ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ: ಮೇಷ ಸೇರಿ ಈ 3 ರಾಶಿಯವರಿಗೆ ಆದಾಯ & ಕಂಕಣ ಭಾಗ್ಯ!

Jupiter entering Rohini Nakshatra: ಗುರುವು ರೋಹಿಣಿ ನಕ್ಷತ್ರಕ್ಕೆ ಸಂಚರಿಸುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಹೊಸ ಆದಾಯದ ಮಾರ್ಗಗಳು ಲಾಭ ತರಲಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಪ್ರತಿಯೊಂದು ಕಾರ್ಯವು ನಿರೀಕ್ಷಿತ ಫಲಿತಾಂಶ ನೀಡುತ್ತದೆ. 

Jupiter entering Rohini Nakshatra: ಬರೋಬ್ಬರಿ 12 ವರ್ಷಗಳ ನಂತರ ಗುರುವು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇ 1ರಂದು ವೃಷಭ ರಾಶಿಗೆ ಪ್ರವೇಶಿಸಿರುವ ಗುರುವು 2024 ಮುಗಿಯುವವರೆಗೂ ಅದೇ ರಾಶಿಯಲ್ಲಿರುತ್ತಾನೆ. ಆದರೆ ಈ ವರ್ಷ ಗುರು ತನ್ನ ನಕ್ಷತ್ರವನ್ನು ಒಟ್ಟು ೪ ಬಾರಿ ಬದಲಾಯಿಸುತ್ತಾನೆ. ಇದು ಮೇಷದಿಂದ ಮೀನ ರಾಶಿಯವರ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಜೂನ್ 13ರಂದು ಗುರು ರೋಹಿಣಿ ನಕ್ಷತ್ರವನ್ನು ಪ್ರವೇಶಿಸಲಿದ್ದು, ಆಗಸ್ಟ್ 20ರವರೆಗೆ ಈ ನಕ್ಷತ್ರದಲ್ಲಿ ಸಂಚರಿಸಲಿದ್ದಾರೆ.

ಗುರು ರೋಹಿಣಿ ನಕ್ಷತ್ರ ಬದಲಾಗುವುದು ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶ ನೀಡುತ್ತದೆ. ರೋಹಿಣಿ ನಕ್ಷತ್ರದ ಅಧಿಪತಿ ಚಂದ್ರ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚಿನ ಮಾನಸಿಕ ಸ್ಥಿರತೆ ಮತ್ತು ಬುದ್ಧಿವಂತಿಕೆ ಹೊಂದಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಯಾವುದೇ ಟೀಕೆಗಳನ್ನು ಎದುರಿಸಿ, ಬಯಸಿದ್ದನ್ನು ಸಾಧಿಸುವ ಮನಸ್ಥಿತಿ ಹೊಂದಿರುತ್ತಾರೆ. ಇಂತಹ ನಕ್ಷತ್ರದಲ್ಲಿ ಶುಭ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಗುರುವಿನ ಆಗಮನವು ಅನೇಕ ಶುಭ ಫಲಗಳನ್ನು ನೀಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ಗುರುವು ರೋಹಿಣಿ ನಕ್ಷತ್ರಕ್ಕೆ ಸಂಚರಿಸುವುದರಿಂದ ಸಂತೋಷ & ಅದೃಷ್ಟ ಹೆಚ್ಚಾಗುತ್ತದೆ. ಹೊಸ ಆದಾಯದ ಮಾರ್ಗಗಳು ಲಾಭ ತರಲಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಪ್ರತಿಯೊಂದು ಕಾರ್ಯವು ನಿರೀಕ್ಷಿತ ಫಲಿತಾಂಶ ನೀಡುತ್ತದೆ. ಗುರುವಿನ ಸಂಚಾರವು ಯಾವ ರಾಶಿಯವರಿಗೆ ಶುಭ ಫಲಿತಾಂಶ ನೀಡಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

2 /4

ಮೇಷ ರಾಶಿಗೆ ಗುರು ನಕ್ಷತ್ರ ಸಂಚಾರದಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಭೂಮಿ ಅಥವಾ ವಾಹನ ಖರೀದಿಗೆ ಇದು ಹೊಸ ಅವಕಾಶ ನೀಡಲಿದೆ. ನೀವು ಹೊಸ ಆದಾಯದ ಮೂಲಗಳ ಮೂಲಕ ಹಣ ಸಂಪಾದಿಸುತ್ತೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದ್ದು, ವ್ಯಾಪಾರದಿಂದ ಲಾಭಗಳಿವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿದ್ದು, ನ್ಯಾಯಾಲಯ ಪ್ರಕರಣಗಳಿಂದ ಮುಕ್ತಿ ಸಿಗುತ್ತದೆ. ಮಕ್ಕಳು ನಿಮ್ಮ ಮನಸ್ಸಿಗೆ ಸಾಂತ್ವನ ನೀಡುವ ಒಳ್ಳೆಯ ಸುದ್ದಿ ನೀಡುತ್ತಾರೆ. ನೀವು ಭೌತಿಕ ಸೌಕರ್ಯಗಳೊಂದಿಗೆ ಸಂತೋಷದಿಂದ ಜೀವನ ನಡೆಸುತ್ತೀರಿ.  

3 /4

ಗುರು, ನಕ್ಷತ್ರ ಬದಲಾವಣೆಯಿಂದ ಕರ್ಕಾಟಕ ರಾಶಿಯವರಿಗೆ ಅನಿರೀಕ್ಷಿತ ಲಾಭವಿದೆ. ಹೊಸ ಆದಾಯದ ಮಾರ್ಗಗಳು ಸೃಷ್ಟಿಯಾಗಲಿವೆ. ಉದ್ಯೋಗ-ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಬಹಳ ದಿನಗಳಿಂದ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ವ್ಯಾಪಾರಸ್ಥರು ಹೊಸ ವ್ಯವಹಾರ ಮಾಡುವ ಮೂಲಕ ಅಭಿವೃದ್ಧಿ ಹೊಂದುತ್ತಾರೆ.

4 /4

ರೋಹಿಣಿ ನಕ್ಷತ್ರಕ್ಕೆ ಗುರು ಸಂಕ್ರಮಿಸುವುದರಿಂದ ತುಲಾ ರಾಶಿಯವರಿಗೆ ಲಾಭವಾಗಲಿದೆ. ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದ್ದು, ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಇತರರೊಂದಿಗೆ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ & ಒಡಹುಟ್ಟಿದವರೊಂದಿಗಿನ ಸಂಬಂಧಗಳು ಗಟ್ಟಿಯಾಗುತ್ತವೆ. ಶುಭ ಗ್ರಹ ಗುರುವಿನ ಅನುಗ್ರಹದಿಂದ ಒಂಟಿಯಾಗಿರುವ ತುಲಾ ರಾಶಿಯವರಿಗೆ ಕಂಕಣ ಭಾಗ್ಯ ಕೈಗೂಡುವ ಸಾಧ್ಯತೆ ಇದೆ.