Govinda Daughter: 33ನೇ ವಯಸ್ಸಿನಲ್ಲಿ 30ಕ್ಕೂ ಹೆಚ್ಚು ಸಿನಿಮಾ ತಿರಸ್ಕರಿಸಿರುವ ಬಾಲಿವುಡ್ ನಟ ಗೋವಿಂದ ಪುತ್ರಿ!

2015ರಲ್ಲಿಯೇ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ 33ರ ಹರೆದಯ ಗೋವಿಂದರ ಪುತ್ರಿ ಬರೋಬ್ಬರಿ 30 ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರಂತೆ.

ನವದೆಹಲಿ: ಟೀನಾ ಅಹುಜಾ ಅವರು ಖ್ಯಾತ ಬಾಲಿವುಡ್ ನಟ ಗೋವಿಂದ ಅವರ ಪುತ್ರಿ. ಬಾಲಿವುಡ್‌ನ ಸ್ಟಾರ್ ಮಕ್ಕಳೆಲ್ಲಾ ಈಗ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಗೋವಿಂದ ಅವರ ಮಗಳು ಮಾತ್ರ ಮೇಲಿಂದ ಮೇಲೆ ಸಿನಿಮಾಗಳನ್ನು ತಿರಸ್ಕರಿಸುತ್ತಿದ್ದಾರೆ. ನಟನೆಯಲ್ಲಿಯೇ ವೃತ್ತಿಜೀವನ ರೂಪಿಸಿಕೊಳ್ಳುವ ಕನಸು ಕಂಡವರಲ್ಲಿ ಟೀನಾ ಅಹುಜಾ ಕೂಡ ಒಬ್ಬರು. 2015ರಲ್ಲಿಯೇ ಚಿತ್ರರಂಗ ಪ್ರವೇಶಿಸಿದ 33ರ ಹರೆದಯ ಗೋವಿಂದರ ಪುತ್ರಿ ಬರೋಬ್ಬರಿ 30 ಚಿತ್ರಗಳನ್ನು ರಿಜೆಕ್ಟ್ ಮಾಡಿದ್ದಾರಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಖ್ಯಾತ ಬಾಲಿವುಡ್ ನಟ ಗೋವಿಂದ ಸೂಪರ್ ಸ್ಟಾರ್ ಆಗಿ ಮಿಂಚಿದವರು. 80 ಮತ್ತು 90ರ ದಶಕದಲ್ಲಿ ಅವರ ಸಿನಿಮಾಗಳು ಇಂದಿಗೂ ಸದ್ದು ಮಾಡುತ್ತಿದೆ. ಅವರ ನಟನೆ-ಡ್ಯಾನ್ಸ್ ಬಗ್ಗೆ ಇಂದಿಗೂ ಚರ್ಚೆಗಳಾಗುತ್ತಿವೆ. ಆದರೆ 7 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರ ಮಗ ಅಥವಾ ಮಗಳು ಟೀನಾ ಅಹುಜಾ ಈವರೆಗೆ ಆ ಸ್ಟಾರ್‌ಡಮ್ ಪಡೆಯಲು ಸಾಧ್ಯವಾಗಿಲ್ಲ.  

2 /5

2015ರಲ್ಲಿ ಟೀನಾ ಅಹುಜಾ ‘ಸೆಕೆಂಡ್ ಹ್ಯಾಂಡ್ ಹಸ್ಬೆಂಡ್’ ಚಿತ್ರದ ಮೂಲಕ ತಮ್ಮ ಚಿತ್ರರಂಗದ ವೃತ್ತಿಜೀವನ ಪ್ರಾರಂಭಿಸಿದರು. ಆದರೆ ಟೀನಾಗೆ ಹೇಳಿಕೊಳ್ಳುವಂತಹ ದೊಡ್ಡಮಟ್ಟದ ಯಶಸ್ಸು ಇಂದಿಗೂ ಸಿಕ್ಕಿಲ್ಲ. ಇದಲ್ಲದೇ ಟೀನಾ ಅಹುಜಾ ಹಲವು ಮ್ಯೂಸಿಕ್ ವಿಡಿಯೋ/ಆಲ್ಬಂಗಳಲ್ಲಿ  ಕಾಣಿಸಿಕೊಂಡಿದ್ದಾರೆ. ತಂದೆಯಂತೆ ಸ್ಟಾರ್ ಆಗಿ ಮಿಂಚಲು ಈ ನಟಿಗೆ ಸಾಧ‍್ಯವಾಗಿಲ್ಲ.   

3 /5

ಮಾಧ್ಯಮ ವರದಿಗಳ ಪ್ರಕಾರ ಟೀನಾ ಕಳೆದ 3 ವರ್ಷಗಳಲ್ಲಿ ಸುಮಾರು 30 ಚಿತ್ರಗಳನ್ನು ತಿರಸ್ಕರಿಸಿದ್ದಾರಂತೆ. ಟೀನಾ ತನ್ನ ತಂದೆಯಂತೆ ಕಾಮಿಡಿ ಚಿತ್ರಗಳನ್ನು ಮಾಡಲು ಬಯಸುತ್ತಾರಂತೆ. ಆದರೆ ಇಲ್ಲಿಯವರೆಗೆ ಅವರಿಗೆ ಅಂತಹ ಯಾವುದೇ ಸ್ಕ್ರಿಪ್ಟ್ ಸಿಕ್ಕಿಲ್ಲವೆಂದು ಹೇಳಲಾಗಿದೆ.

4 /5

ಟೀನಾ ಅಹುಜಾಗೆ 33 ವರ್ಷ ವಯಸ್ಸಾಗಿದೆ. ಆದರೆ ಪ್ರಸ್ತುತ ಅವರ ವೃತ್ತಿಜೀವನಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಟೀನಾ ಅಹುಜಾ ತನ್ನ ತಂದೆ ಗೋವಿಂದರೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಅವರ ಯಾವುದೇ ಪ್ರಾಜೆಕ್ಟ್‌ಗಳಿಗೆ ಹೆಚ್ಚಿನ ಗಮನವೇ ನೀಡಿಲ್ಲ.

5 /5

ಗೋವಿಂದರ ಪುತ್ರಿ ಅವರಂತೆಯೇ ತುಂಬಾ ಸ್ಮಾರ್ಟ್ ಆಗಿದ್ದಾರೆ. ಈ ನಟಿಯ ಸೌಂದರ್ಯವು ಆಗಾಗ್ಗೆ ಚರ್ಚೆಯಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಟೀನಾ ಅಹುಜಾ ಆಗಾಗ್ಗೆ ತನಗೆ ಸಂಬಂಧಿಸಿದ ಇತ್ತೀಚಿನ ಅಪ್‍ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ತಂದೆಯಂತೆ ಅಹುಜಾ ಕುಟುಂಬದ ಹೆಸರು ಬೆಳಗಿಸುವ ಸುಂದರ ಕ್ಷಣಕ್ಕಾಗಿ ನಟಿ ಕಾಯುತ್ತಿದ್ದಾರೆ.