IAS Success Story: 2ನೇ ಪ್ರಯತ್ನದಲ್ಲಿಯೇ UPSC ಪರೀಕ್ಷೆ ಪಾಸ್ ಮಾಡಿದ ಅನುಪಮಾ ಅಂಜಲಿ…

ಸದಾ ಪಾಸಿಟಿವ್ ಆಗಿದ್ದು ಪರೀಕ್ಷೆಗೆ ಸಿದ್ಧತೆ ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸ್ಪರ್ಧಾಕಾಂಕ್ಷಿಗಳಿಗೆ ಅನುಪಮಾ ಅಂಜಲಿ ಸಲಹೆ ನೀಡಿದ್ದಾರೆ.  

ಯುಪಿಎಸ್‍ಸಿ ನಾಗರಿಕ ಸೇವಾ ಪರೀಕ್ಷೆ(Union Public Services Commission exam)ಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಬಲು ಕಠಿಣವೆಂದೇ ಪರಿಗಣಿಸಲಾಗಿರುವ ಯುಪಿಎಸ್‌ಸಿ(UPSC) ಪರೀಕ್ಷೆಗೆ ತಯಾರಿಯಾಗಲು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುವುದು ಬಹುಮುಖ್ಯ. ಮುಖ್ಯವಾಗಿ ಮಾನಸಿಕ ಸಾಮರ್ಥ್ಯ ಅಧ್ಯಯನಗಳ ಮೇಲೆ ಗಮನಹರಿಸಬೇಕಾಗುತ್ತದೆ. ನೀವು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದರೆ ಸದಾ ಪಾಸಿಟಿವ್ ಆಗಿರಲು ಸಹಕಾರಿಯಾಗುತ್ತದೆ. ತಮ್ಮ 2ನೇ ಪ್ರಯತ್ನದಲ್ಲಿಯೇ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಯಶಸ್ಸು ಕಾಣುವ ಮೂಲಕ ಅನುಪಮಾ ಅಂಜಲಿ(Anupama Anjali) ಐಎಎಸ್ ಅಧಿಕಾರಿಯಾಗಿ ಸಾಧನೆ ಮಾಡಿದ್ದಾರೆ. 2018ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅನುಪಮಾ ಅವರ ಸಾಧನೆಯು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅನುಪಮಾ ಅಂಜಲಿಯವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಮತ್ತು ತನ್ನ 2ನೇ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

2 /5

ಅನುಪಮಾ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡುವಾಗ ಬೇಸರಗೊಳ್ಳುತ್ತಾರೆ. ಇದು ತುಂಬಾ ಸಾಮಾನ್ಯವಾದ ಸಮಸ್ಯೆ. ಆದ್ದರಿಂದ ಓದುವಾಗ ಆಗಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಬೇಕು. ಈ ವಿರಾಮಗಳಿಂದ ಹೊಸ ಹುರುಪು-ಹುಮ್ಮಸ್ಸು ಪುನಶ್ಚೇತನಗೊಳ್ಳುತ್ತದೆ. ಪ್ರತಿಯೊಬ್ಬರೂ ವ್ಯಾಯಾಮ ಮತ್ತು ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಿಮಗೆ ಫಿಟ್ ಮತ್ತು ಪಾಸಿಟಿವ್ ಆಗಿರಲು ಸಹಕಾರಿಯಾಗುತ್ತದೆ.   

3 /5

ಅನುಪಮಾ ಅವರ ತಂದೆ ಐಪಿಎಸ್ ಅಧಿಕಾರಿ ಮತ್ತು ಭೋಪಾಲ್‌ನಲ್ಲಿ ನಿಯೋಜನೆಗೊಂಡಿದ್ದಾರೆ. ಅನುಪಮಾ ಅವರು ಸಮಾಜ ಸೇವಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ.

4 /5

ಯುಪಿಎಸ್‌ಸಿ ಜರ್ನಿಯಲ್ಲಿ ಪ್ರತಿಯೊಬ್ಬರೂ ನಕಾರಾತ್ಮಕ ಆಲೋಚನೆಗಳನ್ನು ಕೈಬಿಡಬೇಕು. ಪರೀಕ್ಷೆಗೆ ತಯಾರಿ ನಡೆಸುವಾಗ ಬಹುತೇಕರು ಖಿನ್ನತೆಯ ಸಮಸ್ಯೆಗೆ ಸಿಲುಕುತ್ತಾರೆ.  ಆದರೆ ನಾವು ಯಾವಾಗಲೂ ಪಾಸಿಟಿವ್ ಆಗಿರಬೇಕು. ಇದರಿಂದ ನೀವು ಉತ್ತಮವಾಗಿ ಯೋಚಿಸಲು ಸಾಧ್ಯವಾಗುತ್ತದೆ. ಸದಾ ಪಾಸಿಟಿವ್ ಮೈಂಡ್ ಸೆಟ್ ಹೊಂದಿರುವವರು ಮಾತ್ರ ಯಶಸ್ಸು ಸಾಧಿಸಲು ಸಾಧ್ಯವೆಂದು ಅವರು ಹೇಳಿದ್ದಾರೆ.    

5 /5

ಅನುಪಮಾ ಪ್ರಕಾರ, ಯುಪಿಎಸ್‌ಸಿಗೆ ತಯಾರಿ ಮಾಡುವಾಗ ಎಲ್ಲ ರೀತಿಯ ಗೊಂದಲಗಳಿಂದ ದೂರವಿರಬೇಕು. ಕುಟುಂಬ ಅಥವಾ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಬದಲು ಅಧ್ಯಯನದಲ್ಲಿ ಬ್ಯುಸಿಯಾಗಿರಬೇಕು. ಕುಟುಂಬ ಕಾರ್ಯಗಳನ್ನು ಸಹ ತಪ್ಪಿಸಬೇಕು. ಸದಾ ಪಾಸಿಟಿವ್ ಆಗಿದ್ದು ಪರೀಕ್ಷೆಗೆ ಸಿದ್ಧತೆ ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸ್ಪರ್ಧಾಕಾಂಕ್ಷಿಗಳಿಗೆ ಸಲಹೆ ನೀಡಿದ್ದಾರೆ.