ಅಂದು ಟಾಲಿವುಡ್‌ನ ಚೈಲ್ಡ್‌ ಆರ್ಟಿಸ್ಟ್, ಇಂದು ಹಾಲಿವುಡ್‌ನ ಬಹುಬೇಡಿಕೆಯ ನಟಿ! ಈಕೆ ಯಾರು ಗೊತ್ತೇ?

Hollywood Actress Avantika Vandanapu: ಇತ್ತೀಚೆಗೆ ಹಾಲಿವುಡ್‌ನ 'ಮೀನ್ ಗರ್ಲ್ಸ್' ಬಿಡುಗಡೆಯಾಗಿದ್ದು, ಇದರಲ್ಲಿ ಭಾರತೀಯರ ಗಮನ ಸೆಳೆದಿದ್ದಾರೆ ಒಬ್ಬ ನಟಿ. ಸೋಶಿಯಲ್ ಮಿಡಿಯಾದಲ್ಲಿ ಆಕೆಯ ಫೋಟೋ ಮತ್ತು ಹೆಸರು ಸಕತ್ ವೈರಲ್ ಕೂಡ ಆಗುತ್ತಿದೆ. ನಟಿ ಬಾಲ್ಯದ ಫೋಟೋಗಳಲ್ಲಿ ಟಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ ನಟರಿರುವುದು ನೆಟ್ಟಿಗರಿಗೆ ಸಕತ್ ಆಶ್ಚರ್ಯ ಉಂಟುಮಾಡಿದೆ. ಹಾಗಾದ್ರೆ ಈಕೆ ಯಾರು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

1 /8

ತೆಲುಗು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿರುವ ಅವಂತಿಕಾ ವಂದನಾಪು, ದೂರದರ್ಶನದಲ್ಲಿ ಕೆಲವು ಜಾಹೀರಾತುಗಳ ಮೂಲಕ ಸಕತ್ ಫೇಮ್ ಗಳಿಸುವುದರ ಜೊತೆಗೆ,ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಂ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. 

2 /8

ನಟಿ ಅವಂತಿಕಾ ತೆಲುಗು ಚಿತ್ರರಂಗದಲ್ಲಿ ಪ್ರೇಮಂ, ರಾರಂಡೋಯ್ ವೆಕೆರ ಛಮ್ಡಾ, ಅಜ್ಞಾತವಾಸಿ ಸೇರಿದಂತೆ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡವರು, ಹಾಗೆಯೇ ಐಶ್ವರ್ಯಾ ರಾಜೇಶ್ ಅವರ 2021 ರ ಭೂಮಿಕಾ ಚಿತ್ರದೊಂದಿಗೆ ತಮಿಳಿಗೂ ಪಾದಾರ್ಪಣೆ ಮಾಡಿದರು. ಇದೀಗ ಹಾಲಿವುಡ್‌ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

3 /8

ನಟಿ ಅವಂತಿಕಾ ವಂದನಾಪು ಇತ್ತೀಚೆಗೆ 'ಮೀನ್ ಗರ್ಲ್ಸ್‌'ನಲ್ಲಿ ಅಮಂಡಾ ಸೆಫ್ರಿಡ್‌ನ ಕರೆನ್ ಸ್ಮಿತ್‌ನ 2.0 ವರ್ಶನ್ ಆದ ಕರೆನ್ ಶೆಟ್ಟಿ ಪಾತ್ರವನ್ನು ನಿರ್ವಹಿಸಿದ್ದು, ಸದ್ಯ ಈಕೆಯ ಫೋಟೋ ಮತ್ತು ಪೋಸ್ಟರ್‌ಗಳು ಭಾರತದಲ್ಲೂ ಸಕತ್ ವೈರಲ್ ಆಗುತ್ತಿವೆ. 

4 /8

 ಅವಂತಿಕಾಳ ವೈರಲ್‌ ಆಗುತ್ತಿರುವುದರ ಫೋಟೋಗಳ ಜೊತೆಗೆ ಈ ಹಿಂದೆ ಮಹೇಶ್ ಬಾಬು ಅವರ ಬ್ರಹ್ಮೋತ್ಸವಂ, ನಾಗ ಚೈತನ್ಯ ಅವರ ಪ್ರೇಮಂ ಮತ್ತು ಪವನ್ ಕಲ್ಯಾಣ್ ಅವರ ಅಜ್ಞಾತವಾಸಿ ಚಿತ್ರಗಳಲ್ಲಿ ನಟಿಸಿದ್ದ ಅವರ ಫೋಟೋಗಳು ಸಹ ವೈರಲ್ ಆಗುತ್ತಿವೆ. 

5 /8

ಅವಂತಿಕಾ ವಂದನಾಪು ಸದ್ಯ ಹಾಲಿವುಡ್ ಇಂಡಸ್ಟ್ರಿಯಲ್ಲಿ ಸಕತ್ ಬ್ಯುಸಿ ಇರುವ ನಟಿಯರಲ್ಲಿ ಒಬ್ಬರಾಗಿದ್ದು, ಮೀನ್ ಗರ್ಲ್ಸ್ ಚಿತ್ರದಲ್ಲಿ ಕರೆನ್ ಶೆಟ್ಟಿ ಪಾತ್ರ ಸಕತ್ ಚರ್ಚೆಯಾಗುತ್ತಿದ್ದು.

6 /8

ನಟಿ ಅವಂತಿಕಾ ವಂದನಾಪು ಅಭಿನಯವನ್ನು ಎಲ್ಲರು ಮೆಚ್ಚಿಕೊಂಡಿದ್ದು, ಹಾಲಿವುಡ್‌ನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಈ ಸಿನಿಮಾದ ವಿಶೇಷ ಆಕರ್ಷಣೆ ಆವಂತಿಕಾ ಆಗಿದ್ದು, ಇದೀಗ ಈಕೆಯ ಹೆಸರು ಫೇಮಸ್ ಆಗಿದೆ.

7 /8

ಭಾರತೀಯ ನಟಿ ಅವಂತಿಕಾ ಹಾಲಿವುಡ್ ಇಂಡಸ್ಟ್ರಿಯಲ್ಲಿ ಡೈರಿ ಆಫ್ ಫ್ಯೂಚರ್ ಪ್ರೆಸಿಡೆಂಟ್, ಸ್ಪಿನ್ ಮತ್ತು ಸೀನಿಯರ್ ಇಯರ್ ಚಿತ್ರಗಳಲ್ಲಿ ನಟಿಸಿದ್ದು, ಇದೀಗ ಮೀನ್ ಗರ್ಲ್ಸ್ ಚಿತ್ರಕ್ಕೆ ಹೆಚ್ಚು ಮನ್ನಣೆ ಸಿಕ್ಕಿದೆ. ಎ ಕ್ರೌನ್ ಆಫ್ ವಿಶಸ್ ಜೊತೆಗೆ ಹಲವು ಸಿನಿಮಾ ಆಫರ್‌ಗಳು ಅವರ ಕೈಯಲ್ಲಿವೆ. 

8 /8

ಅವಂತಿಕಾ ವಂದನಾಪು ತೆಲುಗು ಕುಟುಂಬಕ್ಕೆ ಸೇರಿದ  2005ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜನಿಸಿದರು. ಅಲ್ಲಿಯೇ ತಮ್ಮ ವಿದ್ಯಾಭ್ಯಾಸ ಮಾಡುತ್ತಾ ನಟನೆ ತರಬೇತಿಯನ್ನೂ ತೆಗೆದುಕೊಂಡು, ಅನಂತರ 2016 ರಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದರು.