'ಭಗವಂತ್‌ ಕೇಸರಿ' ಖ್ಯಾತಿಯ ಶ್ರೀಲೀಲಾಳ ಮುದ್ದಾದ ಫೋಟೋ ಶೂಟ್‌

 Sree Leela: ಸೌತ್‌ ಸ್ಟಾರ್‌ ನಟಿ ಶ್ರೀಲೀಲಾ ಕನ್ನಡ ಹಾಗೂ ತೆಲುಗೂ ಸಿನಿಮಾಗಳ ಮೂಲಕ ಪ್ರಸಿದ್ದಿಯಾಗಿದ್ದಾರೆ. ಈಕೆ ಮೊದಲು ಕನ್ನಡದ ಕಿಸ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ನಂತರ ಟಾಲಿವುಡ್‌ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ಈ ನಟಿ ಇತ್ತೀಚೆಗೆ ಮುದ್ದಾಗಿ ಫೋಟೋ ಶೂಟ್‌ ಮಾಡಿಸಿದ್ದಾರೆ.

South Actress Sree Leela:  ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಶ್ರೀಲೀಲಾ ಜುಲೈ 14, 2001 ರಂದು ಅಮೇರಿಕಾದ ಮಿಚಿಗನ್ ರಾಜ್ಯದ ಡೇಟ್ರಾಯ್ಟ್ ನಲ್ಲಿ ಜನಿಸಿದರು. ಈಕೆ ಕನ್ನಡದ ಕಿಸ್‌, ಭರಾಟೆ, ಬೈಟು ಲವ್‌ ಹಾಗೂ ಜೇಮ್ಸ್‌ ಸಿನಿಮಾಗಳಲ್ಲಿ ಅಭುಿನಯಿಸಿದ್ದಾರೆ. ಈ ನಟಿಗೆ ಸ್ಯಾಂಡಲ್‌ವುಡ್‌ಗಿಂತ ಟಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ದೊರಕಿದೆ. ವೈದ್ಯ ವೃತ್ತಿಯಲ್ಲಿ ಮುಂದುವರೆಯಬೇಕೆಂದಿದ್ದ ಶ್ರೀಲೀಲಾ ನಟನೆಗೆ ಮನೆಯಲ್ಲಿ ಮೊದಲು ಸ್ವಲ್ಪ ವಿರೋಧವಾಯಿತು. ನಂತರ ಅಂಬಾರಿ ಅರ್ಜುನ್ ತಮ್ಮ ಕಿಸ್ ಚಿತ್ರಕ್ಕಾಗಿ ಶ್ರೀಲೀಲಾ ಕುಟುಂಬದವರನ್ನು ಒಪ್ಪಿಸಿದರು. ಯಶ್-ರಾಧಿಕಾ ಪಂಡಿತ್ ರೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿರುವ ಶ್ರೀಲೀಲಾ ಅವರನ್ನು ಪ್ರೀತಿಯಿಂದ ಜೀಜು-ಅಕ್ಕಾ ಎಂದೇ ಕರೆಯುತ್ತಾರೆ. ನಟಿ ಶ್ರೀಲೀಲಾ ಐದು ವರ್ಷಗಳಿಂದ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರು ಇತ್ತೀಚೆಗೆ ನಟಿಸಿದ ಭಗವಂತ್‌ ಕೇಸರಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಮಾಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಸೌತ್‌ಇಂಡಿಯನ್‌ ಸ್ಟಾರ್‌ ಬೆಡಗಿ ನಟಿ ಶ್ರೀಲೀಲಾ ಇತ್ತೀಚೆಗೆ ಫೋಟೋ ಶೋಟ್‌ ಮಾಡಿಸಿದ್ದಾರೆ. ಈ ನಟಿ ತೆಗೆಸಿಕೊಂಡಿರುವ ಫೋಟೋಗಳಲ್ಲಿ ಈಕೆ ಸಖತ್‌ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. 

