Sapota Fruit benefits: ಸಪೋಟಾ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಪೋಟಾದ ಮೂಲ ನಮ್ಮ ದೇಶವಲ್ಲ. ಬದಲಾಗಿ ಸ್ಪೇನ್ ರಾಷ್ಟ್ರಕ್ಕೆ ಸೇರಿದೆ. ಈ ಮರಗಳು ಮಧ್ಯ ಅಮೆರಿಕದಲ್ಲಿ ಹೇರಳವಾಗಿ ಕಾಣಬಹುದು. ಸ್ಪೇನ್ನಿಂದ ನೌಕಾಯಾನ ಮಾಡಿದವರು ಈ ಹಣ್ಣಿನ ಬೀಜಗಳನ್ನು ಭಾರತಕ್ಕೆ ತಂದು ಇಲ್ಲಿ ಬೆಳೆಯಲಾರಂಭಿಸಿದರು ಎಂದು ಹೇಳಲಾಗುತ್ತದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸಪೋಟಾ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಪೋಟಾದ ಮೂಲ ನಮ್ಮ ದೇಶವಲ್ಲ. ಬದಲಾಗಿ ಸ್ಪೇನ್ ರಾಷ್ಟ್ರಕ್ಕೆ ಸೇರಿದೆ. ಈ ಮರಗಳು ಮಧ್ಯ ಅಮೆರಿಕದಲ್ಲಿ ಹೇರಳವಾಗಿ ಕಾಣಬಹುದು. ಸ್ಪೇನ್ನಿಂದ ನೌಕಾಯಾನ ಮಾಡಿದವರು ಈ ಹಣ್ಣಿನ ಬೀಜಗಳನ್ನು ಭಾರತಕ್ಕೆ ತಂದು ಇಲ್ಲಿ ಬೆಳೆಯಲಾರಂಭಿಸಿದರು ಎಂದು ಹೇಳಲಾಗುತ್ತದೆ..
ಇನ್ನು ಈ ಹಣ್ಣು ಅಪಾರ ಪ್ರಮಾಣದಲ್ಲಿ ಪ್ರಯೋಜನಗಳನ್ನು ಹೊಂದಿದ್ದು, ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಇಲ್ಲಿ ನೀಡಲಿದ್ದೇವೆ.
ಈ ಹಣ್ಣುಗಳಲ್ಲಿರುವ ವಿಟಮಿನ್ ಎ ಮತ್ತು ಸಿ ನಮ್ಮ ಕಣ್ಣುಗಳಿಗೆ ಒಳ್ಳೆಯದು. ದೃಷ್ಟಿಯನ್ನು ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಿಂದ ವಿಷಕಾರಿ ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಹೃದಯವನ್ನು ರಕ್ಷಿಸಲು ಇದು ಪ್ರಯೋಜನಕಾರಿ.
ಇನ್ನು ಸಪೋಟಾಗಳಲ್ಲಿ ಸುಕ್ರೋಸ್ ಅಧಿಕವಾಗಿದೆ. ಇದು ತ್ವರಿತ ಶಕ್ತಿಯನ್ನು ನೀಡುತ್ತದೆ. ಕೆಲಸ ಮಾಡಿ ಸುಸ್ತಾಗಿರುವವರು ಈ ಹಣ್ಣುಗಳನ್ನು ತಿಂದರೆ ಸಾಕು ಫುಲ್ ಎನರ್ಜಿ ಹೊಂದುತ್ತಾರೆ.
ಸಪೋಟಾ ಹಣ್ಣು ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಇನ್ನೊಂದೆಡೆ ಸಪೋಟಾದಲ್ಲಿ ಫೈಬರ್ ಮತ್ತು ವಿಟಮಿನ್ ಬಿ ಜೊತೆಗೆ, ಆಂಟಿಆಕ್ಸಿಡೆಂಟ್ಗಳು ಅಧಿಕವಾಗಿವೆ. ಇವು ಕ್ಯಾನ್ಸರ್ ನಂತಹ ರೋಗಗಳನ್ನು ತಡೆಯುತ್ತವೆ.
ಸಪೋಟಾಗಳು ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣವನ್ನು ಹೊಂದಿದ್ದು, ಮೂಳೆಗಳನ್ನು ಬಲಗೊಳಿಸುತ್ತವೆ. ನಿತ್ಯವೂ ಸಪೋಟ ತಿಂದರೆ ವಯಸ್ಸಾದಾಗ ಹೆಚ್ಚು ಔಷಧ ಬಳಸಬೇಕಿಲ್ಲ. ಸಪೋಟಾಗಳಲ್ಲಿರುವ ಫೋಲೇಟ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ಸತು, ತಾಮ್ರ, ರಂಜಕ, ಸೆಲೆನಿಯಮ್ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
ಗರ್ಭಿಣಿಯರು ಬೆಳಿಗ್ಗೆ ಸಪೋಟಗಳನ್ನು ತಿನ್ನಬೇಕು. ಇದು ಹೊಟ್ಟೆಯಲ್ಲಿ ಮಗುವಿಗೆ ಕಾಲಜನ್ ಅನ್ನು ಉತ್ಪಾದಿಸುತ್ತದೆ. ಇನ್ನು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಸಪೋಟ ತಿಂದರೆ ಬಹಳ ಒಳ್ಳೆಯದು. ಇದು ಖಂಡಿತವಾಗಿಯೂ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.