Benefits of Carrots: ಸಕ್ಕರೆ ಕಾಯಿಲೆ ಸಮಸ್ಯೆಗೆ ಕ್ಯಾರೆಟ್ ರಾಮಬಾಣ

Health benefits of carrots: ಕ್ಯಾರೆಟ್ ಸೇವಿಸುವುದರಿಂದ ಬ್ಲಡ್ ಶುಗರ್ ಲೆವೆಲ್ ಸುಲಭವಾಗಿ ನಿರ್ವಹಣೆ ಆಗುತ್ತದೆ. ಗಜ್ಜರಿಯಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹ ರಚನೆಯಲ್ಲಿ ನೆರವಾಗುತ್ತದೆ. ಇದರ ಔಷಧೀಯ ಗುಣಗಳು ಸಕ್ಕರೆ ಕಾಯಿಲೆ ನಿರ್ವಹಣೆಯಲ್ಲಿ ಸಹಾಯಕ್ಕೆ ಬರುತ್ತವೆ.

ನವದೆಹಲಿ: ಕ್ಯಾರೆಟ್ ಅಥವಾ ಗಜ್ಜರಿ ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನ ಪಡೆಯಬಹುದು. ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಸಮಸ್ಯೆಗೆ ಕ್ಯಾರೆಟ್ ರಾಮಬಾಣವೆಂದು ಹೇಳಲಾಗುತ್ತದೆ. ಕ್ಯಾರೆಟ್ ಸೇವಿಸುವುದರಿಂದ ಬ್ಲಡ್ ಶುಗರ್ ಲೆವೆಲ್ ಸುಲಭವಾಗಿ ನಿರ್ವಹಣೆ ಆಗುತ್ತದೆ. ಗಜ್ಜರಿಯಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹ ರಚನೆಯಲ್ಲಿ ನೆರವಾಗುತ್ತದೆ. ಇದರ ಔಷಧೀಯ ಗುಣಗಳು ಸಕ್ಕರೆ ಕಾಯಿಲೆ ನಿರ್ವಹಣೆಯಲ್ಲಿ ಸಹಾಯಕ್ಕೆ ಬರುತ್ತವೆ. ಕ್ಯಾರೆಟ್ ಸೇವನೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕ್ಯಾರೆಟ್ ಕಡಿಮೆ ಸಿಹಿ ಸೂಚ್ಯಂಕವನ್ನು ಹೊಂದಿದ್ದು, ಇದರ ಸೇವನೆಯಿಂದ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಇದೊಂದು ಸುರಕ್ಷಿತ ಆಹಾರವಾಗಿದೆ ಎಂದು ಹೇಳಬಹುದು. ಇದರಲ್ಲಿ ನಾರಿನಂಶ ಹೆಚ್ಚಾಗಿದ್ದು, ಸಿಹಿ ಸೂಚ್ಯಂಕ ಕಡಿಮೆ ಇರುವುದರಿಂದ ನಮ್ಮ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿರುತ್ತದೆ.

2 /5

ಕ್ಯಾರೆಟ್ ಅಪಾರ ನಾರಿನ ಅಂಶವನ್ನು ಒಳಗೊಂಡಿದ್ದು, ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೀರಿಕೊಳ್ಳುವುದನ್ನು ನಿಧಾನ ಮಾಡುತ್ತದೆ. ಇದರಿಂದ ಸಮತೋಲನದ ಬ್ಲಡ್ ಶುಗರ್ ಲೆವೆಲ್ ನಿಮ್ಮದಾಗುತ್ತದೆ.

3 /5

ಕ್ಯಾರೆಟ್ ಅಪಾರ ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿದ್ದು, ವಿಟಮಿನ್ A, ವಿಟಮಿನ್ K, ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂನಿಂದ ಸಮೃದ್ಧವಾಗಿದೆ. ನಮ್ಮ ಸಂಪೂರ್ಣ ಆರೋಗ್ಯಕ್ಕೆ ಈ ಪೌಷ್ಟಿಕಾಂಶಗಳು ಅಗತ್ಯವಾಗಿ ಬೇಕಾಗುತ್ತವೆ. ಇವು ಮಧುಮೇಹ ನಿರ್ವಹಣೆಯಲ್ಲಿ ಸಾಕಷ್ಟು ನೆರವಾಗುತ್ತವೆ.

4 /5

ಆಂಟಿ ಆಕ್ಸಿಡೆಂಟ್ ಅಂಶಗಳಿಂದ ಸಮೃದ್ಧವಾಗಿರುವ ಕ್ಯಾರೆಟ್ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ನಮ್ಮ ಜೀವಕೋಶಗಳಿಗೆ ಹಾನಿಯಾಗುವುದಿಲ್ಲ. ಉರಿಯುತ ಕೂಡ ಕಡಿಮೆ ಆಗುತ್ತದೆ. ಮಧುಮೇಹ ಸಂಬಂಧಿತ ಜನರಿಗೆ ಇದು ಹೆಚ್ಚು ಸಹಕಾರಿಯಾಗಿದೆ.

5 /5

ಕ್ಯಾರೆಟ್‍ನಲ್ಲಿ ಹೆಚ್ಚಾಗಿರುವ ನಾರಿನಂಶವು ನಮ್ಮ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾರ್ಬೋಹೈಡ್ರೇಟ್ಸ್ ಅಂಶಗಳನ್ನು ನಿಧಾನವಾಗಿ ಜೀರ್ಣ ಮಾಡಿ ರಕ್ತದ ಹರಿವಿಗೆ ಸಹಕಾರಿಯಾಗಿವೆ. ಇದರಿಂದ ನಮ್ಮ ಬ್ಲಡ್ ಶುಗರ್ ಲೆವೆಲ್ ನಿಧಾನವಾಗಿ ಏರಿಕೆಯಾಗುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಇದು ತುಂಬಾ ಉತ್ತಮವಾಗಿದೆ.​