7th Pay commission : ಈಗ ಜೀವವಿಮೆ ಹಣವನ್ನು LTC ಮೂಲಕ ಕ್ಲೈಂ ಮಾಡಬಹುದು..!

7 ನೇ ವೇತನ ಆಯೋಗ: ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್ ಇದೆ. ಇನ್ನು ಮುಂದೆ, ಹೊಸ ಜೀವವಿಮೆಯನ್ನು ಸರ್ಕಾರಿ ನೌಕರರು, ಎಲ್‌ಟಿಸಿಯಲ್ಲಿ ಕ್ಲೈಂ ಮಾಡಬಹುದಾಗಿದೆ. 
 

ನವದೆಹಲಿ : ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಸರ್ಕಾರ ಮಾಡುವ ಘೋಷಣೆಗಾಗಿ ಎಲ್ಲಾ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದಾರೆ. ಹೋಳಿ ಹಬ್ಬಕ್ಕೂ ಮುನ್ನವೇ ಸರ್ಕಾರ  ಘೋಷಣೆ ಮಾಡಿ ಹೊಳಿ ಹಬ್ಬದ ಗಿಫ್ಟ್ ನೀಡಬಹುದು ಎನ್ನಲಾಗಿದೆ. ಆದರೆ ಅದಕ್ಕೂ ಮೊದಲು ಸರ್ಕಾರ ಇನ್ನೊಂದು  ನಿರ್ಧಾರವನ್ನ ಪ್ರಕಟಿಸಿದೆ. ಈ ನಿರ್ಧಾರದಿಂದ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದೆ.  ಪ್ರತಿಯೊಬ್ಬ ಸರ್ಕಾರಿ ನೌಕರನೂ ಇದರ ಲಾಭವನ್ನು ಪಡೆಯಬಹುದಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕರೋನಾ ಅವಧಿಯಲ್ಲಿ, ಲಾಕ್ ಡೌನ್ ಇದ್ದ ಕಾರಣದಿಂದ  ಸರ್ಕಾರಿ ನೌಕರರು ಹೊರಗಡೆ ಹೋಗುವುದು ಸಾಧ್ಯವಾಗಿರಲಿಲ್ಲ.ಹಾಗಾಗಿ ಸರ್ಕಾರಿ ನೌಕರರು, ಎಲ್ ಟಿಸಿ ಕ್ಲೈಂ ಮಾಡುವುದು ಕೂಡಾ ಸಾಧ್ಯವಾಗಿಲ್ಲ. ಆದರೆ ಕರೋನಾ ಕಾಲದಲ್ಲಿ ಸರ್ಕಾರಿ ನೌಕರರು ಯಾವುದಾದರೂ ಜೀವವಿಮೆ ಮಾಡಿಸಿದ್ದಲ್ಲಿ, ಎಲ್ ಟಿಸಿ ಮೂಲಕ ಇದನ್ನು ಕ್ಲೈಂ ಮಾಡಬಹುದಾಗಿದೆ.  

2 /5

ಎಲ್‌ಟಿಸಿ ಯೋಜನೆಯಲ್ಲಿ ಮಾಡಲಾದ  ಬದಲಾವಣೆಯಿಂದ ಸರ್ಕಾರಿ ನೌಕರರು ಸಂತೋಷದ ಅಲೆಯಲ್ಲಿದ್ದಾರೆ. ಈ ಬದಲಾವಣೆಯ ಲಾಭ ಕೇಂದ್ರ ಸರ್ಕಾರಿ ನೌಕರರು ಮಾತ್ರವಲ್ಲ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೂ ಸಿಗಲಿದೆ.

3 /5

ಕರೋನಾ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಎಲ್‌ಟಿಸಿ ಯೋಜನೆಯನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ, ಅಕ್ಟೋಬರ್ 12 ಮತ್ತು ಮಾರ್ಚ್ 31 ರ ನಡುವೆ ನಡೆಸಲಾಗಿದ್ದ ಶಾಪಿಂಗ್ ನಲ್ಲಿ ಶೇಕಡಾ 12 ಮತ್ತು ಅದಕ್ಕಿಂತ ಹೆಚ್ಚಿನ ಜಿಎಸ್ ಟಿ ಪಾವತಿಸಿದ್ದರೆ, ಇದರ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿತ್ತು.  ಇದರ ಅಡಿಯಲ್ಲಿ ಪ್ರತಿ ಉದ್ಯೋಗಿಗೆ 10 ಸಾವಿರ ರೂಪಾಯಿ ನಗದು ನೀಡುವ ಅವಕಾಶವೂ ಇತ್ತು.

4 /5

ಕರೋನಾ ಅವಧಿಯಲ್ಲಿ, ಡಿಎ ಹೆಚ್ಚಳವನ್ನು ಸರ್ಕಾರ ತಡೆ ಹಿಡಿದಿತ್ತು. ಇದೀಗ, ತಡೆಹಿಡಿದಿರುವ ಡಿಎಯನ್ನು ಸರ್ಕಾರ ಫೋಷಿಸಿದರೆ,  ತುಟ್ಟಿಭತ್ಯೆ ಶೇಕಡಾ 25 ರಷ್ಟು ಆಗಲಿದೆ. ಇದೀಗ 17 ಪ್ರತಿಶತ ಡಿಎ ನೀಡಲಾಗುತ್ತಿದೆ.

5 /5

ಬಜೆಟ್ ಮಂಡನೆಯಾದಂದಿನಿಂದ ಡಿಎ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಇದೀಗ ಮಾರ್ಚ್ ಆರಂಭವಾಗಿದ್ದು ಈ ತಿಂಗಳಲ್ಲಿ ನೌಕರರ ನಿರೀಕ್ಷೆ ಹೆಚ್ಚಿದೆ. ಈ ತಿಂಗಳಲ್ಲಿ ಹೋಳಿ ಹಬ್ಬವೂ ಇರುವುದರಿಂದ ಹಬ್ಬದ ವೇಳೆ ಡಿಎ ಹೆಚ್ಚಳ ಘೋಷಣೆಯಾಗಬಹುದು ಎನ್ನಲಾಗಿದೆ.