Health Benefits of Walnuts: ವಿಟಮಿನ್ ಮತ್ತು ಆಂಟಿ-ಆಕ್ಸಿಡೆಂಟ್ ಅಂಶಗಳು ಇರುವಂತಹ ವಾಲ್ನಟ್ ಬೀಜಗಳನ್ನು ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಾಲ್ನಟ್ ಬೀಜಗಳಲ್ಲಿ ಜಿಂಕ್ ಮತ್ತು ವಿಟಮಿನ್ E ಸಮೃದ್ಧವಾಗಿದೆ. ಇದರ ಸೇವನೆಯಿಂದ ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆ ನಮ್ಮದಾಗುತ್ತದೆ. ಸೋಂಕುಗಳು ಹಾಗೂ ಅಸ್ವಸ್ಥತೆ ಪರಿಣಾಮಕಾರಿಯಾಗಿ ದೂರವಾಗುತ್ತದೆ.
Health Benefits of Walnuts: ವಾಲ್ನಟ್ ಅಥವಾ ಅಖ್ರೋಟು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಪ್ರೋಟೀನ್ ಮತ್ತು ಕೊಬ್ಬಿನ ಆಮ್ಲಗಳಿದ್ದು ತುಂಬ ಪೌಷ್ಟಿಕ ಆಹಾರವಾಗಿದೆ. ವಾಲ್ನಟ್‌ನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಪೊಟಾಶಿಯಂ, ಕಬ್ಬಿಣಾಂಶ, ತಾಮ್ರ ಮತ್ತು ಸತುವಿನ ಅಂಶವಿದೆ. ನೆನೆಸಿಟ್ಟ ವಾಲ್ನಟ್ ಸೇವನೆ ಮಾಡಿದರೆ ನೀವು ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯಬಹುದು. ವಾಲ್ನಟ್ ಸೇವನೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಾಲ್ನಟ್‌ನಲ್ಲಿರುವ ವಿಟಮಿನ್ E, ಆಂಟಿ-ಆಕ್ಸಿಡೆಂಟ್ ಮೆದುಳಿನ ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಆಕ್ಸಿಡೇಟಿವ್ ಹಾನಿಯಿಂದ ಜೀವಕೋಶ ಪೊರೆಗಳನ್ನು ರಕ್ಷಿಸುವಲ್ಲಿ ಇದು ಪಾತ್ರ ವಹಿಸುತ್ತದೆ. ಮೆದುಳಿನ ಕೋಶಗಳ ದೀರ್ಘಾಯುಷ್ಯ & ಚೈತನ್ಯವನ್ನು ಉತ್ತೇಜಿಸುತ್ತದೆ.
ವಾಲ್ನಟ್ ಬೀಜಗಳಲ್ಲಿ ವಿಟಮಿನ್ B7 ಬಯೋಟಿನ್ ರೂಪದಲ್ಲಿ ಲಭ್ಯವಿದ್ದು, ನಮ್ಮ ತಲೆ ಕೂದಲಿನ ಕಿರು ಚೀಲಗಳನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತದೆ. ಇದರಿಂದ ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಜೊತೆಗೆ ತಲೆ ಕೂದಲಿನ ಬೆಳವಣಿಗೆ ಉತ್ತಮಗೊಳ್ಳುತ್ತದೆ. ತಲೆಕೂದಲು ಬೆಳೆಯಲು ಹಾಗೂ ಸೊಂಪಾಗಿ ಕಾಣಲು ವಾಲ್ನಟ್ ಬೀಜಗಳು ಸಹಾಯ ಮಾಡುತ್ತವೆ.
ನೀರಿನಲ್ಲಿ ರಾತ್ರಿ ನೆನೆ ಹಾಕಿದ ವಾಲ್ನಟ್ ಬೀಜಗಳನ್ನು ಬೆಳಗ್ಗೆ ಎದ್ದತಕ್ಷಣ ಸೇವಿಸುವುದರಿಂದ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ವಾಲ್ನಟ್ ಬೀಜಗಳಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಇದ್ದು, ಇದು ರಾತ್ರಿ ಹೊತ್ತು ನೆಮ್ಮದಿಯಾಗಿ ನಿದ್ರೆ ಮಾಡುವಂತೆ ಮಾಡುತ್ತದೆ. ವಾಲ್ನಟ್ ಬೀಜಗಳನ್ನು ನೆನೆ ಹಾಕಿ ಸೇವಿಸುವುದರಿಂದ ನಮ್ಮ ಸಂಪೂರ್ಣ ಆರೋಗ್ಯ ಉತ್ತಮಗೊಳ್ಳುತ್ತದೆ.
ವಾಲ್ನಟ್ ಬೀಜಗಳಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಪ್ರಮಾಣ ಹೇರಳವಾಗಿದ್ದು, ಇದರ ಸೇವನೆಯಿಂದ ಆರೋಗ್ಯಕರ ಮೂಳೆಗಳು ನಮ್ಮದಾಗುತ್ತದೆ. ಮೂಳೆಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಇದ್ದರೂ ಸಹ ದೂರವಾಗುತ್ತದೆ. ನಿಯಮಿತವಾಗಿ ವಾಲ್ನಟ್ ಸೇವನೆಯಿಂದ ಹೃದಯದ ಆರೋಗ್ಯವು ಸಹ ಚೆನ್ನಾಗಿರುತ್ತದೆ.
ವಿಟಮಿನ್ ಮತ್ತು ಆಂಟಿ-ಆಕ್ಸಿಡೆಂಟ್ ಅಂಶಗಳು ಇರುವಂತಹ ವಾಲ್ನಟ್ ಬೀಜಗಳನ್ನು ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಾಲ್ನಟ್ ಬೀಜಗಳಲ್ಲಿ ಜಿಂಕ್ ಮತ್ತು ವಿಟಮಿನ್ E ಸಮೃದ್ಧವಾಗಿದೆ. ಇದರ ಸೇವನೆಯಿಂದ ಆರೋಗ್ಯಕರ ರೋಗ ನಿರೋಧಕ ವ್ಯವಸ್ಥೆ ನಮ್ಮದಾಗುತ್ತದೆ. ಸೋಂಕುಗಳು ಹಾಗೂ ಅಸ್ವಸ್ಥತೆ ಪರಿಣಾಮಕಾರಿಯಾಗಿ ದೂರವಾಗುತ್ತದೆ.