Guru Gochar 2023 Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಯಾರ ಜಾತಕದಲ್ಲಿ ಗುರುವು ಶುಭ ಸ್ಥಾನದಲ್ಲಿದ್ದಾನೋ ಅವರ ಜೀವನವು ಸದಾ ಸಂತೋಷದಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
Guru Gochar 2023 Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಸ್ಥಾನಮಾನವನ್ನು ಅಲಂಕರಿಸಿರುವ ಬೃಹಸ್ಪತಿಯನ್ನು ಸಂತೋಷ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಯಾರ ಜಾತಕದಲ್ಲಿ ಗುರುವು ಶುಭ ಸ್ಥಾನದಲ್ಲಿದ್ದಾನೋ ಅವರ ಜೀವನವು ಸದಾ ಸಂತೋಷದಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಪ್ರಸ್ತುತ ಮೀನ ರಾಶಿಯಲ್ಲಿರುವ ಗುರುವು ಹೊಸ ವರ್ಷದಲ್ಲಿ ಅಂದರೆ 2023ರಲ್ಲಿ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾರೆ. 2023ರಲ್ಲಿ ಗುರು ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಬಹಳ ಶುಭ. ಹೊಸ ವರ್ಷದಲ್ಲಿ ಗುರು ಗ್ರಹದ ಕೃಪೆಯಿಂದ ಅವರ ಭವಿಷ್ಯ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಿಥುನ ರಾಶಿ: ಹೊಸ ವರ್ಷದಲ್ಲಿ ದೇವ ಗುರು ಬೃಹಸ್ಪತಿಯು ಮಿಥುನ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು ಹಣಕಾಸಿನ ಸಂಕಷ್ಟಗಳಿಂದ ಮುಕ್ತಿ ಪಡೆಯುವಿರಿ. ಉದ್ಯೋಗಸ್ಥರಿಗೆ ನಿಮ್ಮ ನೆಚ್ಚಿನ ಜಾಗಕ್ಕೆ ವರ್ಗಾವಣೆ ಸಾಧ್ಯತೆ ಇದೆ. ವ್ಯಾಪಾರ-ವ್ಯವಹಾರದಲ್ಲಿಯೂ ಪ್ರಯೋಜನವಾಗಲಿದೆ.
ಕರ್ಕಾಟಕ ರಾಶಿ: 2023ರಲ್ಲಿ ಗುರು ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಗುರು ಕೃಪೆಯಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಅಷ್ಟೇ ಅಲ್ಲದೆ, ನೀವು ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೇರುವ ಸಾಧ್ಯತೆಯೂ ಇದೆ.
ಕನ್ಯಾ ರಾಶಿ: ಹೊಸ ವರ್ಷದಲ್ಲಿ ಗುರುವಿನ ಸಂಚಾರವು ಕನ್ಯಾ ರಾಶಿಯ ಜನರಿಗೆ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ನಿಮ್ಮದಾಗಲಿದ್ದು, ಸಮಾಜದಲ್ಲಿ ಕೀರ್ತಿ, ಗೌರವ ಹೆಚ್ಚಾಗಲಿದೆ.
ತುಲಾ ರಾಶಿ: 2023ರಲ್ಲಿ ಗುರು ರಾಶಿ ಪರಿವರ್ತನೆಯು ಈ ರಾಶಿಯ ಜನರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಈ ರಾಶಿಯ ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದ್ದಾರೆ, ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ನಿಮ್ಮ ದೀರ್ಘಾವಧಿಯಿಂದ ಸಿಲುಕಿರುವ ಕೆಲಸಗಳು ಈ ಸಮಯದಲ್ಲಿ ವೇಗವನ್ನು ಪಡೆಯಲಿವೆ. ಇದೆಲ್ಲದರ ಜೊತೆಗೆ ವಿತ್ತೀಯ ಲಾಭದ ಸಾಧ್ಯತೆ ಇದ್ದು, ಆರ್ಥಿಕ ಸಂಕಷ್ಟಗಳು ದೂರವಾಗಲಿವೆ.
ಮೀನ ರಾಶಿ: 2023ರಲ್ಲಿ ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಲಿರುವ ದೇವ ಗುರು ಬೃಹಸ್ಪತಿಯು ಮೀನ ರಾಶಿಯವರ ಮೇಲೆ ಅಪಾರ ಆಶೀರ್ವಾದವನ್ನು ಕರುಣಿಸಲಿದ್ದಾನೆ. ಇದರ ಪರಿಣಾಮವಾಗಿ, ವಿತ್ತೀಯ ಲಾಭವಾಗಲಿದ್ದು ನೀವು ಆರ್ಥಿಕವಾಗಿ ಬಲಿಷ್ಠರಾಗುವಿರಿ. ಮಾತ್ರವಲ್ಲ, ನಿಮ್ಮ ಪ್ರತಿ ಕೆಲಸದಲ್ಲಿಯೂ ಗುರು ಕೃಪೆಯಿಂದ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಸೂಚನೆ: ಈ ಫೋಟೋ ಗ್ಯಾಲರಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.