Monsoon Foot Care Tips: ಮಳೆಗಾಲದಲ್ಲಿ ನಿಮ್ಮ ಎಲ್ಲಾ ಸಮಸ್ಯೆ ನಿವಾರಿಸುವ ಮನೆಮದ್ದುಗಳು..

ಮಳೆಗಾಲದ ಋತುವಿನಲ್ಲಿ ಪಾದಗಳ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ಮುಂಗಾರು ಋತುವಿನಲ್ಲಿ ವರುಣನ ಮ್ಯಾಜಿಕ್ ಹೆಚ್ಚಾಗಿರುತ್ತದೆ. ಮಳೆಯಲ್ಲಿ ನೆನೆದು ಖುಷಿ ಪಡುವ ಮುನ್ನ ಪ್ರತಿಯೊಬ್ಬರೂ ಕೆಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಳೆಯ ಪರಿಣಾಮ ನಿಮ್ಮ ಚರ್ಮ ಮತ್ತು ಕೂದಲು ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಬಹುತೇಕರು ತಮ್ಮ ಕೂದಲು ಮತ್ತು ಚರ್ಮದ ಆರೈಕೆ(Skin Care)ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆದರೆ ಪಾದಗಳು ಸೇರಿ ಇತರ ಪ್ರಮುಖ ಅಂಗಗಳನ್ನು ಕಡೆಗಣಿಸುತ್ತಾರೆ.

ವರ್ಷದುದ್ದಕ್ಕೂ ಪಾದದ ನೈರ್ಮಲ್ಯ ಅತ್ಯಗತ್ಯ. ಮಳೆಗಾಲದಲ್ಲಂತೂ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕಾಗುತ್ತದೆ. ಮಳೆಯಿಂದಾಗಿ ತೇವಾಂಶ ಮತ್ತು ಗಾಳಿಯಲ್ಲಿನ ಆರ್ದ್ರತೆ(Humidity)ಯಿಂದ ಪಾದಗಳಲ್ಲಿ ಕೆಟ್ಟ ವಾಸನೆ ಸೃಷ್ಟಿಯಾಗುತ್ತದೆ. ಇದರಿಂದ ನಾರುವ ಪಾದಗಳು, ಬೆವರುವ ಪಾದಗಳು, ಒದ್ದೆಯಾದ ಬೂಟುಗಳು, ಶಿಲೀಂದ್ರಗಳ ಸೋಂಕು, ಬಿರುಕು ಬಿಟ್ಟ ಕಾಲ್ಬೆರಳು, ಕಾಲು ನೋವು ಮತ್ತು ಇತರ ಅಲರ್ಜಿಗಳಿಗೆ ಕಾರಣವಾಗುತ್ತದೆ. ಆದರೆ ಈ ಸರಳ ಮನೆಮದ್ದು(Home Remedies)ಗಳನ್ನು ಅನುಸರಿಸುವ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಮಳೆಗಾಲ ಮುಗಿದ ಬಳಿಕ ನಿಮ್ಮ ಕಾಲುಗಳು ತುರಿಕೆ ಅಥವಾ ಬಿರುಕು ಸಮಸ್ಯೆಗೆ ತುತ್ತಾಗಬಹುದು. ಆಗ ಈರುಳ್ಳಿ ರಸದಿಂದ ನಿಮ್ಮ ಪಾದಗಳಿಗೆ ಮಸಾಜ್ ಮಾಡಿದರೆ ಈ ಸಮಸ್ಯೆಗೆ ಮುಕ್ತಿ ಹಾಡಬಹುದು. ಪಾದಗಳ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಇಲ್ಲಿದ್ದಲ್ಲಿ ಸೋಂಕಿನಿಂದ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ.  

