ATMನಲ್ಲಿ ಹರಿದ ನೋಟು ಸಿಕ್ಕಿದರೆ ತಕ್ಷಣ ಈ ಕೆಲಸ ಮಾಡಿ ಫಟಾಫಟ್ exchange ಆಗುತ್ತದೆ ನೋಟು

ಎಟಿಎಂಗಳಿಂದ ಹರಿದ ನೋಟುಗಳು ಸಿಗುತ್ತಿರುವುದು ಇತ್ತೀಚಿನ ಸಾಮಾನ್ಯ ಸಮಸ್ಯೆಯಾಗಿದೆ. ಇದೊಂದು ಗಂಭೀರ ಸಮಸ್ಯೆ ಕೂಡಾ ಹೌದು .

ನವದೆಹಲಿ : ಎಟಿಎಂನಿಂದ ಹಣವನ್ನು ತೆಗೆಯುವಾಗ ಹರಿದ ನೋಟು  ಹೊರಬಂದರೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಎಟಿಎಂನಿಂದ ಹರಿದ ನೋಟು ಪಡೆದರೆ ಅದನ್ನು ಬಹಳ ಸುಲಭವಾಗಿ ಬದಲಾಯಿಸಿಕೊಳ್ಳಬಹುದು. ಅಂದರೆ ಹರಿದ ನೋಟಿನ ಬದಲಿಗೆ ಸರಿಯಾಗಿರುವ ನೋಟನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಹೆಚ್ಚು ಏನೂ ಮಾಡಬೇಕಿಲ್ಲ. ಒಂದು ಸಣ್ಣ ಪ್ರಕ್ರಿಯೆ ಮುಗಿಸಿದರೆ ಸಾಕು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಎಟಿಎಂಗಳಿಂದ ಹರಿದ ನೋಟುಗಳು ಸಿಗುತ್ತಿರುವುದು ಇತ್ತೀಚಿನ ಸಾಮಾನ್ಯ ಸಮಸ್ಯೆಯಾಗಿದೆ. ಇದೊಂದು ಗಂಭೀರ ಸಮಸ್ಯೆ ಕೂಡಾ ಹೌದು . ಈ ಸಮಸ್ಯೆಯ ಪರಿಹಾರಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಸಿಸ್ಟಮ್ ಅನ್ನು ಸಿದ್ಧಪಡಿಸಿದೆ. 

2 /5

ಎಟಿಎಂನಿಂದ ಹರಿದ ನೋಟುಗಳು ಸಿಕ್ಕಿದರೆ ಮೊದಲು, ಆ ನೋಟಿ ಯಾವ ಎಟಿಎಂನಿಂದ ಪಡೆಯಾಗಿದೆ ಆ ಬ್ಯಾಂಕ್ ಅನ್ನು ಸಂಪರ್ಕಿಸಿ. ಬ್ಯಾಂಕ್ ನಿಮಗೆ ಒಂದು ಫಾರ್ಮ್ ಭಾರ್ತಿ ಮಾಡಲು ಹೇಳುತ್ತದೆ. ಇದರಲ್ಲಿ ನೀವು ಎಟಿಎಂನಿಂದ ಹಣವನ್ನು ತೆಗೆದುಕೊಂಡ ದಿನಾಂಕ, ಸಮಯ ಇವುಗಳ ವಿವರವನ್ನು ಭರ್ತಿ ಮಾಡಬೇಕು. ಎಟಿಎಂನಿಂದ ಹಣ ತೆಗೆದ ಸ್ಲಿಪ್ ಇದ್ದರೆ, ಅದನ್ನು ಅಪ್ಲಿಕೇಶನ್‌ನೊಂದಿಗೆ ಲಗತ್ತಿಸಿ. ಒಂದು ವೇಳೆ ಸ್ಲಿಪ್ ಇಲ್ಲದೆ ಹೋದರೆ, ಮೊಬೈಲ್ನಲ್ಲಿ ಸ್ವೀಕರಿಸಿದ  ಎಸ್ಎಂಎಸ್  ಮಾಹಿತಿಯನ್ನು ನೀಡಬೇಕಾಗುತ್ತದೆ.  

3 /5

ನೀವು ಈ ಅರ್ಜಿಯನ್ನು ಸಲ್ಲಿಸಿದ ಕೂಡಲೇ, ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ, ನಿಮ್ಮಿಂದ ಹರಿದ ನೋಟುಗಳನ್ನು ತೆಗೆದುಕೊಂಡು ಪ್ರತಿಯಾಗಿ ಹೊಸ ನೋಟುಗಳನ್ನು ನೀಡುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯು ಕೆಲವೇ ನಿಮಿಷಗಳಲ್ಲಿ ನಡೆದು ಹೋಗುತ್ತದೆ.   

4 /5

ಆರ್‌ಬಿಐನ ನಿಯಮಗಳ ಪ್ರಕಾರ, ಎಟಿಎಂನಿಂದ ಹರಿದ ನೋಟಿ ಸಿಕ್ಕಿದರೆ ನೇರವಾಗಿ ಬ್ಯಾಂಕ್‌ಗೆ ತೆಗೆದುಕೊಂಡು ಬ್ಯಾಂಕ್ ಸಿಬ್ಬಂದಿಯಲ್ಲಿ ಹರಿದ ನೋಟು ಎಟಿಎಂನಿಂದ ಹೊರಬಂದಿದ್ದು,  ಅದನ್ನು ಬದಲಾಯಿಸುವಂತೆ ಕೇಳಬಹುದು. ರಿಸರ್ವ್ ಬ್ಯಾಂಕಿನ ಎಕ್ಸ್ಚೇಂಜ್ ಕರೆನ್ಸಿ ರೂಲ್ಸ್ 2017 ರ ಪ್ರಕಾರ, ಎಟಿಎಂನಿಂದ ಹರಿದ ನೋಟ್ ಬಂದರೆ, ಆ ನೋಟನ್ನು ಬದಲಾಯಿಸಿ ಕೊಡುವುದು ಬ್ಯಾಂಕ್ ಜವಾಬ್ದಾರಿಯಾಗಿದೆ

5 /5

ಕಾರ್ಯವಿಧಾನದ ಹೆಸರಿನಲ್ಲಿ ಬ್ಯಾಂಕ್ ನಿಮ್ಮನ್ನು ದೀರ್ಘಕಾಲ ಕಾಯುವಂತೆ ಮಾಡಿದರೆ ಅಥವಾ ನೋಟು ವಿನಿಮಯ ಮಾಡಲು ನಿರಾಕರಿಸಿದರೆ, ನೀವು ಪೊಲೀಸರಿಗೆ ದೂರು ನೀಡಬಹುದು. ಆರ್‌ಬಿಐ ಪ್ರಕಾರ, ಈ ರೀತಿ ನಡೆದುಕೊಳ್ಳುವ ಬ್ಯಾಂಕುಗಳಿಗೆ 10,000 ರೂ ದಂಡ ವಿಧಿಸಲಾಗುವುದು.