿ ಸ್ಟಾರ್ಸ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

1 /5

ಚುನಾವಣೆ ಫಲಿತಾಂಶಕ್ಕೆ  ಪ್ರತಿಕ್ರಿಯಿಸಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಗೆದ್ದವರು ಬೀಗಬೇಡಿ ಎಲ್ಲರನ್ನೂ ಒಳಗೊಳ್ಳಿ. ದ್ವೇಷ ಬೇಡ.  ಜಾತಿ ಜಾತಿ ಎಂದು ಬಡಿದಾಡದಿರಿ,  ಭ್ರಷ್ಟ ಸರ್ಕಾರವನ್ನು ಮಾಡಬೇಡಿ  ಹಾಗೆಯೇ ಸೋತವರು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. 

2 /5

ಕರುನಾಡಿನ ಜನ ಸಂಪೂರ್ಣ ಬಹುಮತವನ್ನು ಒಂದು ಪಕ್ಷಕ್ಕೆ ನೀಡಿ ತಾವು ಪ್ರಜ್ಞಾವಂತರು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆಂದು ನಟ ದುನಿಯಾ ವಿಜಯ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

3 /5

ಧರ್ಮಾಂಧತೆ ಹಾಗೂ ದ್ವೇಷವನ್ನು ಒದ್ದು ಹೊರಗೆ ಓಡಿಸಿದ ಕರ್ನಾಟಕದ ಜನತೆಗೆ ಧನ್ಯವಾದ. ಚಕ್ರವರ್ತಿ ಬತ್ತಲಾಗಿದ್ದಾನೆ” ಎಂದು ಪ್ರಕಾಶ್ ರೈ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. 

4 /5

ಬಿಜೆಪಿ ಸರ್ಕಾರ  ಅಧಿಕಾರದಿಂದ ಇಳಿದಿದ್ದಕ್ಕೆ  ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ಪವನ್ ಒಡೆಯರ್,“ಡೊಳ್ಳು”ಚಿತ್ರಕ್ಕೆ ರಾಷ್ಟೀಯ ಪ್ರಶಸ್ತಿ ಬಂದಾಗ,ಬೊಮ್ಮಾಯಿ ಮಾಮಗೆ ಚಿತ್ರ ವೀಕ್ಷಿಸಲು ಕೊರಿದ್ದೆವು ಆ ಸಂದರ್ಭದಲ್ಲಿ ಮಾಜಿ ಸಿಎಂ ಬೊಮ್ಮಯಿ ಅಹಂಕಾರ ತೋರಿಸಿದ್ದರು. ಆದರೆ ಸಿದ್ದರಾಮ್ಯನವರು ಸಿನಿಮಾ ನೋಡಿ ಶುಭ ಹಾರೈಸಿದ್ದರು ಎಂದಿದ್ದಾರೆ. 

5 /5

 ಫಲಿತಾಂಶ ಕುರಿತಂತೆ ಪ್ರತಿಕ್ರಿಯಿಸಿರುವ ಸಿಂಪಲ್‌ ಸುನಿ, ಮಡಚಿದ್ದ ಕೈ ಮೇಲೇದ್ದಿದೆ..ಅರಳಿದ ತಾವರೆ ಮುದುಡಿದೆ…ತೆನೆ ಹೊತ್ತ ಮಹಿಳೆಗೆ ಕಣವಿಲ್ಲ..ಪ್ರಜೆಗಳಿಗೆ ರಾಜಕೀಯ ನೆಡೆ ಬೇಕು.. ಪ್ರಜಾಕೀಯ ನುಡಿ ಬೇಕಿಲ್ಲ… ಇತರೆಯವರನ್ನ ಕೇಳೋರಿಲ್ಲ…ರೆಸಾರ್ಟ್ ರಾಜಾಕೀಯ ನೆಡೆಯೋಲ್ಲ..ಸಾಮಾಜಿಕ ಜಾಲತಾಣ ನಿಜವಲ್ಲ.. ಯಾವುದೇ ಪಕ್ಷವಿರಲಿ..ಕರ್ನಾಟಕ ಅಭಿವೃದ್ಧಿಯಾಗಲಿ ಎಂದು ಚುನಾವಣೆ ಫಲಿತಾಂಶ ಕುರಿತು ಸಾಲುಗಳ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.