Google Ceo Expensive House: ಗೂಗಲ್ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು 2022ರಲ್ಲಿ ಬರೋಬ್ಬರಿ 1,854 ಕೋಟಿ(226 ಮಿಲಿಯನ್ ಯುಎಸ್ ಡಾಲರ್) ರೂ. ಸಂಭಾವನೆ ಪಡೆದುಕೊಂಡಿದ್ದಾರೆ.
Google CEO Expensive House: ಗೂಗಲ್ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು 2022ರಲ್ಲಿ ಬರೋಬ್ಬರಿ 1,854 ಕೋಟಿ(226 ಮಿಲಿಯನ್ ಯುಎಸ್ ಡಾಲರ್) ರೂ. ಸಂಭಾವನೆ ಪಡೆದುಕೊಂಡಿದ್ದಾರೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಯ ಸಿಇಒ ಆಗಿರುವ ಸುಂದರ್ ಪಿಚೈ ಅವರ ಐಷಾರಾಮಿ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ! ಹೌದು, ಈ ಮನೆಯ ಸೌಂದರ್ಯವು ಅದರ ಒಳಾಂಗಣಕ್ಕೆ ಸೀಮಿತವಾಗಿಲ್ಲ. ಒಳಗೆ ಮತ್ತು ಹೊರಗೆ ಅದ್ಭುತವಾಗಿ ನಿರ್ಮಿಸಲಾಗಿದೆ. ಅದ್ಭುತ ನೋಟಗಳು ಮತ್ತು ದೊಡ್ಡ ತೆರೆದ ಸ್ಥಳಗಳು ಈ ಮನೆಯ ಆಕರ್ಷಣೆಯನ್ನು ಹೆಚ್ಚಿಸಿವೆ. ಮನೆಯಲ್ಲಿ ಸ್ವೀಮಿಂಗ್ ಪೂಲ್, ಜಿಮ್, ಸ್ಪಾ, ಬಾರ್ ಮತ್ತು ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಹಲವು ಆಧುನಿಕ ಸೌಲಭ್ಯಗಳೂ ಈ ಮನೆಯಲ್ಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಆಲ್ಫಾಬೆಟ್ ಮತ್ತು ಅದರ ಅಂಗಸಂಸ್ಥೆ Googleನ CEO ಸುಂದರ್ ಪಿಚೈ ಅವರು ಅನೇಕರಿಗೆ ಮಾದರಿಯಾಗಿದ್ದಾರೆ. ವರದಿಗಳ ಪ್ರಕಾರ 2022ರಲ್ಲಿ ಸುಂದರ್ ಪಿಚೈ $226 ಮಿಲಿಯನ್ ಅಂದರೆ ಸುಮಾರು 1,854 ಕೋಟಿ ರೂ. ಸಂಭಾವಣೆ ಪಡೆದುಕೊಂಡಿದ್ದಾರೆ. 2015ರಲ್ಲಿ ಪಿಚೈ ಗೂಗಲ್‌ನ ಸಿಇಒ ಆಗಿ ನೇಮಕಗೊಂಡರು. 2019ರಲ್ಲಿ ಅವರು ಆಲ್ಫಾಬೆಟ್ ಇಂಕ್‌ನ ಸಿಇಒ ಆದರು. ಅವರ ನಾಯಕತ್ವದಲ್ಲಿ ಗೂಗಲ್ ತನ್ನ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಅದ್ಭುತ ಯಶಸ್ಸು ಕಂಡಿತು. ಗೂಗಲ್ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿಶೇಷ ಆಸಕ್ತಿ ವಹಿಸಿದೆ.
ಸುಂದರ್ ಪಿಚೈ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಈ ಪೈಕಿ ಅವರ ಐಷಾರಾಮಿ ಮನೆಯೂ ಸೇರಿದೆ. ಸುಂದರ್ ಪಿಚೈ ಅವರ ಮನೆ ನೋಟದಲ್ಲಿ ಸಾಕಷ್ಟು ಐಷಾರಾಮಿಯಾಗಿದೆ. ಮನೆಯನ್ನು ಕೂಡ ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಈ ಮನೆ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಕೌಂಟಿಯ ಲಾಸ್ ಆಲ್ಟೋಸ್‌ನಲ್ಲಿರುವ ಬೆಟ್ಟದ ಮೇಲಿದೆ. ಈ ಆಸ್ತಿ 31.17 ಎಕರೆ ಭೂಮಿಯಲ್ಲಿದೆ.
ಈ ಮನೆಯ ಸೌಂದರ್ಯವು ಅದರ ಒಳಾಂಗಣಕ್ಕೆ ಸೀಮಿತವಾಗಿಲ್ಲ. ಅದ್ಭುತ ನೋಟಗಳು ಮತ್ತು ದೊಡ್ಡ ತೆರೆದ ಸ್ಥಳಗಳು ಈ ಮನೆಯ ಆಕರ್ಷಣೆಯನ್ನು ಹೆಚ್ಚಿಸಿವೆ. ಮನೆಯಲ್ಲಿ ಸ್ವೀಮಿಂಗ್ ಪೂಲ್, ಜಿಮ್, ಸ್ಪಾ, ಬಾರ್ ಮತ್ತು ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಹಲವು ಆಧುನಿಕ ಸೌಲಭ್ಯಗಳೂ ಮನೆಯಲ್ಲಿವೆ. ಮನೆ ತುಂಬಾ ಸುಂದರವಾಗಿ ಕಾಣುತ್ತದೆ. ಈ ಮನೆ ಕಟ್ಟಲು ಕೋಟ್ಯಂತರ ರೂ.ಖರ್ಚು ಮಾಡಲಾಗಿದೆ.
ವರದಿಗಳ ಪ್ರಕಾರ ಈ ಮನೆಯ ಒಳಾಂಗಣವನ್ನು ಸುಂದರ್ ಪಿಚೈ ಅವರ ಪತ್ನಿ ಅಂಜಲಿ ವಿನ್ಯಾಸಗೊಳಿಸಿದ್ದಾರೆ. ಇದಕ್ಕಾಗಿ ಅವರು 49 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಒಳಾಂಗಣ ವಿನ್ಯಾಸವು ಸಾಕಷ್ಟು ಐಷಾರಾಮಿ ಮತ್ತು ವಿಶಿಷ್ಟವಾಗಿದೆ. ಪಿಚೈ ಈ ಮನೆಯನ್ನು 40 ಮಿಲಿಯನ್ ಡಾಲರ್‌ಗೆ ಖರೀದಿಸಿದ್ದರು. ಕೆಲವೇ ವರ್ಷಗಳಲ್ಲಿ ಅದರ ಮೌಲ್ಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ.
ಕೆಲವು ವರದಿಗಳ ಪ್ರಕಾರ ಸುಂದರ್ ಪಿಚೈ ಅವರ ನಿವ್ವಳ ಮೌಲ್ಯವು 1,310 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಾಗಿದೆಯಂತೆ. ಪಿಚೈ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.