ಹೀಗೆ ಮಾಡಿದರೆ ಪತಿ, ಪತ್ನಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂ ಪಿಂಚಣಿ

ನಿಮ್ಮ ನಿವೃತ್ತಿ ಜೀವನವನ್ನು ಸುರಕ್ಷಿತವಾಗಿರಿಸಲು, ಇಂದು ನಮ್ಮ ಹೂಡಿಕೆ ಎಲ್ಲಿ ಮಾಡುತ್ತೇವೆ ಎನ್ನುವುದು ಕೂಡಾ ಮುಖ್ಯ. 

ನವದೆಹಲಿ : ವೃದ್ಧಾಪ್ಯದ ಜೀವನ ನೆಮ್ಮದಿಯಿಂದ ಕಳೆಯಬೇಕಾದರೆ, ಇಂದೇ ಅದರ ಬಗ್ಗೆ ಯೋಚನೆ ಮಾಡುವುದು ಅಗತ್ಯವಾಗಿರುತ್ತದೆ.   ನಿಮ್ಮ ನಿವೃತ್ತಿ ಜೀವನವನ್ನು ಸುರಕ್ಷಿತವಾಗಿರಿಸಲು, ಇಂದು ನಮ್ಮ ಹೂಡಿಕೆ ಎಲ್ಲಿ ಮಾಡುತ್ತೇವೆ ಎನ್ನುವುದು ಕೂಡಾ ಮುಖ್ಯ. ಹೀಗಾಗಿ, ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಸರ್ಕಾರದ ಅಟಲ್ ಪಿಂಚಣಿ ಯೋಜನೆ ಉತ್ತಮವಾದ ಆಯ್ಕೆಯಾಗಿರುತ್ತದೆ.  ಈ ಯೋಜನೆಯಡಿ, ಪತಿ ಮತ್ತು ಪತ್ನಿ ಪ್ರತ್ಯೇಕ ಖಾತೆಗಳ ಮೂಲಕ ಮಾಸಿಕ 10,000 ರೂ. ಪಿಂಚಣಿ ಪಡೆಯಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗಾಗಿ ಈ ಸ್ಕೀಮನ್ನು ಆರಂಭಿಸಲಾಗಿತ್ತು. ಆದರೆ ಈಗ 18 ರಿಂದ 40 ವರ್ಷ ವಯಸ್ಸಿನ ಎಲ್ಲರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಪಿಂಚಣಿ ಪಡೆಯಬಹುದು. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಖಾತೆ ಹೊಂದಿರುವವರು, ಅದರಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ಠೇವಣಿದಾರರಿಗೆ 60 ವರ್ಷಗಳ ನಂತರ ಪಿಂಚಣಿ ಸಿಗುತ್ತದೆ. 

2 /5

ಅಟಲ್ ಪಿಂಚಣಿ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದು ಹೂಡಿಕೆದಾರನ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಈ ಯೋಜನೆಯಡಿ ನೀವು ಕನಿಷ್ಟ ಮಾಸಿಕ 1,000 ರೂ, 2000 ರೂ, 3000, 4000 ರೂ ಮತ್ತು ಗರಿಷ್ಠ 5,000 ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ.  ಇದರಲ್ಲಿ ನೋಂದಾಯಿಸಿಕೊಳ್ಳಬೇಕಾದರೆ,  ಉಳಿತಾಯ ಖಾತೆ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಇರಬೇಕು.

3 /5

 ಈ ಯೋಜನೆಯಡಿ, 18 ರಿಂದ 40 ವರ್ಷ ವಯಸ್ಸಿನ ಜನರು ಅಟಲ್ ಪಿಂಚಣಿ ಯೋಜನೆಯಲ್ಲಿ ನಾಮಿನೇಶನ್ ಮಾಡಬಹುದು. ಇದಕ್ಕಾಗಿ, ಅರ್ಜಿದಾರರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಕೇವಲ ಒಂದು ಪಿಂಚಣಿ ಖಾತೆಯನ್ನು ಮಾತ್ರ ಹೊಂದಬಹುದು. ಈ ಯೋಜನೆಯಡಿ ನೀವು ಎಷ್ಟು ಬೇಗ ಹೂಡಿಕೆ ಮಾಡುತ್ತೀರೋ ಅಷ್ಟು ಲಾಭವನ್ನು ಪಡೆಯಬಹುದು. 18 ನೇ ವಯಸ್ಸಿನಲ್ಲಿಯೇ ಅಟಲ್ ಪಿಂಚಣಿ ಯೋಜನೆಗೆ ಸೇರಿಕೊಂಡರೆ, ಪ್ರತಿ ತಿಂಗಳು 5000 ರೂ ಮಾಸಿಕ ಪಿಂಚಣಿ ಪಡೆಯಬೇಕಾದರೆ, ತಿಂಗಳಿಗೆ ಕೇವಲ 210 ರೂ ಹೂಡಿಕೆ ಮಾಡಬೇಕಾಗುತ್ತದೆ

4 /5

39 ವರ್ಷಕ್ಕಿಂತ ಕಡಿಮೆ ವಯಸ್ಸಿನ ದಂಪತಿ ಪ್ರತ್ಯೇಕವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಅವರು 60 ವರ್ಷದ ನಂತರ ಪ್ರತಿ ತಿಂಗಳು 10,000 ರೂ. ಜಂಟಿ ಪಿಂಚಣಿ ಪಡೆಯುತ್ತಾರೆ. 30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ದಂಪತಿ, APY ಖಾತೆಗಳಿಗೆ ತಿಂಗಳಿಗೆ 577 ರೂ. ಪಾವತಿಸಬೇಕು. ದಂಪತಿ ವಯಸ್ಸು 35 ವರ್ಷವಾಗಿದ್ದರೆ, ಅವರು ಪ್ರತಿ ತಿಂಗಳು 902 ರೂಗಳನ್ನು ತಮ್ಮ APY ಖಾತೆಗೆ ಜಮಾ ಮಾಡಬೇಕು. ದಂಪತಿಯಲ್ಲಿ ಯಾರಾದರೂ ಸತ್ತರೆ, ಮತ್ತೊಬ್ಬ ಪಾಲುದಾರನಿಗೆ 8.5 ಲಕ್ಷ ರೂ ಸಿಗಲಿದೆ. ಅಲ್ಲದೆ ಜೀವನಪೂರ್ತಿ ಪಿಂಚಣಿಯೂ ಲಭ್ಯವಾಗಲಿದೆ. 

5 /5

 ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ಗಳವರೆಗೆ ತೆರಿಗೆ ರಿಯಾಯಿತಿ ಸಿಗಲಿದೆ.. ಇದಲ್ಲದೇ, ಕೆಲವು ಸಂದರ್ಭಗಳಲ್ಲಿ ರೂ .50,000 ವರೆಗಿನ ಹೆಚ್ಚುವರಿ ತೆರಿಗೆ ಪ್ರಯೋಜನ ಲಭ್ಯವಾಗಲಿದೆ. ಒಟ್ಟಾರೆಯಾಗಿ, ಈ ಯೋಜನೆಯಲ್ಲಿ ರೂ 2 ಲಕ್ಷದವರೆಗೆ ಡಿಡೆಕ್ಷನ್ ಸಿಗಲಿದೆ.