ದಶಕಗಳ ಕಾಲದ ಕಾನೂನು ಹೋರಾಟ ಎದುರಿಸಿದ ನಂತರ 2018 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಘೋಷಿಸಿದೆ. ಆದರೂ ಸಲಿಂಗಿಗಳು ಕಳಂಕವನ್ನು ಎದುರಿಸುತ್ತಿದ್ದಾರೆ. ಸಲಿಂಗಿ ಜೋಡಿ ಅಧಿಲಾ ನಸರಿನ್ ಮತ್ತು ಫಾತಿಮಾ ನೂರಾ ದಂಪತಿಯ ಕಥೆಯೂ ಇದೇ ಆಗಿದೆ. ಇದೀಗ ಸುದೀರ್ಘ ಹೋರಾಟದ ಬಳಿಕ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
Indian Lesbian couple wedding : ದಶಕಗಳ ಕಾಲದ ಕಾನೂನು ಹೋರಾಟ ಎದುರಿಸಿದ ನಂತರ 2018 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಘೋಷಿಸಿದೆ. ಆದರೂ ಸಲಿಂಗಿಗಳು ಕಳಂಕವನ್ನು ಎದುರಿಸುತ್ತಿದ್ದಾರೆ. ಸಲಿಂಗಿ ಜೋಡಿ ಅಧಿಲಾ ನಸರಿನ್ ಮತ್ತು ಫಾತಿಮಾ ನೂರಾ ದಂಪತಿಯ ಕಥೆಯೂ ಇದೇ ಆಗಿದೆ. ಇದೀಗ ಸುದೀರ್ಘ ಹೋರಾಟದ ಬಳಿಕ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಅಧಿಲಾ ನಸರಿನ್ ಮತ್ತು ಫಾತಿಮಾ ನೂರಾ ಸಂಬಂಧಕ್ಕೆ ಅವರ ಕುಟುಂಬಗಳು ಒಪ್ಪಿರಲಿಲ್ಲ. ಅಲ್ಲದೆ ಈ ಜೋಡಿ, ಕೇರಳದ ನ್ಯಾಯಾಲಯದಲ್ಲಿ ಹೋರಾಡಿ ಸುದ್ದಿಯಾಗಿತ್ತು.
ಇದೀಗ ಗೆಲುವಿನ ನಗೆ ಬೀರಿರುವ ದಂಪತಿ ಸಮುದ್ರದ ಮುಂದೆ ನಿಂತು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿ ಗಮನಸೆಳೆದಿದ್ದಾರೆ.
ಅಲ್ಲದೆ, ಸುಂದರವಾದ ಲೆಹೆಂಗಾಗಳನ್ನು ಧರಿಸಿ ಪರಸ್ಪರ ಉಂಗುರಗಳನ್ನು ಮತ್ತು ಗುಲಾಬಿ ಹೂಮಾಲೆಯನ್ನು ಬದಲಾಯಿಸಿಕೊಂಡಿದ್ದಾರೆ.
ನಸರಿನ್ ಮತ್ತು ನೂರಾ ಇಬ್ಬರೂ ತಮ್ಮ ಎದುರಾಳಿಗಳ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದೀರ್ಘ ಕಾಲ ಹೋರಾಟ ನಡಿಸಿದ್ದರು.
ಈ ಜೊಡಿ ಹೈಸ್ಕೂಲಿನಲ್ಲಿ ಇದ್ದಾಗ ಭೇಟಿಯಾಗಿದ್ದರು. ಗೆಳೆತನ ಅವರಿಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾಗಿತ್ತು.
ಕೋರ್ಟ್ ಸಲಿಂಗಕಾಮ ಅಪರಾಧವಲ್ಲಿ ಎಂದು ಆದೇಶ ನೀಡಿದ್ದರೂ ಸಹ ನೂರಾ ಮತ್ತು ಅಧಿಲಾರನ್ನು ಬೇರ್ಪಡುವ ಮತ್ತು ಬೆದರಿಕೆ ಹಾಕುವ ಸಂಗತಿಗಳು ಇನ್ನೂ ಮುಂದುವರೆದಿವೆ ಎಂದು ಸಲಿಂಗಿ ದಂಪತಿ ಹೇಳಿಕೊಂಡಿದೆ.
ಸಲಿಂಗ ಒಕ್ಕೂಟಗಳು ಭಾರತೀಯ ಕಾನೂನಿನಿಂದ ಗುರುತಿಸಲ್ಪಟ್ಟಿಲ್ಲ, ಆದರೆ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಈಗ ಕಾನೂನುಬದ್ಧಗೊಳಿಸುವ ಅರ್ಜಿಗಳನ್ನು ಚರ್ಚಿಸುತ್ತಿವೆ.
ಕೇರಳ ಹೈಕೋರ್ಟ್ ನೂರಾ ಮತ್ತು ನಸರಿನ್ ಒಟ್ಟಿಗೆ ಇರಲು ಅನುಮತಿ ನೀಡಿದೆ. ಆದರೆ ವಿವಾಹಿತ ದಂಪತಿ ಯಾವುದೇ ಹಕ್ಕುಗಳು ಅಥವಾ ಸರ್ಕಾರದ ಅನುಕೂಲಗಳಿಗೆ ಅರ್ಹರಾಗಿರುವುದಿಲ್ಲ.