ಸೆಕೆಂಡ್ ಹ್ಯಾಂಡ್ ಕಾರು ಖರೀದಿಯ ಯೋಚನೆಯಲ್ಲಿದ್ದರೆ ಇಲ್ಲಿದೆ ಭರ್ಜರಿ ಅವಕಾಶ

ಕಾರು ಖರೀದಿಸುವುದು ಪ್ರತಿಯೊಬ್ಬ ಮನುಷ್ಯನ ಕನಸಾಗಿರುತ್ತದೆ. ಅನೇಕ ಬಾರಿ ಜನರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಾರೆ. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀಸಿದಿಸಿ, ನಂತರ ಅದನ್ನು ತಮಗೆ ಬೇಕಾದಂತೆ ರಿಪೇರಿ ಮಾಡಿಕೊಳ್ಳುತ್ತಾರೆ.

ನವದೆಹಲಿ : ಕಾರು ಖರೀದಿಸುವುದು ಪ್ರತಿಯೊಬ್ಬ ಮನುಷ್ಯನ ಕನಸಾಗಿರುತ್ತದೆ. ಅನೇಕ ಬಾರಿ ಜನರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಾರೆ. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀಸಿದಿಸಿ, ನಂತರ ಅದನ್ನು ತಮಗೆ ಬೇಕಾದಂತೆ ರಿಪೇರಿ ಮಾಡಿಕೊಳ್ಳುತ್ತಾರೆ. ಇದೀಗ ಕರೋನಾ ಸಾಮಕ್ರಾಮಿಕ ಜನರನ್ನು ಸಾಕಷ್ಟು ದುರ್ಬಲಗೊಳಿಸಿದೆ. ಹೆಚ್ಚಿನ ಜನರು ಬಯಸಿದರೂ ಹೊಸ ಕಾರು ಖರೀದಿ ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ನಿಮಗೆ ಉತ್ತಮ ಆಯ್ಕೆ ಇದೆ. ಈಗ ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳುವುದಾದರೂ ಯಾವ ಕಾರು ಖರೀದಿ ಮಾಡಬೇಕು ಎಂಬ ಪ್ರಶ್ನೆ ಉದ್ಬವಿಸುತ್ತದೆ. ಈ ಗೊಂದಲವನ್ನು ಸ್ವಲ್ಪ ಮಟ್ಟಿಗೆ ನಾವು ಸುಲಭಗೊಳಿಸುತ್ತೇವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ವ್ಯಾಗನಾರ್ ನ ಈ ಸೆಗ್ಮೆಂಟ್ ಬಹಳ ಜನಪ್ರಿಯವಾದದು.  ಕಂಪನಿಯು ಹೊಸ ವ್ಯಾಗನಾರ್ ಅನ್ನು 2019ರಲ್ಲಿ ಬಿಡುಗಡೆ ಮಾಡಿದೆ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ,  ನೀವು ಈ ಕಾರನ್ನು ಸೂಕ್ತ ಬೆಲೆಗೆ ಪಡೆಯಬಹುದು. ಹೊಸ ವಾಹನದ ಶೋ ರೂಂ ಬೆಲೆ ಸುಮಾರು 4.19 ಲಕ್ಷದಿಂದ 5.69 ಲಕ್ಷ ರೂಗಳವರೆಗೆ ಇರುತ್ತದೆ.

2 /6

ಕಂಪನಿಯ ಪ್ರಸಿದ್ಧ ಹ್ಯಾಚ್‌ಬ್ಯಾಕ್ ಕಾರು ಸ್ವಿಫ್ಟ್‌ನ ಪೆಟ್ರೋಲ್ ಮಾದರಿ ಕೂಡ ಸಾಕಷ್ಟು ಜನಪ್ರಿಯವಾಗಿದೆ.  ಎಂಟರಿಂದ ಹತ್ತು ವರ್ಷದ ಹಳೆಯ ಕಾರನ್ನು ಎರಡು ಮೂರು ಲಕ್ಷ ರೂಪಾಯಿಗಳಿಗೆ ಖರೀದಿಸಬಹುದು. ಈ ಕಾರು ಮಾರುತಿಯ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಇದರ ಶಕ್ತಿಯುತ ಎಂಜಿನ್ ಮತ್ತು ಸ್ಪೇಸ್ ಬಳಕೆದಾರರಿಗೆ ಬಹಳ ಇಷ್ಟವಾಗುತ್ತದೆ. 

