ಚಾರ್ ಧಾಮ್ ಯಾತ್ರೆಗೆ IRCTCಯ ಉತ್ತಮ ಪ್ಯಾಕೇಜ್; ವಿಮಾನದಲ್ಲಿ ಅಗ್ಗವಾಗಿ ಪ್ರಯಾಣಿಸಿ!

IRCTC CharDham Yatra Packages 2023: IRCTCಯು ಚಾರ್ ಧಾಮ್ ಯಾತ್ರಾ ಪ್ಯಾಕೇಜ್ ಪ್ರಾರಂಭಿಸಿದೆ. ಈ ಪ್ಯಾಕೇಜ್ ಅಡಿ ನೀವು ಬುಕ್ ಮಾಡಿದರೆ ನಿಮ್ಮನ್ನು ಚಾರ್ ಧಾಮ್ ಯಾತ್ರೆಗೆ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ. ​

IRCTC ಚಾರ್ ಧಾಮ್ ಯಾತ್ರಾ ಪ್ಯಾಕೇಜ್‌ಗಳು 2023: ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಎಲ್ಲಾ ಸರ್ಕಾರಿ ಸಚಿವಾಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ IRCTC ಹೊಸ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿದೆ. IRCTCಯ ವಿಶೇಷ ಪ್ಯಾಕೇಜ್ ಅನ್ನು ತೆಗೆದುಕೊಳ್ಳುವ ದೊಡ್ಡ ಪ್ರಯೋಜನವೆಂದರೆ ನೀವು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಒಮ್ಮೆ ಪಾವತಿ ಮಾಡಿ ಮತ್ತು ನಿಮ್ಮ ಕುಟುಂಬದೊಂದಿಗೆ ಉತ್ತಮ ಆನಂದದಾಯಕ ಪ್ರವಾಸವನ್ನು ಮಾಡಿ. ಈ ವೇದಿಕೆಯಡಿ ನೀವು ದೇಶ ಮತ್ತು ಪ್ರಪಂಚದ ವಿವಿಧ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಸ್ಥಳಗಳ ಭೇಟಿಗೆ ಕಾಲಕಾಲಕ್ಕೆ ಉತ್ತಮ ಅವಕಾಶ ಪಡೆಯುತ್ತೀರಿ. ಈ ಅಭಿಯಾನದಲ್ಲಿ IRCTCಯು ಚಾರ್ ಧಾಮ್ ಯಾತ್ರಾ ಪ್ಯಾಕೇಜ್ ಪ್ರಾರಂಭಿಸಿದೆ. ಈ ಪ್ಯಾಕೇಜ್ ಅಡಿ ನೀವು ಬುಕ್ ಮಾಡಿದರೆ ನಿಮ್ಮನ್ನು ಚಾರ್ ಧಾಮ್ ಯಾತ್ರೆಗೆ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ  ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /7

12 ರಾತ್ರಿ ಮತ್ತು 13 ದಿನಗಳ ಈ ಪ್ಯಾಕೇಜ್ ಸೆಪ್ಟೆಂಬರ್ 19ರಿಂದ ಪ್ರಾರಂಭವಾಗಲಿದೆ. ಈ ಪ್ಯಾಕೇಜ್‌ಗಾಗಿ ಚೆನ್ನೈನಿಂದ ಎಲ್ಲಾ ಪ್ರಯಾಣಿಕರನ್ನು ಮೊದಲು ದೆಹಲಿಗೆ ಕರೆತರಲಾಗುತ್ತದೆ. ಬುಕಿಂಗ್ ಖಚಿತಪಡಿಸಿದ ನಂತರ ವೇಳಾಪಟ್ಟಿಯ ಪ್ರಕಾರ, ನೀವು ಸೆಪ್ಟೆಂಬರ್ 19ರಂದು ಚೆನ್ನೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8.40ಕ್ಕೆ ವಿಮಾನವನ್ನು ಹತ್ತಬೇಕಾಗುತ್ತದೆ.

2 /7

ಮೊದಲ ದಿನ ನೀವು ಚೆನ್ನೈನಿಂದ ವಿಮಾನದ ಮೂಲಕ ಸೆಪ್ಟೆಂಬರ್ 19ರಂದು ಬೆಳಗ್ಗೆ 11.30ಕ್ಕೆ ದೆಹಲಿಯನ್ನು ತಲುಪುತ್ತೀರಿ. ಇಲ್ಲಿಂದ ನೀವು ಹರಿದ್ವಾರಕ್ಕೆ ಹೊರಡುತ್ತೀರಿ. ಮೊದಲ ದಿನ ನೀವು ತಂಗಲು ಮತ್ತು ಆಹಾರಕ್ಕಾಗಿ ಅಲ್ಲಿ ವ್ಯವಸ್ಥೆ ಇರುತ್ತದೆ. 2ನೇ ದಿನ ನೀವು ಉಪಹಾರದ ನಂತರ ಬರ್ಕೋಟ್‌ಗೆ ಹೋಗುತ್ತೀರಿ. ಹೋಟೆಲ್‌ನಲ್ಲಿ ಚೆಕ್-ಇನ್ ಜೊತೆಗೆ ನಿಮ್ಮ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಸಂಪೂರ್ಣ ವ್ಯವಸ್ಥೆ ಇರುತ್ತದೆ. ಬರ್ಕೋಟ್‍ನಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗುವುದು. 3ನೇ ದಿನ ತಿಂಡಿ ಮುಗಿಸಿ ಹನುಮನಚಟ್ಟಿಗೆ ಹೊರಡುತ್ತೀರಿ.

