ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಿಚ್ಚ ಸುದೀಪ್‌ ‘ವಿಕ್ರಾಂತ್ ರೋಣ’ ಹವಾ ಹೆಂಗಿತ್ತು..?

ಕನ್ನಡ ಸಿನಿಮಾಗಳ ತಾಕತ್ತು ಎಂತಹದ್ದು ಅನ್ನೋದನ್ನ ಪರಭಾಷಿಕರು ಅರ್ಥ ಮಾಡಿಕೊಂಡಿದ್ದಾರೆ. ಒಂದಾದ ಮೇಲೆ ಮತ್ತೊಂದು ರೆಕಾರ್ಡ್‌ ಬ್ರೇಕ್‌ ಮಾಡುವ ಸಿನಿಮಾಗಳು ಸ್ಯಾಂಡಲ್‌ವುಡ್‌ ಖಜಾನೆಯಿಂದ ಹೊರಬರುತ್ತಿವೆ. ಈ ಹೊತ್ತಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡ ಸಿನಿಮಾ ಹವಾ ಎಬ್ಬಿಸಿದೆ. ಅದು ಬೇರೆ ಯಾವುದೂ ಅಲ್ಲ, ಅಭಿಮಾನಿಗಳ ಪಾಲಿನ ಪ್ರೀತಿಯ ‘ಅಭಿನಯ ಚಕ್ರವರ್ತಿ’ ನಟ ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’  ಸಿನಿಮಾ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

2 /5

ಜುಲೈ 28ಕ್ಕೆ ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗಲಿದ್ದು, ಕೌಂಟ್‌ಡೌನ್‌ ಶುರುವಾಗಿದೆ. ಕಿಚ್ಚ ಸುದೀಪ್‌ ಅಭಿಮಾನಿಗಳು ಸಂಭ್ರಮಾಚರಣೆಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ.

3 /5

ಒಟ್ಟಾರೆ ಹೇಳೋದಾದರೆ ಸ್ಯಾಂಡಲ್‌ವುಡ್‌ ಪಾಲಿಗೆ  ‘ವಿಕ್ರಾಂತ್ ರೋಣ’ ಚಿತ್ರ ಮತ್ತೊಂದು ಇತಿಹಾಸ ಸೃಷ್ಟಿಸೋದು ಪಕ್ಕಾ. ಹೀಗಾಗಿ  ‘ವಿಕ್ರಾಂತ್ ರೋಣ’ ಕಣ್ತುಂಬಿಕೊಳ್ಳಲು ಕೋಟಿ ಕೋಟಿ ಕನ್ನಡಿಗರು ಸಜ್ಜಾಗಿದ್ದಾರೆ

4 /5

ಅಂದಹಾಗೆ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಒಂದು ಹಾಲಿವುಡ್‌ ಬಾಗಿಲು ಬಡಿದು ಸಂಚಲನ ಸೃಷ್ಟಿಸುತ್ತಿದೆ. ‘ವಿಕ್ರಾಂತ್ ರೋಣ’ ಆಂಗ್ಲರಿಗೂ ಕನ್ನಡ ಚಿತ್ರಗಳ ತಾಕತ್ತು ತೋರಿಸಲು ಸಜ್ಜಾಗಿದೆ. ಇಂತಹ ಬಹುನಿರೀಕ್ಷಿತ ಸಿನಿಮಾದ 3ನೇ ಹಾಡು ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದು, ಯುಟ್ಯೂಬ್‌ ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ‘ರಕ್ಕಮ್ಮ’ ಬಳಿಕ ‘ರಾಜಕುಮಾರಿ’ ಹಾಡು ರಿಲೀಸ್‌ ಆಗಿತ್ತು. ಇದೆಲ್ಲದರ ಬಳಿಕ ‘ವಿಕ್ರಾಂತ್ ರೋಣ’ ಸಿನಿಮಾದ 3ನೇ ಹಾಡು ‘ಹೇ ಫಕೀರ’ ರಿಲೀಸ್‌ ಆಗಿದ್ದು, ಅಭಿನಯ ಚಕ್ರವರ್ತಿ ಸುದೀಪ್‌ ಅಭಿಮಾನಿಗಳ ಕಾತುರ ಮತ್ತಷ್ಟು ಹೆಚ್ಚಾಗಿದೆ. ಇದರ ಜೊತೆಗೆ ನಟ ಸುದೀಪ್‌ ಮತ್ತು ತಂಡ ಭರ್ಜರಿಯಾಗಿ ಪ್ರಮೋಷನ್‌ ನಡೆಸಿದೆ.

5 /5

ಅಂದಹಾಗೆ ಜುಲೈ 28ಕ್ಕೆ ವಿಕ್ರಾಂತ್‌ ರೋಣ ಜಗತ್ತಿನಾದ್ಯಂತ ಸಾವಿರಾರು ಸ್ಕ್ರೀನ್‌ ಮೇಲೆ ಮೂಡಿಬರಲಿದೆ. ಅದ್ಧೂರಿಯಾಗಿ ಹಾಲಿವುಡ್‌ಗೂ ಎಂಟ್ರಿ ಕೊಡುತ್ತಿದೆ ಕನ್ನಡಿಗರ ಹೆಮ್ಮೆಯ ಕನ್ನಡ ಸಿನಿಮಾ. ಹೀಗೆ ‘ವಿಕ್ರಾಂತ್ ರೋಣ’  ನೂರಾರು ದಾಖಲೆ ಪುಡಿಪುಡಿ ಮಾಡಲು ಸಿದ್ಧವಾಗಿದ್ದು, ಈ ಸಂದರ್ಭದಲ್ಲಿ ಪ್ರಮೋಷನ್‌ ಕಾರ್ಯಗಳು ಕೂಡ ಭರದಿಂದ ಸಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಮೋಷನ್ ಜಬರ್ದಸ್ತ್ ಆಗಿದೆ. 13 ವರ್ಷ‌ಗಳ ನಂತರ ಕಿಚ್ಚ ಸುದೀಪ್‌ ರಾಷ್ಟ್ರ ರಾಜಧಾನಿ ದೆಹಲಿಗೆ ವಿಸಿಟ್‌ ಕೊಟ್ಟು ಹವಾ ಎಬ್ಬಿಸಿದ್ದಾರೆ.