3 /6

ಈ ಕಾರು ಕಡಿಮೆ ಬಜೆಟ್ ಹೊಂದಿದೆ. ಉತ್ತಮ ಮೈಲೇಜ್‌ ಕೂಡಾ ನೀಡುತ್ತದೆ. ಹೊಸ Alto 800 LXI  ಅಧಿಕೃತ ಬೆಲೆಯ ಬಗ್ಗೆ ಹೇಳುವುದಾದರೆ, ಈ ಕಾರಿನ ಎಕ್ಸ್‌ಶೋರೂಂ ಬೆಲೆ 4.14 ಲಕ್ಷ ರೂ.ಗಳಿಗಿಂತ ಹೆಚ್ಚಿದೆ. ಇದು ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಇದು ಮಾತ್ರವಲ್ಲ, ಎಂಟರಿಂದ ಹತ್ತು ವರ್ಷದ ಹಳೆಯ ಕಾರನ್ನು ಖರೀದಿಸುವುದಾದರೆ, 1.50 ರಿಂದ ಎರಡು ಲಕ್ಷದ ನಡುವೆ ನಿಮಗೆ ಉತ್ತಮ ಆಯ್ಕೆಗಳು ಸಿಗುತ್ತವೆ.  

4 /6

ಪ್ರಸ್ತುತ, ಈ ಕಾರು ಮಾರುತಿಯ ಟಾಪ್ ಕಾರುಗಳಲ್ಲಿ ಒಂದಾಗಿದೆ. ಈ ಕಾರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ವಾಹನವು ಮೈಲೇಜ್, ಸ್ಪೇಸ್,  ವಿನ್ಯಾಸ ಮತ್ತು ಬಣ್ಣದಲ್ಲಿ ಗ್ರಾಹಕರ  ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರು ALPHA, DELTA, ZETA ಮುಂತಾದ ಆವೃತ್ತಿಗಳೊಂದಿಗೆ ಬರುತ್ತದೆ. 4.5 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ALPHA ವನ್ನು ಖರೀದಿಸಬಹುದು. ಆದರೆ, DELTA, ZETA ಗೆ ಸ್ವಲ್ಪ ಹೆಚ್ಚಿನ ಬೆಲೆ ಪಾವತಿಸಬೇಕಾಗುತ್ತದೆ.    

5 /6

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಂಪನಿಯ ಅತ್ಯುತ್ತಮ ವಿನ್ಯಾಸ, ಮೈಲೇಜ್ ಮತ್ತು ವೈಶಿಷ್ಟ್ಯಗಳಿಂದಾಗಿ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸೇರಿದೆ. ಈ ಕಾರಿನ ಬೆಲೆ 6.81 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 10.20 ಲಕ್ಷ ರೂಗಳವರೆಗೆ ಇದೆ. ಆದರೆ ಎಂಟರಿಂದ ಹತ್ತು ವರ್ಷದೊಳಗಿನ ಈ ಕಾರನ್ನು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ 3.50 ಲಕ್ಷ ರೂಗಳಿಗೆ ಖರೀದಿಸಬಹುದು.

6 /6

ಹ್ಯುಂಡೈನ ಈ ಕಾರು ಸಾಕಷ್ಟು ಜನಪ್ರಿಯವಾಗಿದೆ. ಈ ಕಾರಿನ ಹೊಚ್ಚ ಹೊಸ ಮಾದರಿ ದೆಹಲಿಯ ಎಕ್ಸ್ ಶೋರೂಂ ಬೆಲೆ  9,99.990 ರೂ. ನೀವು 3.50 ಲಕ್ಷ ರೂ.ಗಳ ಆರಂಭಿಕ ಬೆಲೆಗೆ ಸೆಕೆಂಡ್ ಹ್ಯಾಂಡ್ ಕ್ರೆಟಾವನ್ನು ಖರೀದಿಸಬಹುದು.