3 /7

ಹನುಮಂಚಟ್ಟಿ ತಲುಪಿದ ನಂತರ ನೀವು ಯಮುನೋತ್ರಿಗೆ ಹೊರಡುತ್ತೀರಿ. ಅಲ್ಲಿ ದರ್ಶನ ಪಡೆದು ಮರಳಿ ಬರ್ಕೋಟ್‌ಗೆ ಬಂದು ರಾತ್ರಿ ಅಲ್ಲಿಯೇ ತಂಗುವ ವ್ಯವಸ್ಥೆ ಇರುತ್ತದೆ.

4 /7

4ನೇ ದಿನದ ಉಪಹಾರದ ನಂತರ ನೀವು ಉತ್ತರಕಾಶಿಗೆ ಹೊರಡುತ್ತೀರಿ. ಉತ್ತರಕಾಶಿ ತಲುಪಿದ ನಂತರ ನೀವು ಹೋಟೆಲ್‌ಗೆ ಚೆಕ್ ಇನ್ ಮಾಡುತ್ತೀರಿ. ನೀವು ವಿಶ್ರಾಂತಿ ಪಡೆಯಲು ಸಂಜೆ ಸಮಯವನ್ನು ಹೊಂದಿರುತ್ತೀರಿ. ಉತ್ತರಕಾಶಿಯಲ್ಲಿ ರಾತ್ರಿ ತಂಗಲು ಎಲ್ಲಾ ವ್ಯವಸ್ಥೆ ಮಾಡಲಾಗುವುದು. 5ನೇ ದಿನ ಉಪಹಾರದ ನಂತರ ನೀವು ಗಂಗೋತ್ರಿಗೆ ಹೊರಡುತ್ತೀರಿ. ಅಲ್ಲಿ ದರ್ಶನದ ನಂತರ ನೀವು ಉತ್ತರಕಾಶಿಗೆ ಹಿಂತಿರುಗುತ್ತೀರಿ. 6ನೇ ದಿನ ನೀವು ಉತ್ತರಕಾಶಿಯಿಂದ ಗುಪ್ತಕಾಶಿಗೆ ಹೊರಡುತ್ತೀರಿ. ಅಲ್ಲಿಗೆ ತಲುಪಿದ ನಂತರ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿ ನಂತರ ಅಲ್ಲಿ ರಾತ್ರಿ ತಂಗುವ ವ್ಯವಸ್ಥೆ ಇರುತ್ತದೆ.

5 /7

7ನೇ ದಿನ ನೀವು ಗುಪ್ತಕಾಶಿಯಿಂದ ಸೋನಪ್ರಯಾಗಕ್ಕೆ ಹೊರಡುತ್ತೀರಿ. ಅಲ್ಲಿಂದ ಜೀಪಿನಲ್ಲಿ ಗೌರಿಕುಂಡ್ ತಲುಪುತ್ತೀರಿ. ಆಗ ನಿಮ್ಮ ಕೇದಾರನಾಥ ಯಾತ್ರೆ ಆರಂಭವಾಗುತ್ತದೆ. ಬಾಬಾ ಕೇದಾರನ ಮಂಗಳಕರ ದರ್ಶನದ ನಂತರ ನೀವು ಗೌರಿಕುಂಡ್‌ಗೆ ಹಿಂತಿರುಗಿ ಅಲ್ಲಿಂದ ಸೋನ್‌ಪ್ರಯಾಗವನ್ನು ತಲುಪುತ್ತೀರಿ. 8ನೇ ದಿನ ನೀವು ಗುಪ್ತಕಾಶಿಯ ಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. 9ನೇ ದಿನ ಉಪಹಾರದ ನಂತರ ನೀವು ಪಾಂಡುಕೇಶ್ವರಕ್ಕೆ ಹೊರಡುತ್ತೀರಿ. ಅಲ್ಲಿಗೆ ತಲುಪಿದ ನಂತರ ನೀವು ಹೋಟೆಲ್‍ಗೆ ಚೆಕ್ ಇನ್ ಮಾಡುತ್ತೀರಿ, ನಂತರ ರಾತ್ರಿ ಅಲ್ಲಿಯೇ ತಂಗುವ ವ್ಯವಸ್ಥೆ ಇರುತ್ತದೆ.

