ಅದ್ಧೂರಿಯಾಗಿ ಸಪ್ತಪದಿ ತುಳಿದ ಪರಿಣಿತಿ- ರಾಘವ್‌ ಚಡ್ಡಾ..! ಗ್ರ್ಯಾಂಡ್‌ ಮದುವೆ ಬಜೆಟ್ ಎಷ್ಟು ಗೊತ್ತಾ..?

Parineeti chopra Raghav chadha wedding : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಮದುವೆ ಅದ್ಧೂರಿಯಾಗಿ ಜರುಗಿದೆ. ಈ ಕುರಿತ ಫೋಟೋಗಳು ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಇದರ ಬೆನ್ನಲ್ಲೆ ಈ ಸ್ಟಾರ್‌ ಜೋಡಿ ತಮ್ಮ ಮದುವೆಗೆ ಖರ್ಚು ಮಾಡಿದ ಹಣದ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಈ ಕುರಿ ಕಂಪ್ಲೀಟ್‌ ವರದಿ ಇಲ್ಲಿದೆ ನೋಡಿ..

1 /7

ಖ್ಯಾತ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  

2 /7

ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ರಾಘವ್‌ ವಿವಾಹ ಬಹಳ ಅದ್ಧೂರಿಯಾಗಿ ನೆರವೇರಿತು.  

3 /7

ಪರಿಣಿತಿ ಚೋಪ್ರಾ-ರಾಘವ್ ಚಟ್ಟಾ ಮದುವೆಯಲ್ಲಿ ಕೇವಲ 100-200 ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.   

4 /7

ಈ ವಿವಾಹ ಸಮಾರಂಭದಲ್ಲಿ 5 ದೇಶಗಳ ವಿಶೇಷ ಖಾದ್ಯಗಳನ್ನು ಅತಿಥಿಗಳಿಗಾಗಿ ಮಾಡಿಸಲಾಗಿತ್ತು ಎಂದು ಹೇಳಲಾಗಿದೆ.   

5 /7

ಈ ಮದುವೆಗೆ ಸುಮಾರು 4-5 ಕೋಟಿ ವೆಚ್ಚವಾಗಿರಬಹುದು ಎಂಬ ಮಾಹಿತಿ ಇದೆ. ಇದು ಅತ್ಯಂತ ಅದ್ದೂರಿ ಬಾಲಿವುಡ್ ಮದುವೆಗಳಲ್ಲಿ ಒಂದಾಗಿದೆ.   

6 /7

ಕಳೆದ ಮೇ 13 ರಂದು ಪರಿಣಿತಿ-ರಾಘವ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿನ್ನೆ ಈ ಜೋಡಿ ಸಪ್ತಪದಿ ತುಳಿದರು.  

7 /7

ಪರಿಣಿತಿ ಚೋಪ್ರಾ ಮತ್ತು ರಾಘವ್ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಜೋಡಿಗೆ ಅಭಿಮಾನಿಗಳು ವಿಶ್‌ ಮಾಡಿದ್ದಾರೆ.