ತ್ರಿಗ್ರಾಹಿ ಯೋಗದಿಂದ ಮುಂದಿನ 15 ದಿನಗಳವರೆಗೆ ಐದು ರಾಶಿಯವರ ಅದೃಷ್ಟ ಬೆಳಗಲಿದ್ದಾರೆ ಸೂರ್ಯ,ಶುಕ್ರ, ಬುಧ

 ಸೂರ್ಯನ ರಾಶಿಯ ಬದಲಾವಣೆಯಿಂದ ರೂಪುಗೊಂಡ ತ್ರಿಗ್ರಾಹಿ ಯೋಗವು 5 ರಾಶಿಯ ಜನರ ಅದೃಷ್ಟದ ಬಾಗಿಲು ತೆರೆಯುತ್ತದೆ.
 

ಬೆಂಗಳೂರು : ಗ್ರಹಗಳ ಅಧಿಪತಿ ಸೂರ್ಯ ಇಂದು, ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಈಗಾಗಲೇ ಧನು ರಾಶಿಯಲ್ಲಿ ಬುಧ ಮತ್ತು ಶುಕ್ರ ಗ್ರಹ ಇರುವುದರಿಂದ ಇದೀಗ ಸೂರ್ಯನ ಪ್ರವೇಶದಿಂದ ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತಿದೆ. ಸೂರ್ಯನ ರಾಶಿಯ ಬದಲಾವಣೆಯಿಂದ ರೂಪುಗೊಂಡ ತ್ರಿಗ್ರಾಹಿ ಯೋಗವು 5 ರಾಶಿಯ ಜನರ ಅದೃಷ್ಟದ ಬಾಗಿಲು ತೆರೆಯುತ್ತದೆ. ಜನವರಿ 14, 2023 ರ ಹೊತ್ತಿಗೆ, ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.  ಆದರೆ ಬುಧ ಮತ್ತು ಶುಕ್ರ ಡಿಸೆಂಬರ್ 2022 ರ ಅಂತ್ಯದವರೆಗೆ ಧನು ರಾಶಿಯಲ್ಲಿ ಇರುತ್ತಾರೆ. ಈ ರೀತಿಯಾಗಿ, ತ್ರಿಗ್ರಾಹಿ ಯೋಗದ ಫಲ ಮುಂದಿನ 15 ದಿನಗಳವರೆಗೆ 5 ರಾಶಿಯವರ ಮೇಲೆ ಆಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ: ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಅದೃಷ್ಟವನ್ನು ಮತ್ತಷ್ಟು ಬೆಳಗುತ್ತದೆ. ಅವರು ದೊಡ್ಡ ಮಟ್ಟದ ಸಾಧನೆಗಳನ್ನು ಸಾಧಿಸಬಹುದು. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಕನಸು ನನಸಾಗಬಹುದು. ಧರ್ಮದ ಕಡೆಗೆ ಒಲವು ಹೆಚ್ಚಾಗುತ್ತದೆ. 

2 /5

ವೃಷಭ: ಸೂರ್ಯನ ಸಂಚಾರದಿಂದ ರೂಪುಗೊಂಡ ತ್ರಿಗ್ರಾಹಿ ಯೋಗವು ಎಲ್ಲಾ ರೀತಿಯಲ್ಲೂ ಲಾಭವನ್ನು ನೀಡುತ್ತದೆ. ವೃತ್ತಿಯಲ್ಲಿ ಬಡ್ತಿಯಾಗಿ ವೇತನದಲ್ಲಿ ಹೆಚ್ಚಳವಾಗಬಹುದು. ನೀವಾಡುವ ಮಾತಿನಿಂದಲೇ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಆದಾಯ ಹೆಚ್ಚಲಿದೆ.    

3 /5

ತುಲಾ: ಸೂರ್ಯನ ಸಂಚಾರವು ತುಲಾ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೀಡುತ್ತದೆ. ನಿಮ್ಮ ಪ್ರಭಾವ ಹೆಚ್ಚಾಗಲಿದೆ. ವೃತ್ತಿಯಲ್ಲಿ ಲಾಭವಾಗಲಿದೆ. ಹೊಸ ಸಂಪರ್ಕಗಳನ್ನು ಸಾಧಿಸುವುದು ಸಾಧ್ಯವಾಗುತ್ತದೆ. ನಿಮ್ಮ ಕಾರ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತವೆ. 

4 /5

ಧನು ರಾಶಿ : ಸೂರ್ಯ ಧನು ರಾಶಿ ಪ್ರವೇಶಿಸುತ್ತಿರುವುದರಿಂದ ಧನು ರಾಶಿಯಲ್ಲಿಯೇ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತಿದೆ. ಧನು ರಾಶಿಯವರು ಇದರಿಂದ ಗರಿಷ್ಠ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರ ಸ್ಥಾನಮಾನ, ಹಣ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.   

5 /5

ಮೀನ: ಮೀನ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಹೆಚ್ಚಿನ ಲಾಭವಾಗಲಿದೆ. ತಾವು ಅಂದುಕೊಂಡ ಕೆಲಸವನ್ನು ಸಾಧಿಸುವುದು ಸುಲಭವಾಗಲಿದೆ. ವೃತ್ತಿಪರ ಜೀವನದಲ್ಲಿ ಉತ್ತಮ ಲಾಭವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.  ( ಸೂಚನೆ :  ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.