ಐಫೋನ್ 14 ಅನ್ನು ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲೇ ಹೇಳಲಾಗಿತ್ತು. ಈ ಸ್ಮಾರ್ಟ್ಫೋನ್ ಅನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಅಂದರೆ ಸೆಪ್ಟೆಂಬರ್ 8 ಮತ್ತು 15 ರ ನಡುವೆ ಬಿಡುಗಡೆ ಮಾಡಬಹುದು ಎನ್ನುವ ಸುದ್ದಿ ಇದೀಗ ಬಹಿರಂಗವಾಗಿದೆ.
ಬೆಂಗಳೂರು : iPhone 14 Launch Date and Price in India: ಪ್ರತಿ ವರ್ಷ ಆಪಲ್ ತನ್ನ ಪ್ರಮುಖ ಸ್ಮಾರ್ಟ್ಫೋನ್ನ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತದೆ. ಈ ವರ್ಷವೂ ಐಫೋನ್ 14 ಬಿಡುಗಡೆಯಾಗಲಿದೆ. ಈ ಫೋನ್ ಬಗ್ಗೆ ಜನರು ಕೂಡಾ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ಕಾಯುತ್ತಿದ್ದಾರೆ. ಭಾರತದಲ್ಲಿ ಅದರ ಬೆಲೆ ಎಷ್ಟಿರಲಿದೆ ? ವೈಶಿಷ್ಟ್ಯಗಳು ಯಾವುವು ತಿಳಿಯಿರಿ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಮಾಡಿ
iPhone 14 ಲಾಂಚ್ ದಿನಾಂಕ: ಐಫೋನ್ 14 ಅನ್ನು ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಈ ಮೊದಲೇ ಹೇಳಲಾಗಿತ್ತು. ಈ ಸ್ಮಾರ್ಟ್ಫೋನ್ ಅನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಅಂದರೆ ಸೆಪ್ಟೆಂಬರ್ 8 ಮತ್ತು 15 ರ ನಡುವೆ ಬಿಡುಗಡೆ ಮಾಡಬಹುದು ಎನ್ನುವ ಸುದ್ದಿ ಇದೀಗ ಬಹಿರಂಗವಾಗಿದೆ.
ಭಾರತದಲ್ಲಿ iPhone 14 Pro Max ಬೆಲೆ: iPhone 14 ನ ಎಲ್ಲಾ ನಾಲ್ಕು ಮಾದರಿಗಳ ಬೆಲೆಯನ್ನು ಟಿಪ್ಸ್ಟರ್ ಮೂಲಕ ಬಹಿರಂಗಪಡಿಸಲಾಗಿದೆ. ಈ ಸರಣಿಯ ಟಾಪ್ ಮಾಡೆಲ್, iPhone 14 Pro Max ಬೆಲೆ ಸುಮಾರು 70 ಸಾವಿರ ರೂಪಾಯಿ) ಆಗಿರಬಹುದು ಎನ್ನಲಾಗಿದೆ. ಇನ್ನು ಆಮದು ಸುಂಕ ಮತ್ತು GST ಅನ್ನು ಪಾವತಿಸಬೇಕಾಗಬಹುದು.
ಐಫೋನ್ 14 ಪ್ರೊ ಮ್ಯಾಕ್ಸ್ ವಿನ್ಯಾಸ: ಐಫೋನ್ 14 ಸರಣಿಯ ಪ್ರೊ ಮಾದರಿಗಳ ವಿನ್ಯಾಸವು ಕಳೆದ ಬಾರಿಗಿಂತ ಭಿನ್ನವಾಗಿರಬಹುದು ಎಂದು ಹಲವು ವರದಿಗಳು ಹೇಳುತ್ತವೆ. ಐಫೋನ್ 14 ಪ್ರೊ ಮ್ಯಾಕ್ಸ್ ಮುಂಭಾಗದ ಡಿಸ್ಪ್ಲೇನಲ್ಲಿ ವಿಶಾಲವಾದ ದರ್ಜೆಯನ್ನು ಮತ್ತು ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸೆನ್ಸಾರ್ ಗಳನ್ನೂ ಹೊಂದಿರಬಹುದು. ಪ್ರಸ್ತುತ, ಈ ಸರಣಿಯು ಯಾವ ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಬಂದಿಲ್ಲ.
ಐಫೋನ್ 14 ಪ್ರೊ ಮ್ಯಾಕ್ಸ್ನ ಕ್ಯಾಮೆರಾ: ಈ ಸ್ಮಾರ್ಟ್ಫೋನ್ನ ರಿಯರ್ ಕ್ಯಾಮೆರಾ ಸೆಟಪ್ ಎರಡು ಕ್ಯಾಮೆರಾ ಸೆನ್ಸಾರ್ ಗಳು ಮತ್ತು ಫ್ರಂಟ್ ಕ್ಯಾಮೆರಾವನ್ನು ಹೊಂದಬಹುದು. ಆಪಲ್ ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ಸೆನ್ಸಾರ್ ಅನ್ನು ಆಪ್ಟಿಮೈಜ್ ಮಾಡಬಹುದು.
iPhone 14 Pro Max ನ ಇತರ ವಿಶೇಷಣಗಳು: A16 ಬಯೋನಿಕ್ ಚಿಪ್ನಲ್ಲಿ ಕಾರ್ಯನಿರ್ವಹಿಸುವ iPhone 14 ಸರಣಿಯ iPhone 14 Max ಮಾದರಿಯಲ್ಲಿ 6.1-ಇಂಚಿನ ಡಿಸ್ಪ್ಲೇ ನೀಡಬಹುದು ಎನ್ನಲಾಗಿದೆ. ಕನಿಷ್ಠ 128GB ಸ್ಟೋರೇಜ್ ನೀಡಲಾಗಿದ್ದು, ಅದನ್ನು ಗರಿಷ್ಠ 512GBವರೆಗೆ ವಿಸ್ತರಿಸಬಹುದು. ಈ ಸ್ಮಾರ್ಟ್ಫೋನ್ ಶ್ರೇಣಿಯ ಬ್ಯಾಟರಿ ಬಾಳಿಕೆಯು ಐಫೋನ್ 13 ಗಿಂತ ಉತ್ತಮವಾಗಿರುತ್ತದೆ.