Home Remedy For Hangover: ಕ್ಷಣಾರ್ಧದಲ್ಲಿ ಹ್ಯಾಂಗೋವರ್ ಇಳಿಸಬೇಕೇ... ಇಲ್ಲಿವೆ ಮನೆ ಉಪಾಯ!

Hangover: ಸಾಮಾನ್ಯವಾಗಿ ಹ್ಯಾಂಗೊವರ್ ನಿಂದಾಗಿ ತಲೆನೋವು, ಕಣ್ಣು ಕೆಂಪಾಗುವಿಕೆ, ಸ್ನಾಯು ನೋವು, ಅತಿಯಾದ ಬಾಯಾರಿಕೆ, ಹೈಬಿಪಿ, ನಡುಕ, ಬೆವರು, ಬಿಕ್ಕಳಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಅಷ್ಟೇ ಅಲ್ಲ, ತಲೆತಿರುಗುವಿಕೆ ಮತ್ತು ಕಿರಿಕಿರಿಯ ಅನುಭವ ಕೂಡ ಆಗುತ್ತದೆ.
 

Hangover Home Remedies: ಪ್ರಸ್ತುತ ದೇಶಾದ್ಯಂತ ಮದುವೆ ಸೀಸನ್ ನಡೆಯುತ್ತಿದೆ. ಪ್ರತಿ ತಿಂಗಳು ಮದುವೆಯಲ್ಲಿ ಪಾಲ್ಗೊಳ್ಳಲು ಎಲ್ಲಾದರು ಒಂದು ಕಡೆ ಹೋಗಲೇಬೇಕು. ಪಾರ್ಟಿಯ ಈ ಕಾಲದಲ್ಲಿ ಮದ್ಯದ ಟ್ರೆಂಡ್ ಕೂಡ ತುಂಬಾ ಹೆಚ್ಚಾಗಿದೆ. ಕೆಲವರು ತುಂಬಾ ಆಲ್ಕೋಹಾಲ್ ಕುಡಿಯುತ್ತಾರೆ, ಬೆಳಗ್ಗೆ ಬೇಗನೆ ಎದ್ದ ಮೇಲೆ ಹ್ಯಾಂಗೊವರ್ ಬೇಗನೆ ಹೋಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಜನ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಇದರಿಂದ ಮುಜುಗರವನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಹ್ಯಾಂಗ್ ಓವರ್ ಕಡಿಮೆಯಾಗಿದೆ ಎಂಬಂತೆ ತೋರುತ್ತದೆ, ಆದರೆ ಆಲ್ಕೋಹಾಲ್ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ ಮತ್ತು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹ್ಯಾಂಗೊವರ್‌ನಿಂದ ತಲೆನೋವು, ಕಣ್ಣು ಕೆಂಪಾಗುವಿಕೆ, ಸ್ನಾಯು ನೋವು, ಅತಿಯಾದ ಬಾಯಾರಿಕೆ, ಹೈಬಿಪಿ, ನಡುಕ, ಬೆವರುವುದು, ಬಿಕ್ಕಳಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಮಾನಸಿಕವಾಗಿಯೂ ಅನೇಕ ಸಮಸ್ಯೆಗಳು ನಮ್ಮ ಮುಂದೆ ಬರುತ್ತವೆ. ಹೀಗಿರುವಾಗ ನೀವೂ ಕೂಡ ಮದ್ಯದ ಅಮಲನ್ನು ತೊಡೆದುಹಾಕಲು ಬಯಸುತ್ತಿದ್ದರೆ, ಕೆಳಗೆ ಸೂಚಿಸಲಾಗಿರುವ ಈ 5 ಮನೆ ಉಪಾಯಗಳನ್ನು ಅನುಸರಿಸಿ ನೋಡಿ,

 

ಇದನ್ನೂ ಓದಿ-ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಬೇಕೇ? ನಾರಿನಂಶ ಸಮೃದ್ಧ ಈ ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಿಂಬೆಹಣ್ಣು - ಮದ್ಯದ ಅಮಲು ಹೋಗಲಾಡಿಸಲು ನಿಂಬೆರಸ ತುಂಬಾ ಸಹಕಾರಿಯಾಗಿದೆ. ಲೆಮನ್ ಟೀ ಕುಡಿಯುವ ಮೂಲಕವೂ ಹ್ಯಾಂಗೊವರ್ ನಿವಾರಣೆಯಾಗುತ್ತದೆ. ಇದು ಆಲ್ಕೋಹಾಲ್ ಅನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ ಮತ್ತು ತ್ವರಿತ ಪರಿಹಾರವನ್ನು ನೀಡುತ್ತದೆ. ಒಂದು ಲೋಟ ತಣ್ಣೀರಿಗೆ ನಿಂಬೆರಸ ಬೆರೆಸಿ ಕುಡಿದರೆ, ಅಮಲು ದೂರಾಗುತ್ತದೆ.  

