Happy friendship day: ನೋವು ನಲಿವಿನಲ್ಲಿ ಸದಾ ಜೊತೆಗಿರುವ ನಿಮ್ಮ ಗೆಳೆಯನಿಗೆ ಕಳಿಸಿ ಸ್ಪೆಷಲ್‌ ವಿಶ್‌.. ಇಲ್ಲಿವೆ ನೋಡಿ ಫ್ರೆಂಡ್‌ಶಿಪ್‌ ಡೇ ಮೆಸೇಜ್‌ ಐಡಿಯಾಸ್!

Friendship Day‌ Wishes: ಭಾನುವಾರ (ಆಗಸ್ಟ್ 4) ಪ್ರಪಂಚದಾದ್ಯಂತ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಇಂದು ನಾವು ಆಚರಿಸುವ ಫ್ರೆಂಡ್ ಶಿಪ್ ಡೇಗೆ ಸುಮಾರು 89 ವರ್ಷಗಳ ಇತಿಹಾಸವಿದೆ. ಏಕೆಂದರೆ.. ಸ್ನೇಹಿತರ ದಿನ ಮೊದಲು ಹುಟ್ಟಿದ್ದು ಅಮೆರಿಕದಲ್ಲಿ. ಗ್ರೀಟಿಂಗ್ಸ್ ಕಾರ್ಡ್‌ಗಳಿಂದ ಆರಂಭವಾದ ಈ ಆಚರಣೆ ಈಗ ಸರಳ ಸಂದೇಶಗಳು ಮತ್ತು ಉಲ್ಲೇಖಗಳೊಂದಿಗೆ ನಡೆಯುತ್ತಿದೆ. ಈ ಸ್ಪೆಷಲ್‌ ದಿನದಂದು ನಿಮ್ಮ ಜೀವನದ ಸ್ಪೆಷಲ್‌ ವ್ಯಕ್ತಿಗೆ ವಿಶ್‌ ರೆಡಿ ಮಾಡಿಕೊಂಡಿದ್ದೀರಾ..? ಇಲ್ಲಿವೆ ನೋಡಿ ಕೆಲವು ಸ್ಪೆಷಲ್‌ ವಿಶ್‌ ಐಡಿಯಾಸ್...
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ನಗುವುದು ಸಹ ಕಷ್ಟವಾದಾಗ ನೀನು ನನ್ನನ್ನ ನಗಿಸಿದೆ ಅಳುವೇ ಜೀವನವಾದಾಗ ನೀ ನನ್ನ ಕಣ್ಣೊರಿಸಿದೆ ಸದಾ ನನ್ನ ಜೊತೆ ನಿಂತಿದ್ದಕ್ಕಾಗಿ ನಾನೆಂದಿಗೂ ನಿನಗೆ ಋಣಿಯಾಗಿರುತ್ತೇನೆ.  ಎಲ್ಲಾ ಜನ್ಮದಲ್ಲಿಯೂ ನನಗೆ ಸ್ನೇಹಿತನಾಗಿ ನೀನೇ ಬೇಕು.  ಹ್ಯಾಪಿ ಫ್ರೆಂಡ್‌ಶಿಪ್‌ ಡೇ

2 /5

ದೇವರು ನನಗಾಗಿ ಒಂದು ಜೀವಿಯನ್ನು ಸೃಷ್ಟಿಸಿದ್ದಾನೆ. ಆ ಜೀವಿ ನಗುತ್ತದೆ.. ಅಳುತ್ತದೆ.. ನನ್ನ ಕಷ್ಟಕ್ಕೆ ಕಣ್ಣೀರು ಹಾಕುತ್ತದೆ.. ಆ ಜೀವಿ ಬೇರೆ ಯಾರೂ ಅಲ್ಲ ನೀನೇ.. ನೀನು ನನ್ನ ಗೆಳೆಯ! ಸ್ನೇಹಿತರ ದಿನದ ಶುಭಾಶಯಗಳು

3 /5

ಸ್ನೇಹ ಎಂಬುದು ಎರಡು ಹೃದಯಗಳ ನಡುವೆ ಮೂಡುವ ಒಂದು ಅದ್ಭುತವಾದ ಸಂಬಂಧ..ಸಾವಿರಾರು ಹೃದಯಗಳ ನಡುವೆ ಒಂದಾದ ನಮ್ಮಿಬ್ಬರ ಸಂಗಮವನ್ನು ಯಾರಿಂದಲೂ ದೂರ ಮಾಡಲು ಸಾಧ್ಯವಿಲ್ಲ, ನಿನ್ನ ನೋವು-ನಲಿವು, ಸುಖ-ದುಖಃ ಎಲ್ಲದರಲ್ಲೂ ನಾನು ನಿನ್ನ ಜೊತೆಯಾಗಿ ನಿಲ್ಲುತ್ತೇನೆ...ಸ್ನೇಹಿತರ ದಿನದ ಶುಭಾಶಯಗಳು  

4 /5

ನನ್ನನ್ನು ಅರಿತುಕೊಂಡು ಸದಾ ನನ್ನ ಯೋಚನೆಗಳಿಗೆ ಸಾತ್‌ ನೀಡುವ ನಿನಗೆ ನಾನೆಂದು ಚಿರಋಣಿ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ...  

5 /5

ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಮಾತ್ರವಲ್ಲ ನೋವಿನ ಸಮಯದಲ್ಲಿಯೂ ನನ್ನ  ಬೆನ್ನೆಲುಬಾಗಿ ನಿಂತಿದ್ದಕ್ಕಗಿ ಧನ್ಯವಾದ. ಸ್ನೇಹಿತರ ದಿನದ ಶುಭಾಶಯಗಳು ನನ್ನ ಸ್ನೇಹಿತ