ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಹೋದರ ಹೆಚ್ ಡಿ ರೇವಣ್ಣ, ಈಗಾಗಲೇ ಹೈದರಾಬಾದ್ ತಲುಪಿದ್ದಾರೆ.
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಹೋದರ ಹೆಚ್ ಡಿ ರೇವಣ್ಣ, ಈಗಾಗಲೇ ಹೈದರಾಬಾದ್ ತಲುಪಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನೂತನ ಪಕ್ಷ ಸ್ಥಾಪನೆ ಘೋಷಣೆ ಸಮಾರಂಭದಲ್ಲಿ ಇವರು ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗಿನ ಉಪಹಾರ ಕೂಟದಲ್ಲಿ ಇಬ್ಬರೂ ಭಾಗಿಯಾಗಿದ್ದರು. ಜೊತೆಗೆ ತಿರುಮಾವಳವನ್ ಅವರು ಕೂಡಾ ಕೆಸಿಆರ್ ಜೊತೆ ಉಪಹಾರ ಸೇವಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
20 ಶಾಸಕರ ಜತೆ ನಿನ್ನೆಯೇ ಹೆಚ್ ಡಿ ಕುಮಾರಸ್ವಾಮಿ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ವಿಶೇಷ ವಿಮಾನದಲ್ಲಿ ಹೈದರಾಬಾದ್ ಗೆ ತೆರಳಿದ್ದಾರೆ.
ಭಾರತ ರಾಷ್ಟ್ರ ಸಮಿತಿ (BRS) ಪಕ್ಷ ಸ್ಥಾಪನೆ ಮಾಡಲಿರುವ ಕೆಸಿಆರ್, ಇಂದು ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ಕಾರ್ಯಕರ್ಮದಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ಭಾಗಿಯಾಗಲಿದ್ದಾರೆ.
ಪಕ್ಷ ಸ್ಥಾಪನೆ ಬಗ್ಗೆ ಕೆಲ ತಿಂಗಳ ಹಿಂದೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜತೆ ಕೆಸಿಆರ್ ಚರ್ಚೆ ನಡೆಸಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಹೈದ್ರಾಬಾದ್ ಗೆ ತೆರಳಿದ್ದ ಹೆಚ್ ಡಿಕೆ ಈ ಬಗ್ಗೆ ಕೆಸಿಆರ್ ಜತೆ ಸುದೀರ್ಘ ಚರ್ಚೆ ನಡೆಸಿದ್ದರು.
ಸಮಾರಂಭಕ್ಕೂ ಮುನ್ನ ಮುಂಜಾನೆ ತೆಲಂಗಾಣ ಸಿಎಮ್ ಚಂದ್ರಶೇಖರ್ ರಾವ್ ಜೊತೆ ಉಪಹಾರ ಕೂಟದಲ್ಲಿ ಭಾಗಿಯಾಗಿದ್ದಾರೆ.