Health Tips: ಉತ್ತಮ ಚಯಾಪಚಯಕ್ಕಾಗಿ ಈ ಸಲಹೆಗಳನ್ನು ಮೈಗೂಡಿಸಿಕೊಳ್ಳಿ

Tips For Better Metabolism: ಚಯಾಪಚಯವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ನಮ್ಮ ಆಹಾರದಲ್ಲಿ ಇರುವ ಪೋಷಕಾಂಶಗಳನ್ನು  ಮತ್ತೊಂದು ರೂಪದಲ್ಲಿ ಬದಲಾಯಿಸುವ ಮೂಲಕ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಚಯಾಪಚಯ ಸರಿಯಾಗಿಲ್ಲದಿದ್ದರೆ, ದೇಹದಲ್ಲಿ ಅನೇಕ ಸಮಸ್ಯೆಗಳು ಸಂಭವಿಸುತ್ತವೆ. 

Tips For Better Metabolism: ಚಯಾಪಚಯವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ನಮ್ಮ ಆಹಾರದಲ್ಲಿ ಇರುವ ಪೋಷಕಾಂಶಗಳನ್ನು  ಮತ್ತೊಂದು ರೂಪದಲ್ಲಿ ಬದಲಾಯಿಸುವ ಮೂಲಕ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಚಯಾಪಚಯ ಸರಿಯಾಗಿಲ್ಲದಿದ್ದರೆ, ದೇಹದಲ್ಲಿ ಅನೇಕ ಸಮಸ್ಯೆಗಳು ಸಂಭವಿಸುತ್ತವೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಾವು ನಮ್ಮ ಚಯಾಪಚಯವನ್ನು ಸರಿಪಡಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಚಯಾಪಚಯ ಉತ್ತಮವಾಗಿರಲು ಸರಿಯಾದ ಆಹಾರ ಅತ್ಯಗತ್ಯ: ಚಯಾಪಚಯವನ್ನು ಸುಧಾರಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಚಯಾಪಚಯ ದರಕ್ಕಾಗಿ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ನಮ್ಮ ಡಯಟ್ನಲ್ಲಿ ಪ್ರೋಟೀನ್ ಭರಿತ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಇದರೊಂದಿಗೆ ಕೊಬ್ಬು ರಹಿತ ಆಹಾರಗಳನ್ನು ಮಿತವಾಗಿ ಸೇವಿಸಬೇಕು.

2 /5

ದೀರ್ಘ ಸಮಯದವರೆಗೆ ಕುಳಿತುಕೊಳ್ಳಬೇಡಿ: ಹೆಚ್ಚು ಕುಳಿತುಕೊಳ್ಳುವುದು ಚಯಾಪಚಯ ಕ್ರಿಯೆಗೆ ಒಳ್ಳೆಯದಲ್ಲ. ಹಾಗಾಗಿ, ದೀರ್ಘಕಾಲ ಕುಳಿತಿರುವುದನ್ನು ತಪ್ಪಿಸಿ.  ಅತಿಯಾಗಿ ಕುಳಿತುಕೊಳ್ಳುವುದರಿಂದ ಸ್ನಾಯುಗಳು ಗಟ್ಟಿಯಾಗುತ್ತವೆ.  ನೀವು ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಾಗಿದ್ದರೆ, ಮಧ್ಯೆ ಮಧ್ಯೆ ಒಂದು ಸಣ್ಣ ವಿರಾಮವನ್ನು ತೆಗೆದುಕೊಳ್ಳಿ. 

3 /5

ವ್ಯಾಯಾಮವು ಚಯಾಪಚಯವನ್ನು ಸುಧಾರಿಸುತ್ತದೆ: ದೈಹಿಕ ಚಟುವಟಿಕೆಯು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚಯಾಪಚಯವನ್ನು ಸರಿಪಡಿಸಲು, ವ್ಯಾಯಾಮ ಅಥವಾ ಯೋಗವನ್ನು ಪ್ರತಿದಿನ ಮಾಡಬೇಕು. ವಾರದಲ್ಲಿ 150 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಪ್ರಯೋಜನಕಾರಿ. 

4 /5

ಚಯಾಪಚಯ ಸರಿಯಿಲ್ಲದಿದ್ದರೆ ಈ ಸಮಸ್ಯೆಗಳು ಕಾಡಬಹುದು: ಚಯಾಪಚಯ ದರವನ್ನು ಹದಗೆಡಿಸುವುದು ಆರೋಗ್ಯಕ್ಕೆ ಅನೇಕ ಹಾನಿಗಳನ್ನು ಉಂಟುಮಾಡಬಹುದು. ಕಳಪೆ ಚಯಾಪಚಯ ಕ್ರಿಯೆಯಿಂದಾಗಿ, ಮಧುಮೇಹ ಮತ್ತು ಹೃದಯ ಕಾಯಿಲೆಗಳ ಅಪಾಯವಿದೆ. ಚಯಾಪಚಯವು ಸರಿಯಾಗಿಲ್ಲದಿದ್ದರೆ, ಪಾರ್ಶ್ವವಾಯು ಸಮಸ್ಯೆಯೂ ಸಂಭವಿಸಬಹುದು.

5 /5

ಚಯಾಪಚಯ ಸರಿಯಾಗಿರುವುದು ಏಕೆ ಅಗತ್ಯ: ನಮ್ಮ ಚಯಾಪಚಯ ಸರಿಯಾಗಿದ್ದರೆ ನಂತರ ದೇಹದಿಂದ ವಿಷವನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ. ಚಯಾಪಚಯ ಕ್ರಿಯೆಯ ಮೂಲಕ ದೇಹದಲ್ಲಿ ಉಸಿರಾಟ ಮತ್ತು ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ. ಹೀಗಾಗಿ, ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಚಯಾಪಚಯವನ್ನು ಹೊಂದಿರುವುದು ಬಹಳ ಮುಖ್ಯ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.