Jackfruit Seed: ಬಾದಾಮಿಗಿಂತ ಹೆಚ್ಚು ಪ್ರಯೋಜನಕಾರಿ ಈ ಹಣ್ಣಿನ ಬೀಜ!! ಸರ್ವರೋಗಕ್ಕೂ ಮದ್ದು!

Jackfruit Seed Benefits: ಹಲಸಿನ ಹಣ್ಣಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ ಆದರೆ ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಹಲಸಿನ ಬೀಜಗಳು ಬಾದಾಮಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತವೆ ಎನ್ನುವುದು ನಿಮಗೆ ಗೊತ್ತಾ? ಗೊತ್ತಿಲ್ಲವಾದರೆ ಇದೀಗ ತಿಳಿದುಕೊಳ್ಳೋಣ.. 

1 /5

ಹಲಸಿನ ಹಣ್ಣಿನ ಬೀಜಗಳಲ್ಲಿ ಥಯಾಮಿನ್ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದ್ದು.. ಇದು ನಿಮ್ಮ ಕಣ್ಣುಗಳು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಇದಲ್ಲದೆ, ಇದರಲ್ಲಿ ಸತು, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.  

2 /5

ಹಲಸಿನ ಬೀಜಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ.. ಇದರಲ್ಲಿರುವ ಮ್ಯಾಂಗನೀಸ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು.. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ಹಲಸಿನ ಬೀಜಗಳಲ್ಲಿರುವ ಕಡಿಮೆ ಪ್ರಮಾಣದ ಕ್ಯಾಲೊರಿ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.    

3 /5

ಹಲಸಿನ ಹಣ್ಣಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತವೆ.. ಇದಲ್ಲದೆ, ಇದು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು.. ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.  

4 /5

ಹಲಸಿನ ಬೀಜಗಳು ಮುಖದಲ್ಲಿ ಕಾಣುವ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಒತ್ತಡ, ತಲೆನೋವಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.   

5 /5

ಹಲಸಿನ ಬೀಜಗಳು ಸ್ಕಿನ್‌ ಟೋನ್‌ನ್ನು ಸುಧಾರಿಸುತ್ತದೆ.. ಇದಕ್ಕಾಗಿ ಈ ಹಣ್ಣಿನ ಬೀಜಗಳನ್ನು ಜೇನುತುಪ್ಪ ಮತ್ತು ಹಾಲಿನಲ್ಲಿ ನೆನೆಸಿ ಸ್ವಲ್ಪ ಸಮಯ ಬಿಡಿ. ನಂತರ ಅದನ್ನು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ನಂತೆ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆಯಿರಿ..