Vastu Tips for Home: ಮನೆಯಲ್ಲಿ ಈ ವಾಸ್ತು ಮೂರ್ತಿಗಳನ್ನು ಇಟ್ಟರೆ ಶೀಘ್ರವೇ ಅಪಾರ ಧನ ಪ್ರಾಪ್ತಿಯಾಗುತ್ತೆ!

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಯಶಸ್ಸು ಮತ್ತು ಪ್ರಗತಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಇಂತಹ ಅನೇಕ ವಿಷಯಗಳನ್ನು ಹೇಳಲಾಗಿದೆ, ಇನ್ನು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಿಸುವ ಕೆಲ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅವುಗಳು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ.

Vastu Tips for Home: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಯಶಸ್ಸು ಮತ್ತು ಪ್ರಗತಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಇಂತಹ ಅನೇಕ ವಿಷಯಗಳನ್ನು ಹೇಳಲಾಗಿದೆ, ಇನ್ನು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಿಸುವ ಕೆಲ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅವುಗಳು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತದೆ.

1 /4

ವಾಸ್ತು ಪ್ರಕಾರ, ಮನೆಯಲ್ಲಿ ಹಸುವಿನ ವಿಗ್ರಹವನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಕರು ಮತ್ತು ಹಸು ಇರುವ ವಿಗ್ರಹವನ್ನು ಇಟ್ಟರೆ ಉತ್ತಮ. ಮನೆಯಲ್ಲಿ ಹಿತ್ತಾಳೆಯ ಹಸುವಿನ ವಿಗ್ರಹವನ್ನು ಇಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಮಕ್ಕಳ ಮನಸ್ಸು ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತದೆ

2 /4

ಆಮೆಯನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ಪ್ರಗತಿ ಮತ್ತು ಸಮೃದ್ಧಿಗಾಗಿ, ಆಮೆಯ ವಿಗ್ರಹವನ್ನು ಮನೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ವಾಸಿಸುವವರ ಆಯುಷ್ಯ ಹೆಚ್ಚುತ್ತದೆ. ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಆಮೆ ಇಡುವುದು ಉತ್ತಮ.

3 /4

ಮನೆಯಲ್ಲಿ ಹಂಸ ಜೋಡಿಯು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ಇಟ್ಟುಕೊಳ್ಳಿ. ಮನೆಯ ದಕ್ಷಿಣ ದಿಕ್ಕಿನಲ್ಲಿ ಹಂಸ ವಿಗ್ರಹವನ್ನು ಇಡುವುದು ಪ್ರಯೋಜನಕಾರಿ. ಇದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿ, ಅಭಿಮಾನ ಹೆಚ್ಚುತ್ತದೆ.

4 /4

ಮನೆಯಲ್ಲಿ ಘನ ಬೆಳ್ಳಿ ಅಥವಾ ಹಿತ್ತಾಳೆಯ ಆನೆಯ ಪ್ರತಿಮೆಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಆನೆಯನ್ನು ಐಶ್ವರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಹಣದ ಆಗಮನದ ಹಲವು ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಮಲಗುವ ಕೋಣೆಯಲ್ಲಿ ಆನೆಯ ಪ್ರತಿಮೆಯನ್ನು ಇಡುವುದು ವ್ಯಕ್ತಿಯ ವೈವಾಹಿಕ ಜೀವನದಲ್ಲಿ ಸಂತೋಷವನ್ನು ತರುತ್ತದೆ.