Govt Scheme For Marriage: ಬಡ ಕುಟುಂಬಗಳ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವು ಒದಗಿಸಌ ಸರ್ಕಾರಗಳು ಅನೇಕ ಯೋಜನೆಗಳನ್ನು ನಡೆಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ಈ ಯೋಜನೆಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳಲ್ಲಿ ಒಂದು ಯೋಜನೆಯನ್ನು ಯುಪಿ ಸರ್ಕಾರ ನಡೆಸುತ್ತಿದೆ, ಅದರ ಹೆಸರು 'ಶಾದಿ ಅನುದಾನ್ ಯೋಜನೆ'.
ಇದನ್ನೂ ಓದಿ-ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಚತುರ್ಗ್ರಹಿ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಾಗಮನ ಭಾಗ್ಯ ಪ್ರಾಪ್ತಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಹುಡುಗಿಯ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿರುವಾಗ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಮದುವೆಯಾಗಲಿರುವ ಹುಡುಗನ ವಯಸ್ಸು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರಬೇಕು. ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಯೋಜನೆಯ ಲಾಭ ಪಡೆಯಬಹುದು. ಎಲ್ಲಾ ವರ್ಗದ ಕುಟುಂಬಗಳ ಹೆಣ್ಣು ಮಕ್ಕಳನ್ನು ಯೋಜನೆಯಡಿ ಸೇರಿಸಲಾಗಿದೆ.
2. ಯೋಜನೆಯ ಮೂರು ಷರತ್ತುಗಳಿವೆ. ಮೊದಲನೆಯದು ಅರ್ಜಿದಾರರು ಉತ್ತರ ಪ್ರದೇಶದ ಖಾಯಂ ನಿವಾಸಿಯಾಗಿರಬೇಕು. ಎರಡನೇದಾಗಿ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ 46800 ಮತ್ತು ನಗರ ಪ್ರದೇಶದವರಿಗೆ 56400 ರೂ.ಗಿಂತ ಹೆಚ್ಚಿರಬಾರದು. ಮೂರನೇದಾಗಿ ಷರತ್ತು ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯಾಗಿರಬೇಕು.
3. ಅರ್ಜಿದಾರರು ಯುಪಿಯ ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಅರ್ಜಿದಾರರು ತಮ್ಮ ಆದಾಯ ಪ್ರಮಾಣಪತ್ರವನ್ನು ತೋರಿಸಬೇಕು, ಜೊತೆಗೆ ಮದುವೆಯಾಗುವ ದಂಪತಿಗಳ ವಯಸ್ಸಿನ ಪ್ರಮಾಣಪತ್ರವನ್ನು ತೋರಿಸಬೇಕು.
4. ಅರ್ಜಿದಾರರು ಯಾವುದೇ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರಬೇಕು. ಇದರಿಂದ ಅನುದಾನದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಈ ಖಾತೆಯು ಸರ್ಕಾರಿ ಬ್ಯಾಂಕ್‌ನಲ್ಲಿ ಮಾತ್ರ ಇರಬೇಕು.
5, ಅರ್ಜಿದಾರರು OBC / SC / ST ವರ್ಗದವರಾಗಿದ್ದರೆ, ಅವರು ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು. ಇತರೆ ವರ್ಗಗಳಿಗೆ ಜಾತಿ ಪ್ರಮಾಣ ಪತ್ರ ಅಗತ್ಯವಿಲ್ಲ.
6. ಅರ್ಜಿದಾರನು ಮಗಳ ಮದುವೆ ಇದ್ದಾಗ ಮಾತ್ರ ಸರ್ಕಾರ ನೀಡುವ ಈ ಹಣವನ್ನು ವಿತ್ ಡ್ರಾ ಮಾಡಬಹುದು. ಮದುವೆಗೆ 90 ದಿನಗಳ ಮೊದಲು ಅಥವಾ 90 ದಿನಗಳ ನಂತರ ಅರ್ಜಿ ಸಲ್ಲಿಸಬಹುದು.
7. ಯೋಜನೆಯ ಲಾಭ ಪಡೆಯಲು, ಯುಪಿ ಸರ್ಕಾರದ ವೆಬ್‌ಸೈಟ್ shadianudan.upsdc.gov.in ನಲ್ಲಿ ನೋಂದಣಿಯನ್ನು ಮಾಡಬೇಕಾಗುತ್ತದೆ. ವೆಬ್‌ಸೈಟ್‌ನ ಮುಖಪುಟದಲ್ಲಿ ಹೊಸ ನೋಂದಣಿಯ ಆಯ್ಕೆಯ ಅಡಿಯಲ್ಲಿ, ನೀವು ಜಾತಿಗೆ ಅನುಗುಣವಾಗಿ ಕೆಳಗೆ ನೀಡಲಾದ ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ.