ಅಂಬಾನಿ ಅದ್ಧೂರಿ ಮದುವೆ ಸಮಾರಂಭದಲ್ಲಿ ಬಿಟೌನ್‌ ʼಬಂಗಾರದ ಜಿಂಕೆʼ..!

Janhvi Kapoor : ಜಾನ್ವಿ ಕಪೂರ್‌ ಬೋನಿ ಕಪೂರ್‌ - ಶ್ರೀದೇವಿ ಹಿರಿಯ ಮಗಳು. ದಢಕ್‌ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಚೆಲುವೆ ಅಮ್ಮನಂತೆ ಚಂದುಳ್ಳಿ ಚೆಲುವೆ.. ಸಧ್ಯ ಅನಂತ್‌ ಅಂಬಾನಿ ಮದುವೆ (Anant Ambani Marriage) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಂದರಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ..

1 /8

ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಅನಂತ್ ಅಂಬಾನಿ ಮದುವೆಯಲ್ಲಿ ಗೋಲ್ಡನ್ ಡ್ರೆಸ್‌ನಲ್ಲಿ ಅದ್ಭುತವಾಗಿ ಕಂಗೊಳಿಸಿದರು.  

2 /8

ಸೌತ್‌ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ, ಬಾಲಿವುಡ್ ಜಗತ್ತಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ನಟಿ ಶ್ರೀದೇವಿ ಹಿರಿಯ ಮಗಳು ಜಾನ್ವಿ ಕಪೂರ್ ಅಂದಕ್ಕೆ ಸರಿಸಾರಿಟಯೇ ಇಲ್ಲ..  

3 /8

2018 ರಿಂದ ತಾಯಿಯಂತೆ ಜಾನ್ವಿಯೂ ಸಹ ಬಾಲಿವುಡ್ ಜೊತೆಗೆ ಟಾಲಿವುಡ್‌ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ..   

4 /8

ಬಾಲಿವುಡ್ ಚಿತ್ರಗಳಲ್ಲಿ ಮಾತ್ರ ನಟಿಸುತ್ತಿದ್ದ ಜಾನ್ವಿ ಕಪೂರ್, ಜೂನಿಯರ್ ಎನ್ಟಿಆರ್ ಚಿತ್ರದ ಮೂಲಕ ಮೊದಲ ಬಾರಿಗೆ ಸೌತ್‌ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ.  

5 /8

ಅದೇ ರೀತಿ ಶೀಘ್ರದಲ್ಲೇ ನಟಿ ಜಾನ್ವಿ ಕಪೂರ್ ದಕ್ಷಿಣ ಚಿತ್ರರಂಗದ ಹಲವು ಚಿತ್ರಗಳಲ್ಲಿ ನಟಿಸಲಿದ್ದಾರೆ. ಅಲ್ಲದೆ, ತಮಿಳು ಚಿತ್ರದಲ್ಲಿ ನಟ ಸೂರ್ಯ ಅವರಿಗೆ ಜೋಡಿಯಾಗಿದ್ದಾರೆ ಎನ್ನಲಾಗಿದೆ.  

6 /8

ಇದೇ ವೇಳೆ, ನಿನ್ನೆ ಜುಲೈ 12 ರಂದು ಆನಂದ್ ಅಂಬಾನಿ ಮತ್ತು ರಾಧಿಕಾ ದಂಪತಿಯ ವಿವಾಹ ನಡೆಯಿತು. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ನಟಿ ಜಾಹ್ನವಿ ಕಪೂರ್ ಗೋಲ್ಡನ್ ಲೆಹೆಂಗಾವನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದರು.  

7 /8

ಜಾನ್ವಿ ಕಪೂರ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ.. ಅಲ್ಲದೆ, ಚೆಲುವೆಯ ಅಂದ ನೋಡಿದ ನೆಟ್ಟಿಗರು ಈಕೆ ಬಂಗಾರದ ಜಿಂಕೆ ಅಂತ ಹೊಗಳುತ್ತಿದ್ದಾರೆ..  

8 /8

ಬಂಗಾರ ಬಣ್ಣದ ಲೆಹೆಂಗಾದಲ್ಲಿ ಅಚ್ಚು ಬಂಗಾರದ ಜಿಂಕೆಯಂತೆ ಜಾನ್ವಿ ಕಂಗೊಳಿಸಿದ್ದಾರೆ.. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ..