Health Tips: ಕಣ್ಣಿನ ದೃಷ್ಟಿ ಹೆಚ್ಚಿಸಲು ಹೆಚ್ಚಾಗಿ ಈ ಆಹಾರ ಸೇವಿಸಿ

Foods Can Help To Improve Eye Sight: ಕಣ್ಣಿನ ದೃಷ್ಟಿ ಮತ್ತು ಕಣ್ಣಿನ ಆರೋಗ್ಯಕ್ಕೆ ನಾವು ಉತ್ತಮ ಆಹಾರ ಸೇವಿಸಬೇಕು. ಉತ್ತಮ ಕಣ್ಣಿನ ದೃಷ್ಟಿಗೆ ನೀವು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

Foods Can Help To Improve The Eye Sight: ನಿಮ್ಮ ಕಣ್ಣಿನ ದೃಷ್ಟಿ ಉತ್ತಮವಾಗಿರಬೇಕಾದರೆ ಪೋಷಕಾಂಶಭರಿತ ಆಹಾರ ಸೇವಿಸಬೇಕು. ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಕಣ್ಣಿನ ಸುರಕ್ಷತೆಗೆ ನೀವು ಉತ್ತಮ ಆಹಾರದ ಬಗ್ಗೆ ವಿಶೇಷವಾಗಿ ಕಾಳಜಿವಹಿಸಬೇಕು. ಕಣ್ಣಿಗೆ ಉತ್ತಮವಾಗಿರುವ ಆಹಾರ ಸೇವನೆ ಮಾಡುವುದರಿಂದ ನಿಮ್ಮ ದೃಷ್ಟಿ ಚೆನ್ನಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಲುಟೀನ್, ಝೀಕ್ಸಾಂಥಿನ್ ಮತ್ತು ವಿಟಮಿನ್ A ಮೊಟ್ಟೆಗಳಲ್ಲಿ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸಲು ಸಹಕಾರಿ. ನಿಯಮಿತವಾಗಿ ಮೊಟ್ಟೆ ಸೇವಿಸುವುದರಿಂದ ಕಣ್ಣಿನ ಕಾಯಿಲೆಗಳನ್ನು ದೂರವಿಡಬಹುದು.

2 /5

ಕ್ಯಾರೆಟ್‍ನಲ್ಲಿ ಬೀಟಾ-ಕ್ಯಾರೋಟಿನ್(ವಿಟಮಿನ್ A) ಸಮೃದ್ಧವಾಗಿದೆ. ಇದು ಉತ್ತಮ ಕಣ್ಣಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಗಜ್ಜರಿ ತಿನ್ನುವುದರಿಂದ ಕಣ್ಣು ತೀಕ್ಷ್ಣವಾಗುತ್ತದೆ.  

3 /5

ಬಾದಾಮಿಯಲ್ಲಿ ವಿಟಮಿನ್ E ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಉತ್ತಮ. ವಿಟಮಿನ್ ಇ ವಯಸ್ಸಿಗೆ ಸಂಬಂಧಿಸಿದ ದೃಷ್ಟಿದೋಷ ತಡೆಯಲು ಸಹಕಾರಿ.

4 /5

ಪಾಲಕ್ ಸೊಪ್ಪಿನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಸಮೃದ್ಧವಾಗಿವೆ. ಈ 2 ಉತ್ಕರ್ಷಣ ನಿರೋಧಕಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಮುಖ್ಯ. ಈ ಪೋಷಕಾಂಶಗಳು ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತವೆ.

5 /5

ಸಾಲ್ಮನ್ ಮೀನು ಒಮೆಗಾ-3 ಕೊಬ್ಬಿನಾಮ್ಮಗಳ ಉತ್ತಮ ಮೂಲವಾಗಿದೆ. ಇದು ಕಣ್ಣುಗಳ ಆರೋಗ್ಯಕ್ಕೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ತಡೆಯಲು ಸಹಕಾರಿ.