2 /5

ಶುಂಠಿ- ಕುಡಿತದ ನಂತರ ಉಂಟಾಗುವ ಚಡಪಡಿಕೆಯನ್ನು ಹೋಗಲಾಡಿಸುವ ಔಷಧೀಯ ಗುಣಗಳು ಶುಂಠಿಯಲ್ಲಿವೆ. ಮದ್ಯದ ಅಮಲು ಹೋಗಲಾಡಿಸಲು ಇದು ತುಂಬಾ ಉಪಯುಕ್ತವಾಗಿದೆ. ಶುಂಠಿ ಆಲ್ಕೋಹಾಲ್ ಅನ್ನು ಚೆನ್ನಾಗಿ ಜೀರ್ಣಿಸಿಕೊಳ್ಳುತ್ತದೆ, ಇದರಿಂದಾಗಿ ಹ್ಯಾಂಗೊವರ್ ಬೇಗ ಇಳಿದುಹೋಗುತ್ತದೆ.  

3 /5

ಪುದೀನಾ- ಬಿಸಿ ನೀರಿನಲ್ಲಿ 3 ರಿಂದ 4 ಪುದೀನಾ ಎಲೆಗಳನ್ನು ಸೇರಿಸಿ ಕುಡಿಯಿರಿ, ಮದ್ಯದ ಅಮಲು ಇಳಿದು ಹೋಗುತ್ತದೆ. ಇದನ್ನು ಬಳಸುವುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆ ಕೂಡ ನಿವಾರನೆಯಾಗುತ್ತದೆ. ಇದಲ್ಲದೆ ಇದರಿಂದ ಕರುಳುಗಳು ಸಾಕಷ್ಟು ಪರಿಹಾರವನ್ನು ಪಡೆಯುತ್ತವೆ. ಹ್ಯಾಂಗೊವರ್ ತೊಡೆದುಹಾಕಲು ಪುದೀನಾ ಸುಲಭವಾದ ಮಾರ್ಗವಾಗಿದೆ.  

4 /5

ಜೇನು- ಮದ್ಯದ ದುಷ್ಪರಿಣಾಮಗಳನ್ನು ತೆಗೆದುಹಾಕುವಲ್ಲಿ ಜೇನುತುಪ್ಪವು ಪರಿಣಾಮಕಾರಿಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದಾಗಿ ಆಲ್ಕೋಹಾಲ್ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಹ್ಯಾಂಗೊವರ್ ಕ್ಷಣಾರ್ಧದಲ್ಲಿ ಇಳಿಯುತ್ತದೆ.  

5 /5

ಹಣ್ಣುಗಳು- ನೀವು ಹ್ಯಾಂಗೊವರ್ ಅನ್ನು ತೊಡೆದುಹಾಕಲು ಬಯಸಿದರೆ ಹಣ್ಣುಗಳು ಸಹ ಪ್ರಯೋಜನಕಾರಿಯಾಗಿವೆ. ಆರೋಗ್ಯ ತಜ್ಞರ ಪ್ರಕಾರ ಸೇಬು ಮತ್ತು ಬಾಳೆಹಣ್ಣು ಮದ್ಯದ ಅಮಲು ಹೋಗಲಾಡಿಸಲು ತುಂಬಾ ಸಹಕಾರಿಯಾಗಿವೆ. ತಲೆನೋವಿನಲ್ಲಿ ಸೇಬು ತುಂಬಾ ಪ್ರಯೋಜನಕಾರಿ. ಬಾಳೆಹಣ್ಣಿನ ಶೇಕ್ ಅನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಹ್ಯಾಂಗೊವರ್ ನಿವಾರಣೆಯಾಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)