ಇನ್ನು ಮೂರು ದಿನಗಳಲ್ಲಿ ಈ ರಾಶಿಯವರ ಬದುಕಿನ ಶುಭ ದಿನಗಳು ಆರಂಭ.!

ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಜನವರಿ 22 ರಂದು ಶುಕ್ರ ಸಂಕ್ರಮಣ ನಡೆಯಲಿದೆ.  ಈ ಮೂಲಕ, 5 ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ. 

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಜನವರಿ 22 ರಂದು ಶುಕ್ರ ಸಂಕ್ರಮಣ ನಡೆಯಲಿದೆ.  ಈ ಮೂಲಕ, 5 ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /4

ವೃಷಭ ರಾಶಿ :  ಶುಕ್ರನು ವೃಷಭ ರಾಶಿಯ ಅಧಿಪತಿ. ಶುಕ್ರನ ಈ ಸಂಕ್ರಮಣ ವು ವೃಷಭ ರಾಶಿಯವರಿಗೆ ವರವಾಗಿ ಪರಿಣಮಿಸಲಿದೆ. ಕೆಲಸದ ಸ್ಥಳದಲ್ಲಿ ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳಾಗಳಿವೆ. ಸ್ನೇಹಿತರ ಸಹಾಯದಿಂದ ದೊಡ್ಡ ಮಟ್ಟದ ಲಾಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಕ್ರಮ ನಡೆಯಲಿದೆ.

2 /4

ಮಿಥುನ ರಾಶಿ : ಶುಕ್ರನ ಸಂಕ್ರಮಣ ಮಿಥುನ ರಾಶಿಯವರಿಗೆ ಕೂಡಾ ಅದೃಷ್ಟ ತರಲಿದೆ. ಇಲ್ಲಿಯವರೆಗೆ ನಿಂತು ಹೋಗಿದ್ದ ಎಲ್ಲಾ ಕೆಲಸಗಳು ಮತ್ತೆ ಚುರುಕುಗೊಳ್ಳಲಿದೆ. ಕುಟುಂಬದವರೊಂದಿಗೆ ಉತ್ತಮ ಕಾಲ ಕಳೆಯುವಿರಿ. ಗ್ಲಾಮರ್ ಮತ್ತು ಮಾತಿನ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. 

3 /4

ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಗ್ರಹ ಕೂಡಾ ಶುಕ್ರ. ಆದ್ದರಿಂದ,  ಶುಕ್ರ ಸಂಕ್ರಮಣವು ತುಲಾ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಜನರ ಜೀವನದಲ್ಲಿ ವಸಂತ ಆರಂಭವಾಗಲಿದೆ. ಕಲೆ, ಸಿನಿಮಾ, ಮಾಧ್ಯಮ ಕ್ಷೇತ್ರದವರಿಗೆ ಶುಕ್ರ ಸಂಕ್ರಮಣ  ಭಾರೀ ಲಾಭ ನೀಡಬಹುದು. ವ್ಯಾಪಾರದಲ್ಲಿಯೂ ಹೆಚ್ಚಳವಾಗಲಿದೆ.   

4 /4

ಧನು ರಾಶಿ : ಧನು ರಾಶಿಯವರಿಗೆ ಶುಕ್ರನ ರಾಶಿ ಬದಲಾವಣೆಯು ಬಹಳಷ್ಟು ಲಾಭಗಳನ್ನು ನೀಡುತ್ತದೆ. ಧೈರ್ಯ, ಶಕ್ತಿ ಹೆಚ್ಚುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಆ ಕೆಲಸದಲ್ಲಿ ಉತ್ತಮ ಯಶಸ್ಸು ಕೂಡಾ ಸಿಗಲಿದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭವಾಗುವುದು.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)