6 /7

10ನೇ ದಿನ ಉಪಹಾರದ ನಂತರ ನೀವು ಬದರಿನಾಥಕ್ಕೆ ಹೊರಡುತ್ತೀರಿ. ಅಲ್ಲಿ ಬೆಳಗಿನ ಪೂಜೆಯಲ್ಲಿ ಭಾಗವಹಿಸುವಿರಿ. ನಂತರ ಊಟದ ನಂತರ ಮಾಯಾಪುರಕ್ಕೆ ಹೊರಡುವಿರಿ. ಹೋಟೆಲ್ ಚೆಕ್-ಇನ್ ನಂತರ ರಾತ್ರಿ ತಂಗುವಿಕೆ ಮತ್ತು ಭೋಜನ ಇರುತ್ತದೆ. 11ನೇ ದಿನ ಉಪಹಾರದ ನಂತರ ದೇವಪ್ರಯಾಗದ ಕಡೆಗೆ ಹೊರಡುವುದು, ಅಲ್ಲಿ ನೀವು ರಘುನಾಥಜಿ ದೇವಸ್ಥಾನವನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ನಂತರ ನೀವು ಋಷಿಕೇಶಕ್ಕೆ ಹೊರಡುತ್ತೀರಿ. ಅಲ್ಲಿಗೆ ರಾಮ್ ಝುಲಾ ಮತ್ತು ಲಕ್ಷ್ಮಣ್ ಜೂಲಾ ಭೇಟಿ ನೀಡಲಿದ್ದಾರೆ. ಮುಂದೆ ನೀವು ಹರಿದ್ವಾರಕ್ಕೆ ಹಿಂತಿರುಗುತ್ತೀರಿ. ನಿಮ್ಮ ರಾತ್ರಿಯ ತಂಗುವಿಕೆ ಮತ್ತು ಆಹಾರಕ್ಕಾಗಿ ಅಲ್ಲಿ ವ್ಯವಸ್ಥೆ ಮಾಡಲಾಗುವುದು. 12ನೇ ದಿನ ಉಪಹಾರದ ನಂತರ ನೀವು ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಸಂಜೆ ನೀವು ಗಂಗಾ ಆರತಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. 12ನೇ ದಿನವೂ ನೀವು ರಾತ್ರಿ ಹರಿದ್ವಾರದಲ್ಲಿ ಉಳಿಯುತ್ತೀರಿ. ಮರುದಿನ ನೀವು ಹರಿದ್ವಾರದಿಂದ ದೆಹಲಿಗೆ ಹೊರಡುತ್ತೀರಿ. ದೆಹಲಿ ತಲುಪಿದ ನಂತರ ನೀವು ವಿಮಾನದಲ್ಲಿ ಚೆನ್ನೈಗೆ ವಾಪಸ್ ಆಗುತ್ತೀರಿ.

7 /7

ನೀವು ಒಬ್ಬ ವ್ಯಕ್ತಿಗೆ ಬುಕ್ ಮಾಡುತ್ತಿದ್ದರೆ 74100 ರೂ. ವೆಚ್ಚವಾಗುತ್ತದೆ. ಇಬ್ಬರಿಗೆ ಬುಕ್ ಮಾಡಿದ್ರೆ ನೀವು ಉತ್ತಮ ರಿಯಾಯಿತಿ ಪಡೆಯುತ್ತೀರಿ. ಆಗ ಪ್ರತಿ ವ್ಯಕ್ತಿಗೆ 61,500 ರೂ. ಆಗುತ್ತದೆ. ಆದರೆ ನೀವು 3 ಜನರಿಗೆ ಬುಕ್ ಮಾಡಿದ್ರೆ ಒಬ್ಬ ವ್ಯಕ್ತಿಗೆ ಕೇವಲ 60,100 ರೂ. ಆಗುತ್ತದೆ. ಈ ರೀತಿ 3 ಟಿಕೆಟ್‌ಗಳನ್ನು ಖರೀದಿಸುವ ಮೂಲಕ ನೀವು 14,000 ರೂ.ಗಳ ದೊಡ್ಡ ರಿಯಾಯಿತಿ ಪಡೆಯುತ್ತೀರಿ. ಟೂರ್ ಪ್ಯಾಕೇಜ್‌ಗಾಗಿ IRCTCಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದರ ಹೊರತಾಗಿ ಇನ್ನೇನಾದರೂ ತಿಳಿಯಬೇಕಾದರೆ ಈ 3 ಸಂಖ್ಯೆಗಳಿಗೆ 08287931974, 08287931968, 09003140682 ಕರೆ ಮಾಡಿ ಮಾಹಿತಿ ಪಡೆಯಬಹುದು.