Holi 2023 ಬಳಿಕ ಗಜಕೇಸರಿ ಯೋಗ ನಿರ್ಮಾಣ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಪ್ರತಿ ಕಾರ್ಯದಲ್ಲೂ ಯಶಸ್ಸು!

Holi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಹೋಳಿ ಹಬ್ಬದ ಬಳಿಕ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ವಿಶೇಷವಾಗಿ  3 ರಾಶಿಗಳ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಕ್ಕೆ ಕಾರಣವಾಗಲಿದೆ. ಈ ಯೋಗದಿಂದ ಯಾವ ರಾಶಿಗಳ ಜನರ ಜೀವನದಲ್ಲಿ ಅಪಾರ ಹಣ ಹರಿದುಬರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
 

Gajkesari Rajyog 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಕಾಲಕ್ಕೆ ನಡೆಯುವ ವಿವಿಧ ಗ್ರಹಗಳ ರಾಶಿ ಪರಿವರ್ತನೆ ಮತ್ತು ಮೈತ್ರಿಯಿಂದ ಶುಭ-ಅಶುಭ ಯೋಗಗಳು ನಿರ್ಮಾಣಗೊಳ್ಳುತ್ತವೆ ಮತ್ತು ಇದರ ಪರಿಣಾಮ ಮಾನವ ಜೀವನ ಮತ್ತು ಭೂಮಿಯ ಮೇಲೆ ಗೋಚರಿಸುತ್ತದೆ. ಶೀಘ್ರದಲ್ಲಿಯೇ ಗುರು ಮತ್ತು ಚಂದ್ರನ ಸಂಯೋಜನೆಯಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಮಾರ್ಚ್ 8 ರಂದು ಹೋಳಿ ಹಬ್ಬ ಮತ್ತು ಅದರ ನಂತರ ಏಪ್ರಿಲ್ 22 ರಂದು ದೇವಗುರು ಬೃಹಸ್ಪತಿ ಮೀನ ರಾಶಿಯಿಂದ ಹೊರಬಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ.  ಇಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯಲ್ಲಿ ಗುರು-ಚಂದ್ರರು ಒಟ್ಟಿಗೆ ಇರುವುದರಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಕಂಡುಬರಲಿದೆ. ಆದರೆ 3 ರಾಶಿಗಳ ಜಾತಕದವರಿಗೆ ಈ ರಾಜಯೋಗ ನಿರ್ಮಾಣಗೊಳ್ಳುವುದರಿಂದ ಆಕಸ್ಮಿಕ ಧನಲಾಭ ಮತ್ತು ಜೀವನದಲ್ಲಿ ಪ್ರಗತಿ ಪ್ರಾಪ್ತಿಯಾಗಿದೆ. ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಮೂರು ದಶಕಗಳ ಬಳಿಕ ಶನಿ-ಗುರುವಿನ ವಿಶೇಷ ಸಂಯೋಜನೆ, 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /3

ಮೇಷ ರಾಶಿ- ಈ ಬಾರಿ ಹೋಳಿ ಹಬ್ಬದ ಬಳಿಕ, ಮೇಷ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಳಿವೆ. ಏಕೆಂದರೆ ನಿಮ್ಮ ಲಗ್ನ ಭಾವದಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗಲಿದೆ. ಅಲ್ಲದೆ, ಈ ಸಮಯವು ಪ್ರೇಮ ವ್ಯವಹಾರಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಮತ್ತೊಂದೆಡೆ, ಇದು ಅವಿವಾಹಿತರಿಗೆ ಮದುವೆಯ ಪ್ರಸ್ತಾಪಗಳನ್ನು ತರಲಿದೆ. ವಿವಾಹಿತರ ವೈವಾಹಿಕ ಜೀವನವೂ ಕೂಡ ಸಾಕಷ್ಟು ಸಂತೋಷದಿಂದ ಕೂಡಿರಲಿದೆ. ಇದರೊಂದಿಗೆ ನಿಮ್ಮ ನಿಂತುಹೋದ ಕಾರ್ಯಗಳು ಮತ್ತೆ ನೆರವೇರಲಿವೆ ಮತ್ತು ನಿಮಗೆ ನಿಮ್ಮ ಕೆಲಸದಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಹೊಸ ಕೆಲಸ ಪ್ರಾರಂಭಿಸಲು ಸಮಯ ಅನುಕೂಲಕರವಾಗಿದೆ.  

2 /3

ಮಿಥುನ ರಾಶಿ- ಗಜಕೇಸರಿ ರಾಜಯೋಗವು ನಿಮ್ಮ ಪಾಲಿಗೆ ಅತ್ಯಂತ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಆದಾಯ ಭಾವದಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಬಹುದು. ಸಮಾಜದಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗಲಿದೆ. ಇದರೊಂದಿಗೆ ವೈವಾಹಿಕ ಜೀವನದಲ್ಲೂ ಸಂತಸ ಮೂಡಲಿದೆ. , ನೀವು ಹಳೆಯ ಹೂಡಿಕೆಗಳಿಂದ ಪ್ರಯೋಜನಗಳನ್ನು ಪಡೆಯುವಿರಿ. ಅಲ್ಲದೆ, ಈ ಸಮಯದಲ್ಲಿ ವ್ಯವಹಾರದಲ್ಲಿ ಯಾವುದೇ ದೊಡ್ಡ ವ್ಯವಹಾರವನ್ನು ನೀವು ಅಂತಿಮಗೊಳಿಸಬಹುದು, ಇದರಿಂದಾಗಿ ಲಾಭದ ಸಾಧ್ಯತೆಗಳು ಇರಲಿವೆ. ಮತ್ತೊಂದೆಡೆ, ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ.  

3 /3

ಧನು ರಾಶಿ- ಗಜಕೇಸರಿ ರಾಜಯೋಗ ರೂಪುಗೊಳ್ಳುವಿಕೆಯಿಂದ ಧನು ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಬಹುದು. ಏಕೆಂದರೆ ಈ ಯೋಗವು ನಿಮ್ಮ ರಾಶಿಯ ಪಂಚಮ ಭಾವದಲ್ಲಿ ರೂಪುಗೊಳ್ಳಲಿದೆ. ಇದು ಸಂತತಿ, ಪ್ರೇಮ-ವಿವಾಹ ಮತ್ತು ಪ್ರಗತಿಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಉದ್ಯಮಿಗಳು ಈ ಸಮಯದಲ್ಲಿ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಪ್ರೀತಿಯ ಸಂಬಂಧಗಳಲ್ಲಿ ಸುಮಧುರತೆ ಇರಲಿದೆ. ಮತ್ತೊಂದೆಡೆ, ಮಗುವನ್ನು ಹೊಂದಲು ಬಯಸುವ ದಂಪತಿಗಳ ಸಂತಾನ ಪ್ರಾಪ್ತಿ ಆಸೆ ಈಡೇರುವ ಸಾಧ್ಯತೆ ಇದೆ. ಉದ್ಯಮಿಗಳು ಈ ಅವಧಿಯಲ್ಲಿ ವ್ಯವಹಾರದಲ್ಲಿ ಉತ್ತಮ ಆರ್ಡರ್ ಗಳನ್ನು ಪಡೆಯಬಹುದು, ಇದರಿಂದಾಗಿ ನಿಮ್ಮ ಆದಾಯವು ಹೆಚ್ಚಾಗಬಹುದು.(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)