2 /5

ಶಿಲೀಂದ್ರ ಸೋಂಕು ಅಥವಾ ಬ್ಯಾಕ್ಟೀರಿಯಾ ಸಮಸ್ಯೆಯಿಂದ ನಿಮ್ಮ ಪಾದಗಳಿಗೆ ರಕ್ಷಣೆ ನೀಡಲು ಟೀ ಟ್ರೀ ಎಣ್ಣೆಯನ್ನು ಬಳಸಬೇಕು. ಇದರ ಬಳಕೆಯಿಂದ ನೀವು ಕೇವಲ ಸೋಂಕಿನಿಂದ ಮಾತ್ರವಲ್ಲ ಚರ್ಮದ ಕಾಂತಿಯನ್ನು ಪಡೆಯಬಹುದಾಗಿದೆ.

3 /5

ನೀವು ಪಾದಗಳ ಬೆವರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವುಗಳನ್ನು ಬಿಸಿನೀರು ಮತ್ತು ನಿಂಬೆ ಹನಿಗಳ ಮಿಶ್ರಣದಲ್ಲಿ ನೆನೆಸಿ. ಬೆವರುವಿಕೆ ನಿಯಂತ್ರಿಸಲು ವಾರಕ್ಕೆ 2 ಬಾರಿ ಈ ರೀತಿ ಮಾಡಬೇಕು. ನೀವು ಹೊರಗಡೆ ಹೋಗುವಾಗ ಫ್ಲಿಪ್-ಫ್ಲಾಪ್ಸ್ ಅಥವಾ ಸ್ಯಾಂಡಲ್ ನಂತಹ ಪಾದರಕ್ಷೆಗಳನ್ನು ಧರಿಸಿ.

4 /5

ಈ ವಿಧಾನವು ನಮ್ಮ ಪೂರ್ವಜರು ಹಿಂದಿನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಅಭ್ಯಾಸವಾಗಿದೆ. ಉಪ್ಪು ಅಥವಾ ಸೌಮ್ಯವಾದ ಶಾಂಪೂವನ್ನು ಬಿಸಿನೀರಿನಲ್ಲಿ ಬೆರೆಸಿ ಅದರಲ್ಲಿ ನಿಮ್ಮ ಪಾದಗಳನ್ನು 15 ನಿಮಿಷಗಳ ಕಾಲ ನೆನೆಸಬೇಕು.ಉಪ್ಪು ಬ್ಯಾಕ್ಟೀರಿಯಾವನ್ನು ಕೊಂದು ದುರ್ವಾಸನೆಯನ್ನು ಹೋಗಲಾಡಿಸಲು ನೆರವಾಗುತ್ತದೆ. ಕೊನೆಯಲ್ಲಿ ನೆನೆದಿರುವ ಕಾಲುಗಳನ್ನು ಸ್ವಚ್ಛವಾಗಿ ಒರೆಸಿಕೊಳ್ಳಬೇಕು.

5 /5

ಪಾದಗಳ ದುರ್ವಾಸನೆ ಬೀರಲಾರಂಭಿಸಿದರೆ ನಮ್ಮ ಪಕ್ಕ ಕುಳಿತಿರುವವರು ಎದ್ದು ಓಡಿಹೋಗುತ್ತಾರೆ. ಪಾದಗಳಲ್ಲಿ ಕೆಟ್ಟ ವಾಸನೆ ಬರುವ ಸಮಸ್ಯೆಯನ್ನು ಪ್ರತಿಯೊಬ್ಬರು ಎದುರಿಸುತ್ತಾರೆ. ಪಾದಗಳ ದುರ್ವಾಸನೆ ತಡೆಗಟ್ಟಲು ಕರ್ಪೂರವನ್ನು ಪುಡಿ ಮಾಡಿ ಅದನ್ನು ಟಾಲ್ಕಮ್ ಪೌಡರ್ ಗೆ ಸೇರಿಸಿ. ಸಾಕ್ಸ್ ಧರಿಸುವ ಮುನ್ನ ಈ ಮಿಶ್ರಣವನ್ನು ನಿಮ್ಮ ಕಾಲುಗಳಿಗೆ ಹಾಕಿಕೊಳ್ಳಬೇಕು.