30 ವರ್ಷಗಳ ನಂತರ ಶನಿಮಹಾತ್ಮ ರೂಪಿಸುವ ಶಶ ಮಹಾಪುರುಷ ಯೋಗದಿಂದ ಈ ರಾಶಿಯವರಿಗೆ ಒಲಿದು ಬರುವುದು ಅದೃಷ್ಟ

ಶನಿಯು ಮಹಾಪುರುಷ ರಾಜಯೋಗವನ್ನು ಸೃಷ್ಟಿ ಮಾಡುತ್ತಿದ್ದಾನೆ. ಈ ಯೋಗದ ಕಾರಣ ನಾಲ್ಕು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ.

ಬೆಂಗಳೂರು : ನವಗ್ರಹಗಳ ಪೈಕಿ ಶನಿಗ್ರಹಕ್ಕೆ ವಿಶೇಷ ಸ್ಥಾನವಿದೆ. ಜಾತಕದಲ್ಲಿ ಶನಿಯು ಯಾವ ಸ್ಥಾನದಲ್ಲಿ ಇದ್ದಾನೆ ಎನ್ನುವುದು ವ್ಯಕ್ತಿಯ ಭವಿಷ್ಯದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಇನ್ನು ಶನಿಯ ರಾಶಿ ಬದಲಾವಣೆ ಕೂಡಾ ಪ್ರತಿಯೊಬ್ಬರ ಜನ್ಮ ಜಾತಕದ ಮೇಲೆ ಪರಭಾವ ಬೀರುತ್ತದೆ. ಜನವರಿ 17, 2023 ರಂದು, ಶನಿಯು ತನ್ನ ರಾಶಿಯನ್ನು ಬದಲಾಯಿಸಿ, ಕುಂಭ ರಾಶಿಯನ್ನು ಪ್ರವೇಶಿಸಲಿದೆ. 30 ವರ್ಷಗಳ ನಂತರ ಶನಿಯು  ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಹಾಗಾಗಿ ಇದರ ಪರಿಣಾಮ ಕೂಡಾ ವಿಶೇಷವಾಗಿರುತ್ತದೆ. ಹೀಗೆ ಕುಂಭ ರಾಶಿ ಪ್ರವೇಶಿಸಿದ ಶನಿದೇವ ನಂತರ ಮಾರ್ಚ್ 29, 2025 ರವರೆಗೆ ಕುಂಭ ರಾಶಿಯಲ್ಲಿಯೇ ನೆಲೆಯಾಗಲಿದ್ದಾನೆ.  ಈ ಕಾರಣದಿಂದಾಗಿ ಶನಿಯು ಮಹಾಪುರುಷ ರಾಜಯೋಗವನ್ನು ಸೃಷ್ಟಿ ಮಾಡುತ್ತಿದ್ದಾನೆ. ಈ ಯೋಗದ ಕಾರಣ ನಾಲ್ಕು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ವೃಷಭ ರಾಶಿ : ಶನಿ ರೂಪಿಸುತ್ತಿರುವ ಮಹಾಪುರುಷ ರಾಜಯೋಗ  ವೃಷಭ ರಾಶಿಯವರಿಗೆ ಧನ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗಾವಕಾಶಗಳು ಒಲಿದು ಬರಲಿವೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬೇಕು ಎಂದುಕೊಂಡವರಿಗೆ ಜನವರಿ 17ರ ನಂತರದ ಸಮಯ ಉತ್ತಮವಾಗಿರುತ್ತದೆ. 

2 /4

ಮಿಥುನ ರಾಶಿ : ಶನಿಯು ಕುಂಭ ರಾಶಿ ಪ್ರವೇಶ ಮಾಡುತ್ತಿದ್ದಂತೆಯೇ ಮಿಥುನ್ ರಾಶಿಯವರ ಎಲ್ಲಾ ರೀತಿಯ ದುಃಖ, ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಪ್ರೇಮ ವಿಷಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಭಾಗ್ಯ ಸಿಗುತ್ತದೆ.

3 /4

ತುಲಾ ರಾಶಿ : ಶನಿ ಗ್ರಹದ ರಾಶಿ ಪರಿವರ್ತನೆಯಿಂದ ತುಲಾ ರಾಶಿಯವರಿಗೂ ಅದೃಷ್ಟ ಕೈ ಹಿಡಿಯಲಿದೆ. ಸಂಸಾರದಲ್ಲಿ ಸುಖ ಶಾಂತಿ ನೆಲೆಸಲಿದೆ. ಪತಿ-ಪತ್ನಿ ಬಾಂಧವ್ಯ ಮಧುರವಾಗಿರುತ್ತದೆ. ಮಕ್ಕಳ ಮೂಲಕ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕ ಲಾಭವಾಗಲಿದೆ. 

4 /4

ಧನು ರಾಶಿ : ಇಲ್ಲಿಯವರೆಗೆ ಧನು ರಾಶಿಯವರನ್ನು ಕಾಡಿರುವ ಶನಿ ಮಹಾತ್ಮ, ಇನ್ನು ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ.  ವೃತ್ತಿ ಮತ್ತು ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದೆ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿದ್ದಾರೆ. ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ.  (Disclaimer: ಈ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)