Best Juices for Weight Loss: ತೂಕ ನಷ್ಟಕ್ಕೆ ಪ್ರತಿದಿನವೂ ಈ ಜ್ಯೂಸ್ ಸೇವಿಸಿರಿ

Best Juices For Weight Loss: ಅಧುನಿನ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹವರು ಈ ಜ್ಯೂಸ್‍ಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

Weight Loss Juices: ಅಧುನಿನ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ನಷ್ಟ ಮಾಡಿಕೊಳ್ಳಲು ಇನ್ನಿಲ್ಲದ ಹರಸಾಹಸ ಪಡುತ್ತಾರೆ. ಎಷ್ಟೇ ಪ್ರಯತ್ನ ಮಾಡಿದ್ರೂ ಪ್ರಯೋಜನವಾಗಿರುವುದಿಲ್ಲ. ಅತಿಯಾಗಿ ತಿನ್ನುವುದರಿಂದ, ವ್ಯಾಯಾಮ ಮಾಡದೇ ಇರುವುದರಿಂದ ತೂಕ ಹೆಚ್ಚಾಗುತ್ತದೆ. ಇದರಿಂದ ಅನೇಕರು ಹಲವಾರು ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಇಂತಹವರು ಈ ಜ್ಯೂಸ್‍ಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

1 /5

ಪ್ರತಿದಿನವೂ ಬೀಟ್‍ರೂಟ್ ಜ್ಯೂಸ್ ಸೇವಿಸಿದರೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮೆಟಾಬಲಿಸಮ್‍ಗೆ ಸಹಕಾರಿ. ಇದರಲ್ಲಿರುವ ನೈಟ್ರೇಟ್ ದೇಹದಲ್ಲಿ ನೈಟ್ರಿಕ್ ಆಮ್ಲವಾಗಿ ಪರಿವರ್ತನೆಗೊಂಡು ತೂಕ ಕಡಿಮೆ ಮಾಡುತ್ತದೆ.  

2 /5

ಪುದೀನಾ ಪೋಷಕಾಂಶಗಳ ಕಣಜವಾಗಿದ್ದು, ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮ್ಯಾಂಗನೀಸ್ ಹೇರಳವಾಗಿದೆ. ಇದು ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ, ಮೆದುಳಿನ ಚಟುವಟಿಕೆಯನ್ನುಚುರುಕುಗೊಳಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಜೀರ್ಣಕ್ರಿಯೆಗೆ ಸಹಕಾರಿ. ಹೊಟ್ಟೆಯ ಸ್ನಾಯುವನ್ನು ಮೃದುಗೊಳಿಸಿ ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ. ಹೀಗಾಗಿ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

3 /5

ನಿಮ್ಮ ದೈನಂದಿನ ಡಯಟ್‍ನಲ್ಲಿ ಕ್ಯಾರೆಟ್ ಜ್ಯೂಸ್ ಸೇರಿಸಿದರೆ ತೂಕ ಕಡಿಮೆಯಾಗುತ್ತದೆ. ಕ್ಯಾರೆಟ್ ಸಾಕಷ್ಟು ಪೊಟ್ಯಾಸಿಯಂನ್ನು ಹೊಂದಿದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ.

4 /5

ತೂಕ ನಷ್ಟ ಮಾಡಿಕೊಳ್ಳಲು ಸೌತೆಕಾಯಿ ಜ್ಯೂಸ್ ತುಂಬಾ ಸಹಕಾರಿ. ಸೌತೆಕಾಯಿ, ಪಾಲಕ ಎಲೆ, ಶುಂಠಿಯನ್ನು ಸಣ್ಣದಾಗಿ ಹೆಚ್ಚಿ, ಬ್ಲೆಂಡರ್‌ನಲ್ಲಿ ಹಾಕಿ ಮಿಶ್ರಣ ಮಾಡಿ. ನಂತರ ನಿಂಬೆ ರಸ, ಕಲ್ಲುಪ್ಪು ಸೇರಿಸಿ ಸೇವಿಸಿರಿ.

5 /5

ಪಾಲಾಕ್‍ನಲ್ಲಿ ಸಾಕಷ್ಟು ಕಬ್ಬಿಣ, ಮೆಗ್ನೀಶಿಯಂ ಮತ್ತು ವಿಟಮಿನ್‍ಗಳಿವೆ. ಇದು ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.