ಇಲ್ಲಿರುವ ಸುಂದರ ಕಣಿವೆಗಳು, ಸರೋವರಗಳು ಮತ್ತು ಹಸಿರು ನಿಮ್ಮನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ, ಮತ್ತೆ ಮರಳಿ ಬರಬೇಕು ಎಂದು ಅನ್ನಿಸುವುದಿಲ್ಲ.
ನವದೆಹಲಿ : ನೀವು ಕಡಿಮೆ ಬಜೆಟ್ನಲ್ಲಿ ಟೂರ್ ನಡೆಸುವ ಬಗ್ಗೆ ಯೋಜಿಸುತ್ತಿದ್ದರೆ, ಅನೇಕ ಸುಂದರವಾದ ಗಿರಿಧಾಮಗಳಿಗೆ ಭೇಟಿ ನೀಡಬಹುದು. ಈ ತಾಣಗಳಿಗೆ ಹೋಗಲು ಹೆಚ್ಚು ಹಣ ಖರ್ಚು ಮಾಡುವ ಅಗತ್ಯವೂ ಇಲ್ಲ. ಇಲ್ಲಿರುವ ಸುಂದರ ಕಣಿವೆಗಳು, ಸರೋವರಗಳು ಮತ್ತು ಹಸಿರು ನಿಮ್ಮನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ, ಮತ್ತೆ ಮರಳಿ ಬರಬೇಕು ಎಂದು ಅನ್ನಿಸುವುದಿಲ್ಲ, ಅಷ್ಟು ಸುಂದರವಾಗಿದೆ ಈ ಪ್ರದೇಶಗಳು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಪಂಚಮಡಿ ಸತ್ಪುರ ಶ್ರೇಣಿಯ ಕಣಿವೆಯಲ್ಲಿದೆ. ಈ ಗಿರಿಧಾಮವನ್ನು ಸತ್ಪುರದ ರಾಣಿ ಎಂದೂ ಕರೆಯಲಾಗುತ್ತದೆ. ಪಂಚಮಡಿ ಮಧ್ಯಪ್ರದೇಶದ ಅತ್ಯುನ್ನತ ಗಿರಿಧಾಮವಾಗಿದೆ. ಮಹಾಭಾರತದ ಅವಧಿಯಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷವೂ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಚಿಕ್ಕಲ್ದಾರಾ , ಇದು ಮಹಾರಾಷ್ಟ್ರದ ಸುಂದರ ಗಿರಿಧಾಮ. ಇಲ್ಲಿ ಭೀಮ ಕೀಚಕನನ್ನು ಯುದ್ಧದಲ್ಲಿ ಸೋಲಿಸಿ, ಕೊಂದು ಇದೇ ಕಣಿವೆಗೆ ಎಸೆಡಿದ್ದ ಎನ್ನುವುದು ಪೌರಾಣಿಕ ನಂಬಿಕೆ. ಇಲ್ಲಿ ದೇವಿ ಪಾಯಿಂಟ್, ಹರಿಕೇನ್ ಪಾಯಿಂಟ್, ಮೊಜಾರಿ ಪಾಯಿಂಟ್ ಮತ್ತು ಪ್ರಾಸ್ಪೆಕ್ಟ್ ಪಾಯಿಂಟ್ ನಂತಹ ಸ್ಥಳಗಳಿಗೂ ಭೇಟಿ ನೀಡಬಹುದು.
ನೀವು ತುಂಬಾ ಸುಂದರವಾದ ಮತ್ತು ಶಾಂತಿಯುತ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದರೆ, ತೋರನ್ ಮಲ್ಗೆ ಹೋಗಬಹುದು. ಇಲ್ಲಿ ಭೇಟಿ ನೀಡಲು ಹಲವು ದೇವಸ್ಥಾನಗಳಿವೆ. ಇದಲ್ಲದೇ, ನೀವು ಇಲ್ಲಿ ಸನ್ ಸೆಟ್ ಪಾಯಿಂಟ್, ಗೋರಕ್ಷನಾಥ ದೇವಸ್ಥಾನ, ಲೋಟಸ್ ಲೇಕ್, ಆವಾಶ್ಬರಿ ಪಾಯಿಂಟ್ ಮತ್ತು ಚೆಕ್ ಡ್ಯಾಮ್ ಗಳಿಗೆ ಸಹ ಭೇಟಿ ನೀಡಬಹುದು.
ಮಾಂಡ್ ವಾಘಡ್ ನಗರವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಮಂಡೂ ವಿಂಧ್ಯ ಶ್ರೇಣಿಗಳಲ್ಲಿದೆ. ಇಲ್ಲಿ ನೀವು ರೂಪಮತಿಯ ಮಂಟಪ, ರೀವಾ ಕುಂಡ್, ಜಾಮಿ ಮಸೀದಿ, ಹಿಂಡೋಲ ಮಹಲ್, ಬಾಜ್ ಬಹದ್ದೂರ್ ಅರಮನೆ ಮತ್ತು ಶ್ರೀಮಂದವಾಘರ್ ದೇಗುಲವನ್ನು ನೋಡಬಹುದು.