ವರ್ಷಾರಂಭದಲ್ಲಿಯೇ ಮಂಗಳನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಾಹಸ ಹಾಗೂ ಶೌರ್ಯದ ಪ್ರತೀಕ ಎಂದೇ ಭಾವಿಸಲಾಗುವ ಗ್ರಹಗಳ ಸೇನಾಪತಿ ಮಂಗಳ ಮುಂದಿನ ವರ್ಷದ ಆರಂಭದಲ್ಲಿಯೇ ಉದಯಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. Spiritual News In Kannada
 

Horoscope 2024: ಕಾಲಕಾಲಕ್ಕೆ ಗ್ರಹಗಳು ಸೂರ್ಯನ ಸಮೀಪಕ್ಕೆ ಹೋದಾಗ ಅಸ್ತಮಿಸುತ್ತವೆ ಮತ್ತು ಸೂರ್ಯನಿಂದ ದೂರ ಸರಿದಾಗ ಉದಯಿಸುತ್ತವೆ ಎಂದು ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಗ್ರಹಗಳ ಈ ಸ್ಥಿತಿ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಪ್ರಸ್ತುತ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಜನವರಿ 14, 2024 ರಂದು ಉದಯಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಗಳ ಜನರ ಮೇಲೆ ಉಂಟಾಗಲಿದೆ. ಆದರೆ, ಮೂರು ರಾಶಿಗಳ ಜನರಿಗೆ ಮಂಗಳ ಅಪಾರ ಧನಸಂಪತ್ತನ್ನು ಕರುಣಿಸಲಿದ್ದಾನೆ. ಇದರ ಜೊತೆಗೆ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಕೂಡ ದಯಪಾಲಿಸಲಿದ್ದಾನೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ. Spiritual News In Kannada

 

ಇದನ್ನೂ ಓದಿ-ವರ್ಷ 2024ರಲ್ಲಿ ಈ ಜನರ ಜೀವನದಲ್ಲಿ ಶುಕ್ರದೆಸೆ, ಧನ ಲಕ್ಷ್ಮಿಯ ಕೃಪೆಯಿಂದ ಹಣಗಳಿಕೆಯ ಸುವರ್ಣಕಾಲ ಆರಂಭ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಾಹಸ ಹಾಗೂ ಶೌರ್ಯದ ಪ್ರತೀಕ ಎಂದೇ ಭಾವಿಸಲಾಗುವ ಗ್ರಹಗಳ ಸೇನಾಪತಿ ಮಂಗಳ ಮುಂದಿನ ವರ್ಷದ ಆರಂಭದಲ್ಲಿಯೇ ಉದಯಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ.   

2 /5

ಮೇಷ ರಾಶಿ: ಮಂಗಳ ನಿಮ್ಮ ರಾಶಿಗೆ ಅಧಿಪತಿಯಾಗಿರುವ ಜೊತೆಗೆ ಆತ ಇಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿನ ಸೌಕರ್ಯಗಳಲ್ಲಿ ವೃದ್ಧಿಯನ್ನು ಕಾಣುವಿರಿ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಸಿಗಲಿದೆ. ಆಟೋಟ, ಪೊಲೀಸ್, ಗುಪ್ತಚರ ಸಂಸ್ಥೆ,  ಸೇನೆ ಹಾಗೂ ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ವರ್ಷ 2024 ಅತ್ಯುತ್ತಮ ಸಾಬೀತಾಗಲಿದೆ. ಇದರ ಜೊತೆಗೆ ಈ ಅವಧಿಯಲ್ಲಿ ನಿಮಗೆ ನಿಮ್ಮ ಪಿತ್ರಾರ್ಜಿತ ಆಸ್ತಿಯ ಲಾಭ ಸಿಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಮಂಗಳನ ಉದಯ ನಿಮಗೆ ಅತ್ಯಂತ ಶುಭ ಸಾಬೀತಾಗಲ್ಲಿದ್ದು, ಸಾಕಷ್ಟು ಲಾಭವನ್ನು ತಂದು ಕೊಡಲಿದೆ.   

3 /5

ಧನು ರಾಶಿ: ಮಂಗಳನ ಉದಯ ನಿಮ್ಮ ಪಾಲಿಗೆ ಶುಭವಾಗಿರಲಿದೆ. ಮಂಗಳ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಮತ್ತು ಪರಾಕ್ರಮ ಹೆಚ್ಚಾಗಲಿದೆ. ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ. ನಿಂತುಹೋದ ಹಣ ನಿಮ್ಮ ಬಳಿ ಮರಳಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇನ್ನೊಂದೆಡೆ ಮಂಗಳ ನಿಮ್ಮ ಜಾತಕದ ಪಂಚಮ ಹಾಗೂ ದ್ವಾದಶ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ, ಮಕ್ಕಳ ಕಡೆಯಿಂದ ಉತ್ತಮ ಸುದ್ದಿ ಸಿಗುವ ಸಾಧ್ಯತೆ ಇದೆ,   

4 /5

ಮಕರ ರಾಶಿ: ಮಂಗಳ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಅಪಾರ ಆತ್ಮವಿಶ್ವಾಸದಿಂದ ತುಂಬಿರುವಿರಿ, ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯವನ್ನು ನೀವು ಕಾಣುವಿರಿ, ಈ ಅವಧಿಯಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮದಿಂದ ಕೆಲ್ಲ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ, ವೃತ್ತಿ ಜೀವನದಲ್ಲಿ ನಿಮಗೆ ಹೊಸ ಅವಕಾಶಗಳು ಒದಗಿಬರಲಿವೆ. ಇನ್ನೊಂದೆಡೆ ಮಂಗಳ ನಿಮ್ಮ ಗೋಚರ ಜಾತಕದ ಚತುರ್ಥ ಹಾಗೂ ಆದಾಯ ಭಾವದ ಅಧಿಪತಿಯಾದ ಕಾರಣ ಈ ಅವಧಿಯಲ್ಲಿ ನೀವು ನಿಮ್ಮ ಆಧಾಯದಲ್ಲಿ ಅಪಾರ ವೃದ್ಧಿಯನ್ನು ಕಾಣಬಹುದು. ಆಸ್ತಿಪಾಸ್ತಿ, ವಾಹನ ಸುಖ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಿವೇಶನ ಆಸ್ತಿಪಾಸ್ತಿ ಖರೀದಿ-ಬಿಕರಿಯಿಂದ ನಿಮಗೆ ಲಾಭ ಉಂಟಾಗುವ ಸಾಧ್ಯತೆ ಇದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)