Post Office MIS: ಅಂಚೆ ಕಚೇರಿಯಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳಿವೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಅಂಚೆ ಕಚೇರಿಯಲ್ಲಿ ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಹೂಡಿಕೆ ಮಾಡುವ ಅನೇಕ ಆಯ್ಕೆಗಳಿವೆ.
ನವದೆಹಲಿ : Post Office MIS: ಅಂಚೆ ಕಚೇರಿಯಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳಿವೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಅಂಚೆ ಕಚೇರಿಯಲ್ಲಿ ಅಲ್ಪಾವಧಿಯಿಂದ ದೀರ್ಘಾವಧಿಯವರೆಗೆ ಹೂಡಿಕೆ ಮಾಡುವ ಅನೇಕ ಆಯ್ಕೆಗಳಿವೆ. ಈ ಯೋಜನೆಗಳಲ್ಲಿ ಒಂದು ಮಾಸಿಕ ಆದಾಯ ಯೋಜನೆ (MIS). ಇಲ್ಲಿ ಹೂಡಿಕೆ ಮಾಡಿದರೆ ಲಾಭಕ್ಕೆ ಮೋಸವಿಲ್ಲ. ಪ್ರತಿ ತಿಂಗಳು ನಿರಂತರವಾಗಿ ಹಣ ಸಂಪಾದಿಸಲು ಬಯಸುವವರಿಗೆ ಮಾಸಿಕ ಆದಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. MIS ಯೋಜನೆಯಲ್ಲಿ, ಸಿಂಗಲ್ ಅಕೌಂಟ್ ಮತ್ತು ಜಂಟಿ ಖಾತೆ ಎರಡನ್ನೂ ತೆರೆಯಬಹುದು. ಸಿಂಗಲ್ ಅಕೌಂಟ್ ಮೂಲಕ ಗರಿಷ್ಠ 4.5 ಲಕ್ಷ ರೂ. ಮತ್ತು ಜಂಟಿ ಖಾತೆಯ ಮೂಲಕ ಗರಿಷ್ಠ 9 ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಲಭ್ಯವಿರುವ ಬಡ್ಡಿದರಕ್ಕೆ ಅನುಗುಣವಾಗಿ ಪ್ರತಿ ತಿಂಗಳು ನಿಗದಿತ ಮೊತ್ತವು ನಿಮ್ಮ ಖಾತೆಗೆ ಬರುತ್ತಲೇ ಇರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಜಂಟಿ ಖಾತೆಯ ಮೂಲಕ ಯೋಜನೆಯಲ್ಲಿ 9 ಲಕ್ಷ ರೂ ಹೂಡಿಕೆ ಮಾಡಬಹುದು. ಈ ಹೂಡಿಕೆ ಮೇಲೆ ವಾರ್ಷಿಕ ಶೇ 6.6 ರಷ್ಟು ಬಡ್ಡಿ ಸಿಗಲಿದೆ. ಅಂದರೆ ಇದರಲ್ಲಿ ಸಿಗುವ ವಾರ್ಷಿಕ ಬಡ್ಡಿ 59400 ರೂ. ಈ ಮೊತ್ತವನ್ನು ಪ್ರತಿ ತಿಂಗಳು ವಿತರಿಸಲಾಗುವುದು. ಅಂದರೆ ತಿಂಗಳಿಗೆ ಸುಮಾರು 4950 ರೂ. ಬಡ್ಡಿ ಸಿಗುತ್ತದೆ.
ಈ ಖಾತೆ ತೆರೆಯಲು ಐಡಿ ಪ್ರೂಫ್, ರೆಸಿಡೆನ್ಶಿಯಲ್ ಪ್ರೂಫ್ನ ಫೋಟೋಕಾಪಿ, 2 ಪಾಸ್ಪೋರ್ಟ್ ಗಾತ್ರದ ಫೋಟೋ ಗಳು, ಬ್ಯಾಂಕ್ ಖಾತೆ ಸಂಖ್ಯೆಯಾ ಅಗತ್ಯವಿರುತ್ತದೆ. ಅಂಚೆ ಕಚೇರಿಯಲ್ಲಿ ಖಾತೆ ತೆರೆದು ನಿಗದಿತ ಮೊತ್ತವನ್ನು ಹೂಡಿಕೆ ಮಾಡುವುದಾದರೆ ಕ್ಯಾಶ್ ಅಥವಾ ಚೆಕ್ ನೀಡ ಬೇಕಾಗುತ್ತದೆ.
ಮಾಸಿಕ ಆದಾಯ ಯೋಜನೆಯಲ್ಲಿ ಲಾಕ್-ಇನ್ ಅವಧಿ 5 ವರ್ಷಗಳು. ಆದರೆ ಇದನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ಅಂದರೆ, ನೀವು ಬಯಸಿದಷ್ಟು ಕಾಲ ಈ ಯೋಜನೆಯ ಲಾಭವನ್ನು ಪಡೆಯಬಹುದು. ಆದರೆ ಅವಧಿ ಮುಗಿಯುವ ಮುನ್ನ ಹಣವನ್ನು ಹಿಂತೆಗೆದುಕೊಳ್ಳುವುದಾದರೆ ಪೆನಾಲ್ಟಿ ನೀಡಬೇಕಾಗುತ್ತದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯವು ಪ್ರತಿ ತಿಂಗಳು ಸ್ಥಿರ ಆದಾಯವನ್ನು ಬಯಸುವ ಹೂಡಿಕೆದಾರರಿಗೆ ಉತ್ತಮ ಯೋಜನೆಯಾಗಿದೆ. ನಿವೃತ್ತಿಯ ನಂತರ, ಸಿಗುವ ಮೊತ್ತವನ್ನು ಸುರಕ್ಷಿತವಾಗಿರಿಸಿದರೆ, ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಅದರ ಮೂಲಕ ಗಳಿಸಬಹುದು.