2 /7

ನಟಿ ಶ್ರೀಲೀಲಾ ಕಪ್ಪು ಬಣ್ಣದ ಪ್ರಾಕ್‌ನಲ್ಲಿ ಫೋಟೋ ಶೂಟ್‌ ಮಾಡಿಸಿದ್ದಾರೆ. ಆಕೆ ಧರಿಸಿರುವ ಫ್ರಾಕ್‌ಮೇಲೆ  ರೇನ್‌ಬೋ ಡಿಸೈನ್‌ ಹಾಗೂ ಒಂದು ಸ್ಟಾರ್‌ ಹೊಂದಿದೆ. ಹಾಗೆ ಅದರ ಮೇಲೆ ರೋಸ್‌ ಪಿಂಕ್‌  ಮತ್ತು ಬಿಳಿ ಬಣ್ನದ ಪ್ರಿಂಟೆಡ್‌ ಡಿಸೈನ್‌ ಸಹ ಮಾಡಿದ್ದಾರೆ.

3 /7

ಈ ನಟಿ ಪೋಟೋ ಶೂಟ್‌ ಮಾಡಿಸುವಾಗ ವಿಭಿನ್ನ ಪೋಸ್‌ಗಳನ್ನು ನೀಡುವುದರ ಮೂಲಕ ಎಲ್ಲರ ಗಮನ ಸಳೆದಿದ್ದಾರೆ. ಈಕೆ ತನ್ನ ಎಡಗೈಗೆ ಸಿಲ್ವರ್‌ ಬಣ್ಣದ ಬ್ರಾಸ್ಲೈಟ್‌ ಧರಿಸಿ, ಕಿವಿಗೆ ಕಪ್ಪು ಬಣ್ಣದ ಪ್ರೆಸಿಂಗ್ಸ್‌ ಹಾಕಿಕೊಂಡಿದ್ದಾರೆ.

4 /7

ಈ ಎಲ್ಲಾ ಫೋಟೋಗಳನ್ನು ನಟಿ ಕಿಸ್‌ ಸುಂದರಿ ಶ್ರೀಲೀಲಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡುವುದರ ಜೊತೆ," ಜೀವನವನ್ನು ಉತ್ತಮವಾಗಿ ಸಾಗಿಸಬೇಕು" ಎಂದು ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ.

5 /7

ನಟಿ ಶ್ರೀಲೀಲಾ ಎ.ಪಿ. ಅರ್ಜುನ್‌ ನಿರ್ದೇಶನದ ಕಿಸ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಕಿಸ್‌ ಚಿತ್ರದಲ್ಲೇ ನಾಯಕ ವಿರಾಟ್‌ ಜೊತೆ ನಾಯಕಿಯಾಗಿ ನಟಿಸಿದ್ದರು.

6 /7

ಶ್ರೀಲೀಲಾ ಸ್ಯಾಂಡಲ್‌ವುಡ್‌ ಸಿನಿಮಾಗಳಿಗಿಂತ ಹೆಚ್ಚಾಗಿ ಟಾಲಿವುಡ್‌ ಚಿತ್ರಗಳಲ್ಲಿ ಹೆಚ್ಚಾಗಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಈಕೆ ಮೂರು ಬಾರಿ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

7 /7

ಈಕೆ ಜನಿಸಿದ್ದು ಅಮೇರಿಕಾದಲ್ಲಿ ಆದರೂ, ತಮ್ಮ ಜೀವನವನ್ನು ಭಾರತದಲ್ಲಿ ಕಟ್ಟಿಕೊಂಡಿದ್ದಾರೆ. ಈಕೆ ನಟಿ ಮಾತ್ರವಲ್ಲದೆ ಭರತನಾಟ್ಯಂ ಡಾನ್ಸರ್‌ ಸಹ. ಇವರು ಕೊನೆಯ ವರ್ಷ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ.