No Ball : ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು No Ball ಎಸೆಯದ 5 ಶ್ರೇಷ್ಠ ಬೌಲರ್‌ಗಳಿವರು.!

Cricket News : ಕ್ರಿಕೆಟ್ ಅನಿಶ್ಚಿತತೆಗಳಿಂದ ಕೂಡಿದೆ. ಮುಂದೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕೇವಲ ಒಂದು ತಪ್ಪು, ನೋ-ಬಾಲ್ ಅಥವಾ ವೈಡ್ ಬೌಲಿಂಗ್ ತಂಡಕ್ಕೆ ಸೋಲನ್ನು ನೀಡಬಹುದು. ವಾಸ್ತವವಾಗಿ, ನೋ-ಬಾಲ್ ಬೌಲಿಂಗ್ ಅನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಬ್ಯಾಟಿಂಗ್ ತಂಡಕ್ಕೆ ಹೆಚ್ಚುವರಿ ರನ್ ನೀಡುತ್ತದೆ.

Cricket News : ಕ್ರಿಕೆಟ್ ಅನಿಶ್ಚಿತತೆಗಳಿಂದ ಕೂಡಿದೆ. ಮುಂದೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಕೇವಲ ಒಂದು ತಪ್ಪು, ನೋ-ಬಾಲ್ ಅಥವಾ ವೈಡ್ ಬೌಲಿಂಗ್ ತಂಡಕ್ಕೆ ಸೋಲನ್ನು ನೀಡಬಹುದು. ವಾಸ್ತವವಾಗಿ, ನೋ-ಬಾಲ್ ಬೌಲಿಂಗ್ ಅನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಬ್ಯಾಟಿಂಗ್ ತಂಡಕ್ಕೆ ಹೆಚ್ಚುವರಿ ರನ್ ನೀಡುತ್ತದೆ. ಅಲ್ಲದೇ ಬ್ಯಾಟ್ಸ್‌ಮನ್‌ನನ್ನು ನೋ-ಬಾಲ್‌ನಿಂದ ಔಟ್ ಎಂದು ನಿರ್ಣಯಿಸಲಾಗುವುದಿಲ್ಲ. ಈ 5 ಶ್ರೇಷ್ಠ ಬೌಲರ್‌ಗಳು ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ನೋ ಬಾಲ್ ಮಾಡಲಿಲ್ಲ. ವೃತ್ತಿಜೀವನದಲ್ಲಿ ನೋ ಬಾಲ್ ಬೌಲ್ ಮಾಡದ ಲೆಜೆಂಡರಿ ಕ್ರಿಕೆಟಿಗರ ಒಂದು ನೋಟ ಇಲ್ಲಿದೆ..
 

1 /5

ಡೆನ್ನಿಸ್ ಲಿಲ್ಲಿ : ಆಸ್ಟ್ರೇಲಿಯಾದ ಮಾರಕ ವೇಗಿ. ಡೆನ್ನಿಸ್ ಲಿಲ್ಲಿ, 70 ಟೆಸ್ಟ್ ಪಂದ್ಯಗಳಲ್ಲಿ ಒಂದೇ ಒಂದು ನೋಬಾಲ್ ಎಸೆಯದೆ 355 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಲಿಲ್ಲಿ 'ನೆವರ್-ಸೇ-ಡೈ' ವರ್ತನೆ ಮತ್ತು ಅಭಿಮಾನಿಗಳೊಂದಿಗೆ ಜನಪ್ರಿಯತೆಗೆ ಹೆಸರುವಾಸಿಯಾಗಿದ್ದರು.  

2 /5

ಕಪಿಲ್ ದೇವ್ : ಭಾರತದ ಅತ್ಯುತ್ತಮ ಆಲ್‌ರೌಂಡರ್ ಕಪಿಲ್ ದೇವ್ ಸಾರಥ್ಯದಲ್ಲಿ ಭಾರತ 1983 ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಅವರು 131 ಟೆಸ್ಟ್ ಮತ್ತು 225 ಏಕದಿನ ಪಂದ್ಯಗಳನ್ನು ಆಡಿದರು. ಆದರೆ ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಎಂದಿಗೂ ನೋ-ಬಾಲ್ ಹಾಕಲಿಲ್ಲ.  

3 /5

ಇಮ್ರಾನ್ ಖಾನ್ : ಪಾಕಿಸ್ತಾನದ ವೇಗದ ಬೌಲರ್ ಇಮ್ರಾನ್ ಖಾನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಥಾನವನ್ನು ಭದ್ರಪಡಿಸಿದ್ದಾರೆ. ಅವರು 88 ಟೆಸ್ಟ್, 175 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರ ವೃತ್ತಿಜೀವನದಲ್ಲಿ ಎಂದಿಗೂ ನೋ ಬಾಲ್ ಬೌಲ್ ಮಾಡಲಿಲ್ಲ.  

4 /5

ಇಯಾನ್ ಬೋಥಮ್ : ಇಂಗ್ಲೆಂಡ್‌ನ ಶ್ರೇಷ್ಠ ಆಲ್‌ರೌಂಡರ್ ಇಯಾನ್ ಬೋಥಮ್ ಅಭಿರುಚಿ ಮತ್ತು ಅಬ್ಬರದಿಂದ ಕ್ರಿಕೆಟ್ ಆಡಿದರು. ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರಂಜಿಸಿದರು. ತಮ್ಮ 16 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಬೋಥಮ್ ಒಂದೇ ಒಂದು ನೋ ಬಾಲ್ ಎಸೆಯಲಿಲ್ಲ. ಅವರು ಇಂಗ್ಲೆಂಡ್ ಪರ 102 ಟೆಸ್ಟ್ ಮತ್ತು 116 ODIಗಳನ್ನು ಆಡಿದ್ದಾರೆ.  

5 /5

ಲ್ಯಾನ್ಸ್ ಗಿಬ್ಸ್ : ವೆಸ್ಟ್ ಇಂಡೀಸ್ ದಂತಕಥೆ ಲ್ಯಾನ್ಸ್ ಗಿಬ್ಸ್ 79 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ವಿಕೆಟ್‌ಗಳ ಗಡಿಯನ್ನು ತಲುಪಿದ ಮೊದಲ ಸ್ಪಿನ್ನರ್ ಎಂಬ ಖ್ಯಾತಿ ಇವರದ್ದು. ಅವರ ಸುದೀರ್ಘ ಕ್ರಿಕೆಟ್  ವೃತ್ತಿಜೀವನದಲ್ಲಿ, ಗಿಬ್ಸ್ ಎಂದಿಗೂ ನೋ-ಬಾಲ್ ಬೌಲ್ ಮಾಡಲಿಲ್ಲ. ಲ್ಯಾನ್ಸ್‌ ಗಿಬ್ಸ್‌ ಒಂದೇ ಒಂದು ನೋ ಬಾಲ್ ಎಸೆಯದ ವಿಶ್ವದ ಏಕೈಕ ಸ್ಪಿನ್ನರ್ ಆಗಿದ್ದಾರೆ.